ಮಡಿಕೇರಿ, ಮೇ ೧೦: ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಎ.ಐ. ಮತ್ತು ಎಂ.ಎಲ್. ವಿಭಾಗದಿಂದ ``ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ'' ವಿಷಯದ ಕುರಿತು ಮೂರು ದಿನಗಳ ಕಾರ್ಯಾಗಾರ ನಡೆಯಿತು.

ಕೊಡವ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆಯ ಮಹತ್ವ, ದೈನಂದಿನ ಜೀವನದಲ್ಲಿ ಅಳವಡಿಕೆ ಮತ್ತು ಸಮಾಜದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಬೆಂಗಳೂರಿನ ಕೊಕ್ಕೆನ್ ರೊಬೋಟಿಕ್ಸ್ನ ಸಿ.ಇ.ಓ. ದರ್ಶನ್ ಕೊಕ್ಕೆಂಗಡ ಮಾತನಾಡಿ, ಕೃತಕ ಬುದ್ಧಿಮತ್ತೆ ಹೇಗೆ ನಮ್ಮ ದೈನಂದಿನ ಕೆಲಸಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಡೇಟಾಸೈನ್ಸ್ ಎಂ.ಐ.ಕ್ಯೂ. ಸಂಸ್ಥೆಯ ನಿರ್ದೇಶಕ ಬಿದ್ದಪ್ಪ ಮುತ್ತಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದೈನಂದಿನ ಜೀವನದಲ್ಲಿ ದತ್ತಾಂಶ ವಿಜ್ಞಾನವು ಹೇಗೆ ಸಹಕಾರಿ ಎಂಬುದನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜು ಮಾತನಾಡಿ, ಸ್ವಯಂಚಾಲಿತ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ವಿವರಿಸಿ, ಕಾರ್ಯಕ್ರಮದ ಯಶಸ್ಸಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಎ.ಐ. ವಿಭಾಗದ ಮುಖ್ಯಸ್ಥ ಡಾ. ಬಿ.ಬಿ. ರಾಮಕೃಷ್ಣ, ಅವಿನ್ಯಂ ವಿದ್ಯಾರ್ಥಿ ಒಕ್ಕೂಟದ ಸಂಯೋಜಕ ಪ್ರೊ. ಟಿ.ವಿ. ವಿಘ್ನೇಶ್, ವಿದ್ಯಾರ್ಥಿ ಸಂಘದ ನಾಯಕ ಮೋಹಿತ್ ಮಾಚಯ್ಯ ಹಾಗೂ ವಿಭಾಗದ ಪ್ರಾಧ್ಯಾಪಕರು ಹಾಜರಿದ್ದರು.