ಕಡಂಗ, ಮೇ ೧೦: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ೨೦ನೇ ವರ್ಷದ ಮುಸ್ಲಿಂ ಕ್ರಿಕೆಟ್ ಕಪ್‌ಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ; ಪಂದ್ಯಾವಳಿಯಲ್ಲಿ ಆಟಗಾರರು ಶಿಸ್ತಿನಿಂದ ಭಾಗವಹಿಸಿ ಇಂತಹ ದೊಡ್ಡ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವುದು ಪ್ರತಿಯೊಬ್ಬ ಆಟಗಾರನ ಕರ್ತವ್ಯ ಹಾಗೂ ಸಮುದಾಯ ಬಾಂಧವರು ಇಂತಹ ಕ್ರೀಡಾಕೂಟಗಳಿಂದ ಸೌಹಾರ್ದತೆ ಹೆಚ್ಚಾಗಲಿದೆ ಎಂದು ನುಡಿದರು

ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಹನೀಫ್ ಚೋಕಂಡಳ್ಳಿ ಮಾತನಾಡಿ ಯುವ ಪ್ರತಿಭೆಗಳು ಬೆಳೆಯಲು ಇಂತಹ ಕ್ರೀಡೆಗಳು ಅವಶ್ಯಕ ಎಂದು ನುಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ೧೯೯೬ರಿಂದ ಕೊಡಗಿನಲ್ಲಿ ಸಮಾಜ ಬಾಂಧವರು ಕೊಡಗಿನ ಎಲ್ಲಾ ಭಾಗದ ಸಮುದಾಯಗಳು ಸಮುದಾಯದ ನಡುವೆ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಕ್ರೀಡೆ ನಡೆಸುತ್ತಿವೆ ಎಂದು ನುಡಿದರು

ನಿವೃತ್ತ ಯೋಧ ಎ. ಎಂ. ಉಮ್ಮರ್ ಎಡಪಾಲ ಮಾತನಾಡಿ, ಕ್ರೀಡೆ ಯಶಸ್ವಿಯೊಂದಿಗೆ ವಿದ್ಯಾಭ್ಯಾಸಕ್ಕೂ ಕೂಡ ಹೆಚ್ಚಿನ ಒತ್ತನ್ನು ಸಮಾಜ ಬಾಂಧವರು ನೀಡಬೇಕು ಎಂದು ಕರೆ ನೀಡಿದರು.

ಕೊಡಗು ಜಿಲ್ಲಾ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು ಮಾತನಾಡಿ, ಸರ್ಕಾರವು ನಮ್ಮ ಸಮುದಾಯ ಬಾಂಧವರಿಗೂ ಕ್ರೀಡೆಯಲ್ಲಿ ವಿಶೇಷ ಅನುದಾನವನ್ನು ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ ಸ್ಥಾಪಕ ಅಬ್ದುಲ್ ರಶೀದ್ ಎಡಪಾಲ, ರಫೀಕ್ ಕೊಳುಮಂಡ, ಮೂರ್ನಾಡು ಪೊಲೀಸ್ ಅಧಿಕಾರಿ ಶ್ರೀನಿವಾಸ್, ನಾಸರ್ ಮಡಿಕೇರಿ, ಭಾಷಾ ಕುಶಾಲನಗರ, ಉಪಸ್ಥಿತರಿದರು.

ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆಯನ್ನು ಸಂಘದ ಕಾರ್ಯದರ್ಶಿ ಆದಂ ಕುಶಾಲನಗರ ನೆರವೇರಿಸಿದರು. ಮೊದಲ ದಿನದ ಪಂದ್ಯಾಟದಲ್ಲಿ ಎಮ್ಮೆಮಾಡು ತಂಡವನ್ನು ಸಿಂಗಲ್ ಸ್ಟಾರ್ ೪೦ ಎಕರೆ ಮಣಿಸಿ ಮುಂದಿನ ಹಂತಕ್ಕೆ ಪ್ರವೇಸಿತು.

೨ನೇ ಪಂದ್ಯದಲ್ಲಿ ಎಡಪಾಲ ಲೆಜೆಂಡ್ ತಂಡವನ್ನು ಮಣಿಸಿ ಗ್ರೀನ್ ಕಿಂಗ್ಸ್ ಚಿಟ್ಟಡೆ ವಿಜಯ ಶಾಲಿಯಾಯಿತು. ೩ನೇ ಪಂದ್ಯದಲ್ಲಿ ೪೦ ಎಕರೆ ಬಿ ತಂಡವನ್ನು ಮಣಿಸಿ ಎಡಪಾಲ ಕ್ರಿಕೆರ‍್ಸ್ ವಿಜಯಶಾಲಿ ಯಾಯಿತು. ೪ನೇ ಪಂದ್ಯದಲ್ಲಿ ಗಾಂಧಿ ಯುವಕ ಸಂಘವನ್ನು ಲಿಮ್ರ ಮೇಕೇರಿ ತಂಡ ಮಣಿಸಿತು. ೫ನೇ ಪಂದ್ಯದಲ್ಲಿ ರಾಕಿಂಗ್ ಬಾಯ್ಸ್ ಕುಂಜಿಲ ತಂಡವನ್ನು ಝೆಡ್‌ವೈಸಿ ಕೊಟ್ಟಮುಡಿ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ೬ನೇ ಪಂದ್ಯದಲ್ಲಿ ಹೊಸತೋಟ ತಂಡವನ್ನು ಮಣಿಸಿ ವಯಕೋಲ್ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು. -ನೌಫಲ್ ಕಡಂಗ