ಮಡಿಕೇರಿ ಮೇ ೧೦ : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ದಿನದ ಎರಡು ಪಂದ್ಯಗಳನ್ನು ಮುಂಜಾನೆ ನಗರದಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಿ ತಂಡಗಳಿಗೆ ಸಮಾನ ಅಂಕಗಳನ್ನು ಹಂಚಲಾಯಿತು.

ಭಾರೀ ಮಳೆಯಿಂದ ಮೈದಾನ ಸಂಪೂರ್ಣ ಕೆಸರುಮಯವಾಗಿ, ಕ್ರಿಕೆಟ್ ಆಡಲು ಅಸಾಧ್ಯವಾಗಿ ಪರಿಣಮಿಸಿದ ಹಿನ್ನೆಲೆ ಆಯೋಜಕರು ಪಂದ್ಯಗಳನ್ನು ರದ್ದುಗೊಳಿಸಿದರು. ದಿನದ ಮೊದಲ ಪಂದ್ಯ ಕೂರ್ಗ್ ಯುನೈಟೆಡ್ ಮತ್ತು ಕೊಡವ ವಾರಿರ‍್ಸ್ ನಡುವೆ ನಡೆಯಬೇಕಿತ್ತಾದರು, ಆಟ ನಡೆಸಲಾಗದÀ ಹಿನ್ನೆಲೆ ಎರಡೂ ತಂಡಗಳಿಗೆ ಸಮಾನ ಅಂಕಗಳನ್ನು ಹಂಚಲಾಯಿತು. ಕೂರ್ಗ್ ಬ್ಲಾಸ್ರ‍್ಸ್ ಮತ್ತು ರಾಯಲ್ ಟೈರ‍್ಸ್ ನಡುವಿನ ದಿನದ ದ್ವಿತೀಯ ಪಂದ್ಯವನ್ನು ರದ್ದುಗೊಳಿಸಿ, ಅಂಕಗಳನ್ನು ಹಂಚಿರುವುದಾಗಿ ಆಯೋಜಕರು ತಿಳಿಸಿದ್ದಾರೆ.