ವೀರಾಜಪೇಟೆ, ಮೇ ೧೦: ಅತ್ಯಾಚಾರÀ ಆರೋಪ ಎದುರಿ ಸುತ್ತಿರುವ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ. ರೇವಣ್ಣ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳು ವೀರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಂದರ್ಭ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್ ಮಾತನಾಡಿ, ಸಂಸದ ಪ್ರಜ್ವಲ್ ರೇವಣ್ಣ ತನಗಿರುವ ಅಧಿಕಾರ ಬಳಸಿಕೊಂಡು ನೂರಾರು ಮಹಿಳೆಯರನ್ನು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ವಿದ್ದು, ತಪ್ಪನ್ನು ಮುಚ್ಚಿ ಹಾಕಲು ವಿದೇಶಕ್ಕೆ ಪರಾರಿಯಾಗಿದ್ದಾರೆ. ಎಲ್ಲೇ ಇದ್ದರೂ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತಾಗಬೇಕು ಎಂದರು.
ಆರೋಪಿಗಳನ್ನು ಬಂಧಿಸುವಲ್ಲಿ ಮತ್ತು ತನಿಖೆಯಲ್ಲಿ ಯಾವುದೇ ರಾಜಕೀಯ ಪ್ರಭಾವ ಹಾಗೂ ಒತ್ತಡಕ್ಕೆ ಪೊಲೀಸರು ಕೆಲಸ ಮಾಡುವಂತೆ ಗೃಹ ಸಚಿವರು ಮತ್ತು ಸರಕಾರ ಸಹಕಾರ ನೀಡುವಂತಾಗಬೇಕು ಎಂದರು. ತಾಲೂಕು ಕಚೇರಿಯ ಶಿರಸ್ತೇದಾರ ಡಿ. ಅಮಿತಾ ರೈ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಕಳುಹಿಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ವೈ.ಎಸ್. ಪಾರ್ವತಿ, ಜೆ.ಆರ್. ಪ್ರೇಮ, ಜಿ. ರೇಖ, ಮುತ್ತು, ಹಾಜರಿದ್ದರು.
ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್, ಕಾರ್ಯದರ್ಶಿ ಎ.ಸಿ. ಸಾಬು, ಹೆಚ್.ಪಿ. ರಮೇಶ್ ಮಾತನಾಡಿದರು. ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.ಒಳಗಾಗದಂತೆ ಎಸ್.ಐ.ಟಿ. ಪೊಲೀಸರು ಕೆಲಸ ಮಾಡುವಂತೆ ಗೃಹ ಸಚಿವರು ಮತ್ತು ಸರಕಾರ ಸಹಕಾರ ನೀಡುವಂತಾಗಬೇಕು ಎಂದರು. ತಾಲೂಕು ಕಚೇರಿಯ ಶಿರಸ್ತೇದಾರ ಡಿ. ಅಮಿತಾ ರೈ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಕಳುಹಿಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ವೈ.ಎಸ್. ಪಾರ್ವತಿ, ಜೆ.ಆರ್. ಪ್ರೇಮ, ಜಿ. ರೇಖ, ಮುತ್ತು, ಹಾಜರಿದ್ದರು.
ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್, ಕಾರ್ಯದರ್ಶಿ ಎ.ಸಿ. ಸಾಬು, ಹೆಚ್.ಪಿ. ರಮೇಶ್ ಮಾತನಾಡಿದರು. ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.