ಅನಿಲ್ ಎಚ್.ಟಿ.
ಮಡಿಕೇರಿ, ಮೇ ೧೦: ಮಗಳ ಹಾಗೇ ನೋಡಿಕೊಂಡು ಹತ್ತನೇ ತರಗತಿ ಉತ್ತೀರ್ಣಳಾಗುವಂತೆ ಮಾಡಿದ್ದೆವು. ಫಲಿತಾಂಶ ಬಂದಾಗ ನಮ್ಮಷ್ಟು ಸಂತೋಷ ಈ ಪ್ರಪಂಚದಲ್ಲಿಯೇ ಯಾರಿಗೂ ಇರಲಿಲ್ಲ ಎಂಬAತಾಗಿತ್ತು ಆದರೆ ರಾತ್ರಿ ಬಂದ ಸುದ್ದಿಯಿಂದ ಈ ಸಂತೋಷವೆಲ್ಲಾ ಮಳೆ ನೀರಲ್ಲಿ ಕೊಚ್ಚಿಕೊಂಡು ಹೋದಂತಾಯಿತು ಬಾಳಿ ಬದುಕಬೇಕಾಗಿದ್ದ ಹುಡುಗಿಯ ಅಂತ್ಯ ಇಷ್ಟೊಂದು ಘೋರ ಆಗಬಾರದಿತ್ತು.
ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮೀನಾಳ ದುರಂತ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಶಾಲೆಯ ಶಿಕ್ಷಕ ವರ್ಗ ವ್ಯಕ್ತಪಡಿಸಿದ ಅನಿಸಿಕೆ ಇದು. ಮಡಿಕೇರಿ ತಾಲೂಕಿನ ಪುಟ್ಟ ಗ್ರಾಮಗಳಲ್ಲೊಂದಾದ ಕುಂಬಾರ ಗಡಿಗೆ ಸೂರ್ಲಬ್ಬಿ ಬಳಿ ನೆಲೆ ನಿಂತಿದ್ದ ಬೆಟ್ಟಗಳ ತಪ್ಪಲಿನಲ್ಲಿರುವ ನಯನ ಮನೋಹರ ತಾಣದಂತಿದೆ, ಈ ಗ್ರಾಮದಲ್ಲಿ ಹೆಚ್ಚಿನವು ಒಂಟಿ ಮನೆಗಳು, ಬಲು ದೂರಕ್ಕೊಂದರAತೆ ಇಲ್ಲಿ ಮನೆ ಕಟ್ಟಿಕೊಂಡು ಜನ ವಾಸಿಸುತ್ತಿದ್ದಾರೆ, ಇಂತ ಮನೆಗಳ ಪೈಕಿ ಒಂದಾಗಿದೆ ಸುಬ್ರಮಣಿ ಮತ್ತು ಜಾನಕಿ ದಂಪತಿ ಕಷ್ಟಪಟ್ಟು ಕಟ್ಟಿದ ಎರಡು ಕೋಣೆಯ ಜೋಪಡಿಯಂಥ ಮನೆ. ಈ ದಂಪತಿಗೆ ನಾಲ್ವರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು, ಈ ಪೈಕಿ ಕೊನೆಯವಳೇ ಮೀನಾ.
ಸೂರ್ಲಬ್ಬಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಕಲಿಯಲು ಪ್ರಾರಂಭಿಸಿದ್ದ ಮೀನಾ ಇದಕ್ಕಾಗಿ ಕುಂಬಾರಗಡಿಗೆ ಗ್ರಾಮದಲ್ಲಿದ್ದ ತನ್ನ ಮನೆಯಿಂದ ಶಾಲೆಗೆ ಕ್ರಮಿಸುತ್ತಿದ್ದ ದೂರ ೫ ಕಿ.ಮೀ. ಗಳಾಗಿತ್ತು. ಬೆಟ್ಟದ ನಡುವೆ ಕಚ್ಚಾ ರಸ್ತೆಯಲ್ಲಿಯೇ ಇಷ್ಟೊಂದು ದೂರ ಕಾಲ್ನಡಿಗೆಯಲ್ಲಿ ದಿನನಿತ್ಯ ಬರುತ್ತಿದ್ದ ಮೀನಾ ಶಾಲೆಯಲ್ಲಿ ಶಿಕ್ಷಕ ವರ್ಗದ ಮೆಚ್ಚಿನ ವಿದ್ಯಾರ್ಥಿನಿ ಕೂಡ ಆಗಿದ್ದಳು
ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಈಕೆಯ ಪರಿಚಯವಿತ್ತು, ಮೌನ ಸ್ವಭಾವದವಳು, ಯಾವ ತಂಟೆ ತಕರಾರು ಮಾಡಿದವಳಲ್ಲ, ಕಲಿಕೆಯಲ್ಲಿ ಆಸಕ್ತಿಯಿತ್ತು ಎಂದು ಸೂರ್ಲಬ್ಬಿ ಶಾಲೆಯ ಈ ಹಿಂದಿನ ಮುಖ್ಯ ಶಿಕ್ಷಕ ಟಿ. ಜಿ. ಪ್ರೇಮ್ ಕುಮಾರ್ ಸ್ಮರಿಸಿಕೊಳ್ಳುತ್ತಾರೆ.
ಕೆಲವೊಮ್ಮೆ ಶಾಲೆಗೆ ಸತತ ಗೈರಾಗುತ್ತಿದ್ದಳು, ಆಗೆಲ್ಲಾ ಶಿಕ್ಷಕಿಯರೇ ಅವಳ ಮನೆಗೆ ಆ ಕಷ್ಟದ ದಾರಿಯಲ್ಲಿ ನಡೆದುಕೊಂಡು ಹೋಗಿ ಯಾಕೆ ಮೀನಾ ಶಾಲೆಗೆ ಬರುತ್ತಿಲ್ಲ, ತರಗತಿ ತಪ್ಪಿಸಬೇಡ ಎಂದು ಮನವೊಲಿಸಿ ಕರೆದುಕೊಂಡು ಬರುತ್ತಿದ್ದೆವು ಎಂದು ಮೀನಾಳ ಮೆಚ್ಚಿನ ಶಿಕ್ಷಕಿಯಾಗಿದ್ದ ಅಮೀನಾ ಹೇಳಿದರು
ಹತ್ತನೇ ತರಗತಿಯಲ್ಲಿ ಮೀನಾ ಳೋರ್ವಳೇ ವಿದ್ಯಾರ್ಥಿನಿ, ಹೀಗಾಗಿ ಅದು ಕ್ಲಾಸ್ ರೂಮ್ ಎನ್ನುವುದಕ್ಕಿಂತ ಮನೆಯ ಆತ್ಮೀಯ ವಾತಾವರಣದಲ್ಲಿ ದ್ದಂತೆಯೇ ನಾವೆಲ್ಲಾ ಶಿಕ್ಷಕಿಯರು ಮೀನಾಳನ್ನು ಪಕ್ಕದಲ್ಲಿಯೇ ಕೂರಿಸಿಕೊಂಡೇ ಪಾಠ ಹೇಳಿ ಕೊಡುತ್ತಿದ್ದೆವು, ಪಾಠ ಕಲಿಕೆಯಲ್ಲಿ ಸ್ವಲ್ಪ ಕಷ್ಟ ಪಡುತ್ತಿದ್ದರೂ ಹೇಗೋ ಹತ್ತನೇ ತರಗತಿ ಪಾಸ್ ಮಾಡಬೇಕೆಂಬ ಇಚ್ಚೆ ಅವಳಂತೆ ನಮಗೂ ಇತ್ತು, ಗುರುವಾರ ಫಲಿತಾಂಶ ಪ್ರಕಟವಾದಾಗ ಮೀನಾ ತನ್ನ ಮನೆಯಲ್ಲಿ
(ಮೊದಲ ಪುಟದಿಂದ) ವಿವಾಹ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಳು. ಆಕೆಯ ಗ್ರಾಮದ ಗೆಳತಿಯ ಮೂಲಕ ಫಲಿತಾಂಶ ಅಂದರೆ ಮೀನಾ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ಳಾದ ವಿಚಾರ ತಿಳಿಸಿದೆವು ಎಂದೂ ಅಮೀನಾ ಮಾಹಿತಿ ನೀಡಿದರು
ನಮ್ಮ ಶಾಲೆಯ ಹತ್ತನೇ ತರಗತಿಯ ಏಕೈಕ ವಿದ್ಯಾರ್ಥಿನಿ ಪಾಸ್ ಆಗುವ ಮೂಲಕ ಶಾಲೆಗೆ ಶೇ. ೧೦೦ ರ ಫಲಿತಾಂಶ ಬಂದದ್ದು ಅತೀವ ಹೆಮ್ಮೆ ತಂದಿತ್ತು. ಕಳೆದ ವರ್ಷ ಕೂಡ ನಮ್ಮ ಶಾಲೆಗೆ ಶೇ. ೧೦೦ ರ ಫಲಿತಾಂಶ ದೊರಕಿತ್ತು, ಹೀಗಾಗಿ ಈ ಬಾರಿಯೂ ನಾವೆಲ್ಲಾ ಶಿಕ್ಷಕ ವೃಂದದವರು ಈ ಸಂಭ್ರಮವನ್ನು ಸೂರ್ಲಬ್ಬಿಯ ಗ್ರಾಮಸ್ಥರ ಸಂತೋಷದೊAದಿಗೆ ಹಂಚಿಕೊಳ್ಳುತ್ತಿದ್ದೆವು, ಆದರೆ ರಾತ್ರಿ ೯ ಗಂಟೆ ವೇಳೆಗೆ ಮೀನಾ ಹತ್ಯೆಯ ವಿಚಾರ ಬರಸಿಡಿಲಿನಂತೆ ಬಂದೆರಗಿತು, ದೇವರೇ ಇದೇನು ಮಾಡಿಬಿಟ್ಟೆ ಎಂದು ಶೋಕಿಸತೊಡಗಿದೆವು ಎಂದು ಸೂರ್ಲಬ್ಬಿ ಶಾಲಾ ಪ್ರಬಾರ ಮುಖ್ಯ ಶಿಕ್ಷಕ ರವೀಂದ್ರ ತಿಮ್ಮಪ್ಪ ಅಂಟರದಾನಿ ಹೇಳಿಕೊಂಡರು. ಪಾಠದಂತೆಯೇ ಮೀನಾಳಿಗೆ ಕ್ರೀಡೆಯಲ್ಲಿಯೂ ಸಾಕಷ್ಟು ಆಸಕ್ತಿಯಿತ್ತು, ವಲಯ ಮತ್ತು ಜಿಲ್ಲಾ ಮಟ್ಟದಲ್ಲಿಯೂ ಆಕೆಗೆ ಅನೇಕ ಬಹುಮಾನ ದೊರಕಿದ್ದವು. ರಾಜ್ಯಮಟ್ಟಕ್ಕೆ ತೆರಳಬೇಕಾಗಿತ್ತಾದರೂ ಅನಾರೋಗ್ಯದಿಂದಾಗಿ ತೆರಳಲು ಸಾಧ್ಯವಾಗಲಿಲ್ಲ ಎಂದೂ ರವೀಂದ್ರ ತಿಮ್ಮಪ್ಪ ನೆನಪಿಸಿಕೊಳ್ಳುತ್ತಾರೆ.
ನಾವು ಆಕೆಯನ್ನು ಉತ್ತೀರ್ಣಗೊಳಿಸಲು ಒಂದು ವರ್ಷವಿಡೀ ಪಟ್ಟ ಪರಿಶ್ರಮವನ್ನು ಮೀನಾ ಸಾವಿನ ಪ್ರಕರಣ ಮಳೆ ನೀರಲ್ಲಿ ಕೊಚ್ಚಿಕೊಂಡು ಹೋದಂತೆ ಮಾಡಿಬಿಟ್ಟಿದೆ, ೩೫ ವರ್ಷದ ಶಾಲಾ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಆಘಾತ ಸಂಭವಿಸಿದೆ ಎಂದೂ ಅವರು ಮರುಗಿದರು.
ಮೀನಾ ಹತ್ತನೇ ತರಗತಿಗೆ ಮೊದಲು ಬಂದಾಗ ಇಂಗ್ಲೀಷ್, ಹಿಂದಿ ಜತೆ ಕನ್ನಡವನ್ನೂ ಸರಿಯಾಗಿ ಬರೆಯಲು ಗೊತ್ತಿರಲಿಲ್ಲವಂತೆ, ಆದರೆ ಶಿಕ್ಷಕರ ಪರಿಶ್ರಮದಿಂದಾಗಿ ಈಕೆ ವಿದ್ಯೆ ಕಲಿತು ಎಸ್ ಎಸ್ ಎಲ್ ಸಿಯಲ್ಲಿ ಇಂಗ್ಲೀಷ್ನಲ್ಲಿ ೬೪, ಕನ್ನಡದಲ್ಲಿ ೭೪, ಗಣಿತ ಹಾಗೂ ಸಮಾಜದಲ್ಲಿ ೪೪ ಅಂಕಗಳನ್ನು ಪಡೆದು ಒಟ್ಟು ೩೧೪ ಅಂಕಗಳಿಸಿದ್ದಳು. ಆದರೆ ಈ ಯಶಸ್ಸನ್ನು ಸಂಭ್ರಮಿಸಲು ಕಾಲಾವಕಾಶವೇ ಮೀನಾಳಿಗೆ ದೊರಕದಾಯಿತು.
ಕುಂಬಾರಗಡಿಗೆ - ಸೂರ್ಲಬ್ಬಿ ಗ್ರಾಮಗಳಲ್ಲೀಗ ಸ್ಮಶಾನ ಮೌನ, ಗ್ರಾಮಸ್ಥರು ಘಟನೆಯ ಬಗ್ಗೆ ತಲೆಗೊಂದರAತೆ ಮಾತನಾಡುತ್ತಿದ್ದಾರೆ, ಯಾಕೆ ಹೀಗಾಯಿತು ಎಂಬ ವಿಶ್ಲೇಷಣೆಗಳೂ ಗ್ರಾಮೀಣ ಜನತೆಯಲ್ಲಿ ಕೇಳಿಬರುತ್ತಿದೆ,
ಗುರುವಾರ ಸಂಜೆ ಹಮ್ಮಿಯಾಲದಲ್ಲಿನ ತನ್ನ ಮನೆಯಲ್ಲಿದ್ದ ತಾಯಿಗೆ ಅಮ್ಮ ನೀನು ಚೆನ್ನಾಗಿರು, ನಾನಿನ್ನು ಬರುತ್ತೇನೆ ಎಂದು ಹೇಳಿ ಕೋವಿ ತೆಗೆದುಕೊಂಡು ಹೊರಟ ಪ್ರಕಾಶ್ ನಂತರ ಸೀದಾ ಅಂದು ಮಧ್ಯಾಹ್ನ ವಿವಾಹ ನಿಶ್ಚಿತಾರ್ಥ ನಡೆದಿದ್ದ ಮೀನಾಳ ಮನೆಗೆ ಬಂದ, ಆಗ ಸುಮಾರು ೫.೩೦ ಗಂಟೆಯಾಗಿತ್ತು. ಮನೆಯವರೊಂದಿಗೆ ಯಾಕೆ ವಿವಾಹ ಮುಂದೂಡಿದ್ದು ಎಂದು ರೇಗತೊಡಗಿದ, ಇದೇ ಸಂದರ್ಭ ಮೀನಾಳ ತಾಯಿ ಜಾನಕಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಪರಿಣಾಮ ಅವರ ಕೈಗೆ ಗಂಭೀರ ಗಾಯವಾಯಿತು. ಅಷ್ಟರಲ್ಲಿ ಹೊರ ಹೋಗಿದ್ದ ಸುಬಮಣಿ ಅವರು ಬಂದು ತಡೆಯತ್ನಿಸಿದ್ದಾಗ ಅವರ ಮೇಲೂ ಹಲ್ಲೆ ಮಾಡಿದ ಪ್ರಕಾಶ್ ಇವೆಲ್ಲವನ್ನೂ ಕೇವಲ ೧೦ ನಿಮಿಷದಲ್ಲಿಯೇ ಮಾಡಿದ್ದ.
ನಂತರ ಮೀನಾಳ ಕೈ ಎಳೆದವನೇ ಧರಧರನೆ ಮನೆಯಿಂದ ಹೊರಕ್ಕೆ ಎಳೆದೊಯ್ಯತೊಡಗಿದ, ಗಾಯಾಳುವಾಗಿದ್ದ ಮೀನಾಳ ತಂದೆ ತಾಯಿ ಅಸಹಾಯಕರಾಗಿ ಈ ಘಟನೆ ನೋಡುತ್ತಿದ್ದಂತೆಯೇ ಪ್ರಕಾಶ್ ಮನೆಯಿಂದ ಅಂದಾಜು ೧೫೦ ಅಡಿ ದೂರಕ್ಕೆ ಮೀನಾಳನ್ನು ಎಳೆದೊಯ್ದು ಮರ ಕಡಿಯುವ ಕತ್ತಿಯಿಂದ ಆಕೆಯ ತಲೆಯನ್ನು ಕೊಚ್ಚಿ ಹಾಕಿದ್ದನಂತೆ, ನಂತರ ಆರೋಪಿ ತನ್ನ ಕೈಯಲ್ಲಿ ಮೀನಾಳ ರುಂಡ ಎತ್ತಿಕೊಂಡು ಸ್ಥಳದಿಂದ ಪರಾರಿಯಾದ ಎಂದು ಪೋಷಕರು ಹೇಳುತ್ತಾರೆ.
ಒಂಟಿ ಮನೆಗಳಾದ್ದರಿಂದ ಈ ಘಟನೆಯನ್ನು ಬೇರೆಯವರಿಗೆ ತಿಳಿಸಲು ಸುಬ್ರಮಣ್ಯ ದಂಪತಿಗೆ ಸಾಕಷ್ಟು ಸಮಯ ಬೇಕಾಗಿತ್ತು, ಗಾಯಾಳುವಾಗಿ ರಕ್ತಸ್ರಾವದ ನಡುವೆ ಗ್ರಾಮಸ್ಥರಿಗೆ ವಿಚಾರ ತಿಳಿಸಿದ ಮೇಲೆ ಪೊಲೀಸರಿಗೂ ದೂರು ನೀಡಲಾಯಿತು, ಕುಂಬಾರಗಡಿಗೆ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಂಪರ್ಕ ಸಮಸ್ಯೆಯಾಗಿರುವುದು ಕೂಡ ವಿಚಾರ ಹೊರಪ್ರಪಂಚಕ್ಕೆ ತಿಳಿಯುವಲ್ಲಿ ಸಾಕಷ್ಟು ತಡವಾಯಿತು, ಮನೆಯಿಂದಲೇ ಮೀನಾಳ ಮೇಲೆ ಕತ್ತಿ ಪ್ರಹಾರ ನಡೆಸಿದ ಕುರುಹಾಗಿ ಮನೆಯಿಂದ ಹತ್ಯೆ ನಡೆದ ಸ್ಥಳದವರೆಗೂ ರಕ್ತ ಚೆಲ್ಲಾಡಿದೆ, ಹತ್ಯೆ ಮಾಡಿದ ಕತ್ತಿ ಅಲ್ಲಿಯೇ ದೊರಕಿದೆ.
ಕುಂಬಾರಗಡಿಗೆ, ಸೂರ್ಲಬ್ಬಿ, ಮುಟ್ಲು ಗ್ರಾಮಗಳಲ್ಲಿ ವಯಸ್ಸಾದವರೇ ಹೆಚ್ಚಾಗಿದ್ದಾರೆ, ಯುವಪೀಳಿಗೆ ಉದ್ಯೋಗ ಹುಡುಕಿಕೊಂಡು ನಗರ ಪ್ರದೇಶಗಳಿಗೆ ತೆರಳಿದ ಪರಿಣಾಮ ಕತ್ತಲಾಯಿತೆಂದರೆ ಹಿರಿಯ ನಾಗರಿಕರು ನಿದ್ದೆಗೆ ಜಾರುತ್ತಾರೆ, ದೂರದೂರದ ಮನೆಗಳಾದ್ದರಿಂದಾಗಿ ಏನೇ ಸಂಭವಿಸಿದರೂ ಪರಸ್ಪರ ತಿಳಿಯಲು ಸಾಕಷ್ಟು ಸಮಯಬೇಕು. ಇಂಥ ಪರಿಸ್ಥಿತಿಯಲ್ಲಿ ಮೀನಾಳ ಕಗ್ಗೊಲೆ ನಡೆದಿದೆ, ಕೊಡಗು ಮಾತ್ರವಲ್ಲ ಕರ್ನಾಟಕವೇ ಬೆಚ್ಚಿ ಬಿದ್ದಿದೆ, ಎಸ್ಎಸ್ಎಲ್ಸಿ ಫಲಿತಾಂಶ ಬಂದು ಸೂರ್ಲಬ್ಬಿಗೆ ಖ್ಯಾತಿ ತಂದಿದ್ದ ವಿದ್ಯಾರ್ಥಿನಿಯ ಬರ್ಬರ ಸಾವು ಸೂರ್ಲಬ್ಬಿಗೆ ಕುಖ್ಯಾತಿ ತರುವಂತಾಯಿತು ಎಂಬುದೇ ವಿಪರ್ಯಾಸ,ತಾಳಿ ಕಟ್ಟಬೇಕಾಗಿದ್ದ ಕೊರಳನ್ನೇ ಕತ್ತರಿಸುವಂಥ ಮನಸ್ಥಿತಿ ಎಂಥಹದ್ದು?
ಮೀನಾಳಿಗೂ ಪ್ರಕಾಶ್ಗೂ ವೈಮನಸ್ಸು ಇದ್ದಂತಿಲ್ಲ, ಯಾಕೆಂದರೆ ಇವರೀರ್ವರು ಕೆಲವು ತಿಂಗಳಿನಿAದ ಒಟ್ಟಿಗೆ ಸುತ್ತಾಡುತ್ತಿದ್ದರಂತೆ, ಪರಸ್ಪರ ಪ್ರೀತಿಸುತ್ತಿದ್ದ ಇವರಿಗೆ ವಿವಾಹ ಮಾಡಲು ಅವರ ಮನೆಯವರು ನಿರ್ಧರಿಸಿದ್ದರು. ಆದರೆ ವಿವಾಹಕ್ಕೆ ಸೂಕ್ತ ವಯಸ್ಸಾಗದೇ ೧೬ ವರ್ಷದ ಮೀನಾಳ ವಿವಾಹ ನಿಶ್ಚಿತಾರ್ಥ ನಡೆಯುವ ವಿಚಾರ ಸಹಾಯವಾಣಿ ಮೂಲಕ ತಿಳಿದೊಡನೇ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಧಾವಿಸಿ ಉಭಯ ಕಡೆಯವರಿಗೂ ಬುದ್ದಿವಾದ ಹೇಳಿ ೧೮ ವರ್ಷವಾದ ಬಳಿಕ ವಿವಾಹ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ, ಅದಾಗಲೇ ಕೇಕ್ ಕತ್ತರಿಸಿ, ಪಾರ್ಟಿ ಕೂಡ ಮಾಡಿದ್ದ ಉಭಯ ಕಡೆಯ ಸಂಬAಧಿಗಳು ಭೋಜನ ಸ್ವೀಕರಿಸಿಯೇ ಅಲ್ಲಿಂದ ತೆರಳಿದ್ದಾರೆ, ಬಹುಶಃ ತಾನು ಬಹಳಷ್ಟು ನಿರೀಕ್ಷೆ ಹೊಂದಿದ್ದ ಪ್ರಿಯತಮೆಯ ಜತೆ ವಿವಾಹ ವಿಳಂಬವಾಯಿತು ಎಂಬ ಆಕ್ರೋಶವೇ ಪ್ರಕಾಶ್ ಇಂಥ ನಿರ್ಧಾರ ಕೈಗೊಂಡು ತಲೆಯನ್ನೇ ಕತ್ತರಿಸುವಂಥ ಮನಸ್ಥಿತಿಗೆ ಬಂದಿರಬಹುದೇನೋ. ಇಷ್ಟಕ್ಕೂ ಪ್ರಕಾಶ್ ಕೋವಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿರುವುದು ಯಾವ ಕಾರಣಕ್ಕಾಗಿ? ಘಟನೆ ಸಂಭವಿಸಿದಾಗ ಪ್ರಕಾಶ್ ಜತೆ ಆತನ ಜೀಪ್ನಲ್ಲಿದ್ದ ಇನ್ನೋರ್ವ ಯಾರು? ಘಟನೆ ನಡೆಯುತ್ತಿದ್ದುದನ್ನು ನೋಡಿರಬಹುದಾದ ಆ ವ್ಯಕ್ತಿಗೆ ಇದನ್ನು ತಡೆಯಲು ಸಾಧ್ಯವಿತ್ತಾದರೂ ಆತ ಸುಮ್ಮನಿದ್ದದು ಪ್ರಕಾಶ್ ನಂತೆಯೇ ಆತನೂ ಆರೋಪಿಯಾದಂತೆ ಅಲ್ಲವೇ? ಪೊಲೀಸ್ ತನಿಖೆ ಇಂಥ ಪ್ರಶ್ನೆಗಳಿಗೆ ಉತ್ತರ ಹೇಳಬಹುದು
ತಾಳ್ಮೆ ವಹಿಸಿ ಕಾದಿದ್ದರೇ ಮೀನಾಳಿಗೆ ಇನ್ನೆರಡು ವರ್ಷಗಳಲ್ಲಿ ತಾಳಿ ಕಟ್ಟುವುದು ಸಾಧ್ಯವಿತ್ತು, ಕೊರಳಿಗೆ ತಾಳಿ ಕಟ್ಟಬೇಕಾದ ಕೈಗಳೇ ಅದೇ ಕೊರಳನ್ನು ಕತ್ತರಿಸುವಂಥದಾದ್ದು ವಿಧಿ ವಿಪರ್ಯಾಸ, ಕ್ರೂರ ಮನಸ್ಸಿಗೆ ನಿದರ್ಶನ.