ವೀರಾಜಪೇಟೆ, ಮೇ ೧೧: ವೀರಾಜಪೇಟೆಯ ಇಂಟೋಪೀಸ್ ನೃತ್ಯ ಟೀಂ ಹಾಗೂ ಟೆಕ್ವಾಂಡೊ ಟ್ರೆöÊನಿಂಗ್ ಸೆಂಟರ್ ಮತ್ತು ಪ್ರಗತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಪ್ರಗತಿ ಶಾಲಾ ಸಭಾಂಗಣದಲ್ಲಿ ೨೬ ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಗತಿ ಶಾಲಾ ವ್ಯವಸ್ಥಾಪಕರು ರಗ್ಬಿ ಆಟಗಾರ ಮಾದಂಡ ತಿಮ್ಮಯ ಅವರು ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಬೇಸಿಗೆ ರಜಾ ದಿನಗಳಲ್ಲಿ ಮನೆಯಲ್ಲಿ ಮೊಬೈಲ್ ಫೋನ್ ಹಿಡಿದು ಟಿವಿ ಮುಂದೆ ಕುಳಿತುಕೊಳ್ಳದೆ ಶಿಬಿರಗಳಲ್ಲಿ ಭಾಗವಹಿಸಿ ನೃತ್ಯ, ಕ್ರೀಡೆ, ನಾಟಕ ಇತ್ಯಾದಿ ಚಟುವಟಿಕೆಗಳನ್ನು ಕಲಿತು ಸಾಧನೆ ಮಾಡುವ ಮೂಲಕ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕೆAದು ಎಂದರು.
ಶಿಬಿರದಲ್ಲಿ ಅತಿಥಿಗಳಾಗಿ ಕಾವೇರಿ ಶಾಲೆಯ ಕಾರ್ಯದರ್ಶಿ ವಿನೋದ್, ಪ್ರಗತಿ ಶಾಲೆಯ ನಿರ್ವಾಹಕಿ ಸುಷ್ಮಾ ತಿಮ್ಮಯ್ಯ, ಚಿತ್ರಕಲಾ ಶಿಕ್ಷಕರಾದ ಕ್ಲಿಫರ್ಡ್ ಡಿಮೆಲ್ಲೂ, ಭಾನುಮತಿ ರಾಜನ್, ಕಾರ್ಯಕ್ರಮ ಆಯೋಜಕ ಇಂಟೋಪೀಸ್ ಟೀಂನ ವಿಷ್ಣು ಅವರುಗಳು ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಸುಮಾರು ೭೫ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅತಿಥಿಗಳು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಮಕ್ಕಳ ಪೋಷಕರು ಭಾಗವಹಿಸಿದ್ದರು.