ಗೋಣಿಕೊಪ್ಪ ವರದಿ, ಮೇ. ೧೦ : ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ರೋಚಕ ಪಂದ್ಯಾಟಗಳು ನಡೆದವು.
ಫಲಿತಾಂಶ
ಕೊಂಗAಡ ತಂಡಕ್ಕೆ ಆಲೆಮಾಡ ವಿರುದ್ದ ೭ ವಿಕೆಟ್ ಜಯ ದೊರೆಯಿತು. ಆಲೆಮಾಡ ೭ ವಿಕೆಟ್ ನಷ್ಟಕ್ಕೆ ೭೯ ರನ್, ಕೊಂಗAಡ ೩ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆಲೆಮಾಡ ಬೋಪಣ್ಣ ೩೨ ರನ್, ಕೊಂಗAಡ ಮಿಥುನ್ ೫ ವಿಕೆಟ್, ರಚನ್ ೨೭ ರನ್, ಆಲೆಮಾಡ ವಿತನ್ ೨ ವಿಕೆಟ್ ಪಡೆದರು. ಮಾಚಂಗಡ ತಂಡಕ್ಕೆ ಕಾಂಚೇರಿರ ವಿರುದ್ಧ ೬೦ ರನ್‌ಗಳ ಗೆಲುವು ದೊರೆಯಿತು. ಮಾಚಂಗಡ ೨ ವಿಕೆಟ್ ನಷ್ಟಕ್ಕೆ ೧೦೨ ಗುರಿ ನೀಡಿತು. ಕಾಂಚೇರಿರ ೭ ವಿಕೆಟ್ ಕಳೆದುಕೊಂಡು ೪೧ ಕ್ಕೆ ಕುಸಿಯಿತು. ಮಾಚಂಗಡ ಪೊನ್ನಣ್ಣ ೩೪ ರನ್, ಕಾಂಚೇರಿರ ಶರಣ್ ೨ ವಿಕೆಟ್ ಪಡೆದರು.
ಮಾಚೇಟಿರ (ಬಾಳುಗೋಡು) ತಂಡಕ್ಕೆ ಮಲ್ಲೇಂಗಡ ವಿರುದ್ಧ ೩೭ ರನ್‌ಗಳ ಜಯ ಸಿಕ್ಕಿತು. ಮಾಚೇಟಿರ ೩ ವಿಕೆಟ್ ನಷ್ಟಕ್ಕೆ ೧೦೬ ರನ್, ಮಲ್ಲೇಂಗಡ ೩ ವಿಕೆಟ್ ಕಳೆದುಕೊಂಡು ೭೦ ರನ್‌ಗಳಷ್ಟೆ ದಾಖಲಿಸಿತು. ಮಾಚೇಟಿರ ವಿಕಾಸ್ ೪೮ ರನ್, ಮಲ್ಲೇಂಗಡ ದರ್ಶನ್ ೧ ವಿಕೆಟ್, ಸೋಮಣ್ಣ ೨೯ ರನ್ ಹೊಡೆದರು. ತಂಬುಕುತ್ತೀರವು ಪೋರಂಗಡವನ್ನು ೧೦೩ ರನ್‌ಗಳಿಂದ ಸೋಲಿಸಿತು. ತಂಬುಕುತ್ತೀರ ೧ ವಿಕೆಟ್ ಕಳೆದುಕೊಂಡು ೧೩೩ ರನ್ ಗುರಿ ನೀಡಿತು. ಪೋರಂಗಡ ೮ ವಿಕೆಟ್ ನಷ್ಟಕ್ಕೆ ೨೯ ರನ್ ಗಳಿಸಿತು. ತಂಬುಕುತ್ತೀರ ಅನಿಲ್ ೧೦೬ ಸಿಡಿಸಿದರು. ಪೋರಂಗಡ ಪೃಥ್ವಿ ೧ ವಿಕೆಟ್, ಸೂರಜ್ ೨೦ ರನ್, ತಂಬುಕುತ್ತೀರ ದೀಪಕ್ ೪ ವಿಕೆಟ್ ಪಡೆದರು.
ಚೆನ್ನಪಂಡಕ್ಕೆ ಪಟ್ಟಡ ವಿರುದ್ಧ ೪೬ ರನ್‌ಗಳ ಜಯ ದೊರೆಯಿತು. ಚೆನ್ನಪಂಡ ೩ ವಿಕೆಟ್ ಕಳೆದುಕೊಂಡು ೧೩೫ ರನ್ ದಾಖಲಿಸಿತು. ಪಟ್ಟಡ ೬ ವಿಕೆಟ್ ನಷ್ಟಕ್ಕೆ ೯೦ ರನ್‌ಗಳಿಗೆ ಕುಸಿಯಿತು. ಚೆನ್ನಪಂಡ ದರ್ಶನ್ ಕುಶಾಲಪ್ಪ ೯೫ ರನ್, ಪಟ್ಟಡ ಕಾರ್ತಿಕ್ ೨೩ ರನ್, ಲಕ್ಷ್ ೧ ವಿಕೆಟ್ ಸಾಧನೆ ಮಾಡಿದರು. ಜಮ್ಮಡ ತಂಡ ಕರವಂಡವನ್ನು ೩೧ ರನ್‌ಗಳಿಂದ ಸೋಲಿಸಿತು. ಜಮ್ಮಡ ೬ ವಿಕೆಟ್ ನಷ್ಟಕ್ಕೆ ೮೪ ರನ್, ಕರವಂಡ ೭ ವಿಕೆಟ್ ಕಳೆದುಕೊಂಡು ೫೩ ಕ್ಕೆ ಕುಸಿಯಿತು.
ಚೆಕ್ಕೇರ ತಂಡವು ಹಂಚೇಟಿರವನ್ನು ೩೩ ರನ್‌ಗಳಿಂದ ಸೋಲಿಸಿತು. ಚೆಕ್ಕೇರ ೭ ವಿಕೆಟ್ ಕಳೆದುಕೊಂಡು ೭೨ ರನ್ ಗುರಿ ನೀಡಿತು. ಹಂಚೇಟಿರ ೮ ವಿಕೆಟ್ ಕಳೆದುಕೊಂಡು ೩೮ ಕ್ಕೆ ಕುಸಿಯಿತು. ಆಟ್ರಂಗಡಕ್ಕೆ ಮಲ್ಲಮಾಡ ವಿರುದ್ದ ೯ ವಿಕೆಟ್ ಜಯ ದೊರೆಯಿತು. ಮಲ್ಲಮಾಡ ೩ ವಿಕೆಟ್‌ಗೆ ೬೦ ರನ್, ಅಟ್ರಂಗಡ ೧ ವಿಕೆಟ್ ನಷ್ಟಕ್ಕೆ ಗುರಿ ಸಾಧನೆ ಮಾಡಿತು.
ಕಾಳಿಮಾಡ ತಂಡವು ಬೊಳ್ಳೇರ ತಂಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಬೊಳ್ಳೇರ ೧೦ ವಿಕೆಟ್ ನಷ್ಟಕ್ಕೆ ೬೫ ರನ್, ಕಾಳಿಮಾಡ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಓಡಿಯಂಡ ತಂಡ ಕುಟ್ಟಂಡ (ಕಾರ್ಮಾಡು) ತಂಡವನ್ನು ೪೦ ರನ್‌ಗಳಿಂದ ಮಣಿಸಿತು. ಓಡಿಯಂಡ ೫ ವಿಕೆಟ್ ನಷ್ಟಕ್ಕೆ ೯೩ ರನ್, ಕುಟ್ಟಂಡ ೮ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಕಳಕಂಡ ಚೆನಿಯಪಂಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಚೆನಿಯಪಂಡ ೩ ವಿಕೆಟ್ ನಷ್ಟಕ್ಕೆ ೩೬ ರನ್ ದಾಖಲಿಸಿತು. ಕಳಕಂಡ ೨.೨ ಓವರ್‌ಗಳಲ್ಲಿ ಗೆದ್ದು ಬೀಗಿತು. ಗೀಜಿಗಂಡಕ್ಕೆ ಮುಂಡಚಾಡೀರ ವಿರುದ್ದ ೬ ವಿಕೆಟ್ ಜಯ ದೊರೆಯಿತು. ಮುಂಡಚಾಡೀರ ೪ ವಿಕೆಟ್ ನಷ್ಟಕ್ಕೆ ೫೭ ರನ್, ಗೀಜಿಗಂಡ ೪ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು. ಗೀಜಿಗಂಡ ಅಯ್ಯಣ್ಣ ೩ ವಿಕೆಟ್, ಸತೀಶ್ ೨೫ ರನ್ ಹೊಡೆದರು.
ಕುಟ್ಟಂಡ (ಅಮ್ಮತ್ತಿ) ತಂಡಕ್ಕೆ ಕಾರೇರ ವಿರುದ್ಧ ೮ ವಿಕೆಟ್‌ಗಳ ಜಯ ದೊರೆಯಿತು. ಕಾರೇರ ೮ ವಿಕೆಟ್ ಕಳೆದುಕೊಂಡು ೨೯ ರನ್, ಕುಟ್ಟಂಡ ೪ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕುಟ್ಟಂಡ ಬಿದ್ದಪ್ಪ ೨೬ ರನ್ ಹೊಡೆದರು. ಮೂಕಳೇರವು ನಡಿಕೇರಿಯಂಡವನ್ನು ೧೬ ರನ್‌ಗಳಿಂದ ಮಣಿಸಿತು. ಮೂಕಳೇರ ೪ ವಿಕೆಟ್ ನಷ್ಟಕ್ಕೆ ೭೮ ರನ್, ನಡಿಕೇರಿಯಂಡ ೮ ವಿಕೆಟ್ ಕಳೆದುಕೊಂಡು ೬೩ ರನ್ ದಾಖಲಿಸಿತು. ಮೂಕಳೇರ ಹರ್ಷಿತ್ ೪೦ ರನ್, ನಡಿಕೇರಿಯಂಡ ಜೀವನ್ ೨ ವಿಕೆಟ್, ಮೂಕಳೇರ ಅಜಿತ್ ೩ ವಿಕೆಟ್ ಕಬಳಿಸಿದರು.
ಚೆರುಮಂದAಡಕ್ಕೆ ಅಡ್ಡೇಂಗಡ ವಿರುದ್ಧ ೨೬ ರನ್‌ಗಳ ಜಯ ದೊರೆಯಿತು. ಚೆರುಮಂದAಡ ೩ ವಿಕೆಟ್ ಕಳೆದುಕೊಂಡು ೭೯ ರನ್, ಅಡ್ಡೇಂಗಡ ೫ ವಿಕೆಟ್ ನಷ್ಟಕ್ಕೆ ೫೩ ರನ್ ದಾಖಲಿಸಿತು. ಚೆರುಮಂದAಡ ಗಣಪತಿ ೩೦ ರನ್, ಪೂವಯ್ಯ ೨೯, ಅಡ್ಡೇಂಗಡ ಅರ್ಜುನ್ ೨ ವಿಕೆಟ್, ಚೆರುಮಂದAಡ ಲೋಕೇಶ್ ೨ ವಿಕೆಟ್ ಪಡೆದರು. ನಂಬಿಯಪAಡಕ್ಕೆ ಪಾರುವಂಗಡ ವಿರುದ್ದ ೧೦ ವಿಕೆಟ್‌ಗಳ ಭರ್ಜರಿ ಗೆಲುವು ದೊರೆಯಿತು. ಪಾರುವಂಗಡ ೫ ವಿಕೆಟ್ ನಷ್ಟಕ್ಕೆ ೫೯ ರನ್, ನಂಬಿಯಪAಡ ೩.೩ ಓವರ್‌ಗಳಲ್ಲಿ ಗುರಿ ಸಾಧನೆ ಮಾಡಿತು. ಪಾರುವಂಗಡ ಕಾರ್ತಿಕ್ ೨೯ ರನ್, ನಂಬಿಯಪAಡ ಮಧನ್ ೨ ವಿಕೆಟ್, ವಿನುತ್ ೨೨ ರನ್ ದಾಖಲಿಸಿದರು.
ಚೇರಂಡ ತಂಡವು ಬಲ್ಲಂಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಬಲ್ಲಂಡ ೪ ವಿಕೆಟ್ ನಷ್ಟಕ್ಕೆ ೬೩ ರನ್, ಚೇರಂಡ ೧ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು. ಬಲ್ಲಂಡ ಸಚಿನ್ ೨೦, ಪ್ರದೀಪ್ ೧೯ ರನ್, ಚೇರಂಡ ಗಿರೀಶ್ ೩೧ ರನ್ ಹಾಗೂ ೨ ವಿಕೆಟ್ ಪಡೆದರು.
ಪಟ್ಟಡ ಕಾರ್ತಿಕ್, ಪೋರಂಗಡ ಸೂರಜ್ ಉತ್ತಪ್ಪ, ಮಲ್ಲೇಂಗಡ ಸೋಮಣ್ಣ, ಕಾಂಚೇರಿರ ಕೃಪನ್ ಅಚ್ಚಯ್ಯ, ಆಲೆಮಾಡ ಬೋಪಣ್ಣ, ಬಲ್ಲಂಡ ಸಚಿನ್ ಪೂಣಚ್ಚ, ಪಾರುವಂಗಡ ಕಾರ್ತಿಕ್, ಅಡ್ಡೇಂಗಡ ಆಕಾಶ್, ನಡಿಕೇರಿಯಂಡ ನಾಚಪ್ಪ, ಕಾರೇರ ವಿಕ್ರಮ್, ಮುಂಡಚಾಡೀರ ಸೂರಜ್, ಚೆನಿಯಪಂಡ ದಿಲನ್, ಕುಟ್ಟಂಡ ಧನು, ಬೊಳ್ಳೇರ ಉತ್ತಯ್ಯ, ಮಲ್ಲಮಾಡ ಜೋಯಪ್ಪ, ಹಂಚೇಟೀರ ಶಿನೋಜ್ ಕುಟ್ಪಪ್ಪ, ಕರವಂಡ ಕಿಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.