ಮಡಿಕೇರಿ, ಮೇ ೧೦: ಮಡಿಕೇರಿ ನಿವಾಸಿಯೋರ್ವರ ಆಧಾರ್ ಕಾರ್ಡ್ ಬಳಸಿ ಆ ಮೂಲಕ ಅಧಿಕೃತ ಟೆಲಿಕಾಮ್ ಪಿ.ಒ.ಎಸ್ನಿಂದ ಸಾವಿರಾರು ಮಂದಿಗೆ ಸಿಮ್ಗಳನ್ನು ಮಾರಾಟ ಮಾಡಿರುವ ಮಡಿಕೇರಿಯ ದಾಸವಾಳ ರಸ್ತೆಯ ನಿವಾಸಿ ಅಬ್ದುಲ್ ರೋಷನ್(೪೬)ನಿಂದ ಕೇರಳದ ಮಲಪುರಂ ಸೈಬರ್ ಠಾಣೆ ಪೊಲೀಸ್ ೪೦,೦೦೦ ಸಿಮ್ಕಾರ್ಡ್ಗಳನ್ನು, ೧೮೦ ಮೊಬೈಲ್ ಫೋನ್ಗಳನ್ನು ಹಾಗೂ ೬ ಬಯೋಮೆಟ್ರಿಕ್ ರೀರ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬ್ದುಲ್ ರೋಷನ್, ೨೦೨೨ರಿಂದಲೇ ಅನ್ಯರ ಆಧಾರ್ ಬಳಸಿ ಟೆಲಿಕಾಮ್ ಸಂಸ್ಥೆಗಳ ಪಿ.ಒ.ಎಸ್ ಖರೀದಿಸಿ ಆ ಮೂಲಕ ಅಧಿಕೃತ ಸಿಮ್ಗಳನ್ನು ಮಾರಾಟ ಮಾಡುವ ಜಾಲವೊಂದನ್ನು ಪ್ರಾರಂಭಿಸಿದ್ದ. ಮಡಿಕೇರಿ ನಿವಾಸಿ ಮನೋಜ್ ಎಂಬವರ ಆಧಾರ್ ಅನ್ನು ಕೂಡ ಇದೇ ರೀತಿ ಬಳಸಿ ಖರೀದಿಸಿದ್ದ ಪಿ.ಒ.ಎಸ್ ಮೂಲಕ ವಿತರಣೆಯಾದ ಸಿಮ್ನಿಂದ ಕೇರಳದಲ್ಲಿ ಸೈಬರ್ ವಂಚನೆ ಪ್ರಕರಣ ವರದಿಯಾಗಿದ್ದು, ಇದರ ಬೆನ್ನಹಿಂದೆ ಬಿದ್ದ ಕೇರಳದ ಮಲಪುರಂ ಪೊಲೀಸರಿಗೆ ಅಬ್ದುಲ್ನ ಆಧಾರ್ ದುರುಪಯೋಗ, ಸಾವಿರಾರು ಸಿಮ್ಗಳ ಮಾರಾಟ ಜಾಲ ಪತ್ತೆಯಾಗಿದೆ. ಆಧಾರ್ ದುರುಪಯೋಗ ಸಂಬAಧಿಸಿದAತೆ ಅಬ್ದುಲ್ ರೋಷನ್ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇರಳದ ಮಲಪುರಂ ಸೈಬರ್ ಪೊಲೀಸರು ಮೊನ್ನೆ ದಿನ ಮಡಿಕೇರಿಗೆ ಆಗಮಿಸಿ ಮಲಪುರಂನಲ್ಲಿ ನಡೆದ ರೂ.೧ ಕೋಟಿಗೂ ಅಧಿಕ ಮೌಲ್ಯದ ಸೈಬರ್ ವಂಚನೆ
(ಮೊದಲ ಪುಟದಿಂದ) ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಮಲಪುರಂಗೆ ಕರೆದೊಯ್ದಿದ್ದರು. ನಂತರ ಅವನ ಬಳಿಯಿಂದ ೪೦,೦೦೦ ಸಿಮ್ಕಾರ್ಡ್ಗಳನ್ನು, ೧೮೦ ಮೊಬೈಲ್ ಫೋನ್ಗಳನ್ನು ಹಾಗೂ ೬ ಬಯೋಮೆಟ್ರಿಕ್ ರೀರ್ಸ್ಗಳನ್ನು ವಶಕ್ಕೆ ಪಡೆದಿದ್ದಾರೆ.
ವಂಚಿಸಲೆAದೇ ಸಿಮ್ಕಾರ್ಡ್ಗಳ ಮಾರಾಟ ಸಂಶಯ - ಮಲಪುರಂ ಪ್ರಕರಣದಲ್ಲಿ ಅಬ್ದುಲ್ ರೋಷನ್ ರೂವಾರಿ..?
ಸಿಮ್ಕಾರ್ಡ್ ಪೋರ್ಟ್, ಹೊಸ ಸಿಮ್ಗಳನ್ನು ಖರೀದಿ ಮಾಡಲೆಂದು ಗ್ರಾಹಕರು ಈತ ಮಡಿಕೇರಿಯಲ್ಲಿ ನಿರ್ವಹಿಸುತ್ತಿದ್ದ ಅಂಗಡಿಗೆ ಬರುತ್ತಿದ್ದರು. ಮಡಿಕೇರಿಯ ಕೈಗಾರಿಕಾ ಬಡಾವಣೆಯಲ್ಲಿರುವ ಏರ್ಟೆಲ್ ಟೆಲಿಕಾಮ್ ಆಪರೇಟರ್ ಅಧಿಕೃತ ಅಂಗಡಿಯಲ್ಲೇ ಅಬ್ದುಲ್ ಹೊಸ ಸಿಮ್ಗಳನ್ನು ನೀಡುವುದು, ಸಿಮ್ಕಾರ್ಡ್ ಪೋರ್ಟ್ ಮಾಡಿಸುವ ಕೆಲಸವನ್ನು ಮಾಡುತ್ತಿದ್ದನು. ಇವೆರಡೂ ಕಾರ್ಯಗಳಿಗೆ ಕೆ.ವೈ.ಸಿ ಅಗತ್ಯವಿದ್ದು, ಗ್ರಾಹಕರ ಬೆರಳಚ್ಚು ಕೂಡ ಅಗತ್ಯವಿದೆ. ಬಯೋಮೆಟ್ರಿಕ್ ಮೂಲಕ ಬೆರಳಚ್ಚನ್ನು ಪಡೆಯುತ್ತಿದ್ದ ಅಬ್ದುಲ್, ಈ ಬೆರಳಚ್ಚು ಮಾಹಿತಿ ಮೂಲಕ ಅಮಾಯಕ ಗ್ರಾಹಕರ ಹೆಸರಿನಲ್ಲಿ ಸಿಮ್ಗಳನ್ನು ನೋಂದಣಿ ಮಾಡುತ್ತಿದ್ದ. ಇಂತಹ ಸಿಮ್ಗಳನ್ನು ಕೇರಳದ ಮಲಪುರಂನಲ್ಲಿ ನಡೆದ ವಂಚನೆ ಪ್ರಕರಣದಂತೆಯೇ ಇತರ ಆನ್ಲೈನ್ ವಂಚನೆಗಳಿಗೂ ಬಳಸುತ್ತಿದ್ದು ಅಮಾಯಕರ ಮೇಲೆ ಆರೋಪ ಬರುವಂತೆ ಮಾಡುವ ಖತರ್ನಾಕ್ ಕಾರ್ಯವನ್ನು ಮಾಡುತ್ತಿದ್ದ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಟೆಲಿಕಾಮ್ ಸಂಸ್ಥೆಗಳು ಒದಗಿಸುವ ಬೆರಳಚ್ಚು ಯಂತ್ರ ಅಥವಾ ಬಯೋಮೆಟ್ರಿಕ್, ಗ್ರಾಹಕರ ಬೆರಳಚ್ಚು ಪಡೆದು ಸಂಸ್ಥೆಗೆ ನೇರವಾಗಿ ರವಾನಿಸುತ್ತವೆಯಾದರೂ ಅಬ್ದುಲ್ ಇದರಲ್ಲಿಯೂ ಕೆಲ ಲೋಪದೋಷಗಳನ್ನು ಅರಿತು ಅವನ ಅಂಗಡಿಗೆ ಬಂದ ಗ್ರಾಹಕರಿಗೆ ಅರಿವಿಲ್ಲದೆಯೇ ಅವರುಗಳ ಬೆರಳಚ್ಚು ಮಾಹಿತಿಯನ್ನು ಬಳಸಿ ಅವರ ಹೆಸರಿನಲ್ಲಿ ಸಿಮ್ಗಳ ನೋಂದಣಿ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ತನ್ನ ಅಂಗಡಿಗೆ ಆಗಮಿಸುತ್ತಿದ್ದ ಗ್ರಾಹಕರ ಹೆಸರಿನಲ್ಲಿ ಪಿ.ಒ.ಎಸ್ ಸಿಸ್ಟಮ್ಗಳನ್ನು ಖರೀದಿಸುವುದಲ್ಲದೆ, ಪಿ.ಒ.ಎಸ್ ಮೂಲಕ ದೊರಕುವ ಅಧಿಕೃತ ಸಿಮ್ಗಳನ್ನೂ ಗ್ರಾಹಕರ ಹೆಸರಿನಲ್ಲಿ ನೋಂದಾಯಿಸಿ ವಂಚನೆ ಮಾಡುತ್ತಿದ್ದ ಎಂಬುದಾಗಿ ತಿಳಿದುಬಂದಿದೆ. ಇಂತಹದ್ದೇ ಸಿಮ್ ಮೂಲಕ ಕೇರಳದ ಮಲಪುರಂ ಗ್ರಾಮದ ವೆಂಗಾರ ಜಿಲ್ಲೆಯ ವ್ಯಕ್ತಿಯನ್ನು ವಾಟ್ಸಾö್ಯಪ್ ಗ್ರೂಪ್ವೊಂದಕ್ಕೆ ಸೇರಿಸಿ ಹಣ ದುಪ್ಪಟ್ಟಾಗುವ ಆಮಿಷವೊಡ್ಡಿ ರೂ.೧ ಕೋಟಿ ೮ ಲಕ್ಷದಷ್ಟು ವಂಚಿಸಿದ್ದಾನೆ ಎಂದು ಹೇಳಲಾಗಿದೆ.
ಮಡಿಕೇರಿಯಲ್ಲಿ ಮತ್ತಿಬ್ಬರು ಸಹಚರರು ಪರಾರಿ
ಈ ನಡುವೆ ಅಬ್ದುಲ್ರೋಷನ್ಗೆ ಮಡಿಕೇರಿಯಲ್ಲಿ ಸಹಕರಿಸುತ್ತಿದ್ದ ಬಿಹಾರ ಮೂಲದ ಈರ್ವರು ಯುವಕರು ಪರಾರಿಯಾಗಿದ್ದಾರೆ. ಮಡಿಕೇರಿಯ ಮಹದೇವಪೇಟೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಇವರುಗಳು ಅಬ್ದುಲ್ ರೋಷನ್ ಆಧಾರ್ ನೀಡಿಯೇ ಮನೆಯ ಬಾಡಿಗೆ ಕರಾರು ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಮನೆಯನ್ನು ಮಡಿಕೇರಿ ಪೊಲೀಸರು ಮಹಜರು ನಡೆಸಿದ್ದು, ಪರಾರಿಯಾದ ಯುವಕರ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿರುವುದಾಗಿ ತಿಳಿದುಬಂದಿದೆ. - ಪ್ರಜ್ವಲ್ ಜಿ.ಆರ್.