ಮಡಿಕೇರಿ, ಮೇ ೧೦: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ತರಬೇತಿ ನೀಡಲು ಕೌಶಲ್‌ಕರ್ ಪೋರ್ಟಲ್ ಅನ್ನು ಅನಾವರಣಗೊಳಿಸಿದೆ. ಈ ವೆಬ್‌ಪೋರ್ಟಲ್ ಮೂಲಕ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ೧೮ ರಿಂದ ೪೫ ವರ್ಷದೊಳಗಿನ ಅಭ್ಯರ್ಥಿಗಳು ಕೌಶಲ್‌ಕರ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಪೋರ್ಟಲ್‌ನಲ್ಲಿ ಹಲವಾರು ಜಾಬ್‌ರೋಲ್‌ಗಳಿದ್ದು, ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಕೌಶಲ್ಯ ಹಾಗೂ ಅನುಭವವನ್ನು hಣಣಠಿ://ತಿತಿತಿ.ಞಚಿushಚಿಟಞಚಿಡಿ.ಛಿom ನಲ್ಲಿ ನೋಂದಾಯಿಸಿಕೊAಡು ತರಬೇತಿ ಪಡೆಯಬಹುದು. ತರಬೇತಿ ಪೂರ್ಣಗೊಂಡ ನಂತರ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಎನ್.ಆರ್. ರವಿಕುಮಾರ್, ಜಿಲ್ಲಾ ಸಂಯೋಜಕರನ್ನು ಕಚೇರಿ ವೇಳೆಯಲ್ಲಿ ಮೊಬೈಲ್ ಸಂಖ್ಯೆ ೯೭೩೮೩೬೧೫೦೨ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.