ಮಡಿಕೇರಿ, ಮೇ ೧೦: ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಆದಿಶಕ್ತಿ ಆತ್ಮಿಕ ಶ್ರೀ ದೊಡ್ಡ ಮಾರಿಯಮ್ಮ ದೇವಿಯವರ ವಾರ್ಷಿಕ ಪೂಜಾ ಕಾರ್ಯಕ್ರಮ ತಾ. ೧೪ ರಂದು ನಡೆಯಲಿದೆ. ಬೆಳಿಗ್ಗೆ ೪ ಗಂಟೆಗೆ ಶೈವ ಪುಣ್ಯಹ, ಗಣಪತಿ ಹೋಮ, ದುರ್ಗಾ ಹೋಮ, ೧೦ ಗಂಟೆಗೆ ಗಂಗಾ ಪೂಜೆ, ೧೧ ಗಂಟೆಗೆ ಫಲಪಂಚಾಮೃತ ಅಭಿಷೇಕ, ೧೧.೩೦ಕ್ಕೆ ಪಾದ ಪ್ರತಿಷ್ಠಾಪನೆ, ೧೨ ಗಂಟೆಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗವಿದೆ. ಸಂಜೆ ೪ ಗಂಟೆಗೆ ಅಮ್ಮನವರ ಉತ್ಸವ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ತಾ. ೧೫ ರಂದು ಬೆಳಿಗ್ಗೆ ೭ ಗಂಟೆಯಿAದ ರಾತ್ರಿ ೮ ಗಂಟೆವರೆಗೆ ಅಮ್ಮನವರಿಗೆ ಹಣ್ಣುಕಾಯಿ ಸಮರ್ಪಣೆ, ಹರಕೆ ಸೇವೆ, ೧೧ಕ್ಕೆ ಜ್ಯೋತಿ ಪೂಜೆ, ೧೨ ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ.
ತಾ. ೧೭ ರ ಸಂಜೆ ೫ ಗಂಟೆಗೆ ಅಮ್ಮನವರ ಶಾಂತಿ ಪೂಜಾ ಕಾರ್ಯಕ್ರಮ, ೭ಕ್ಕೆೆ ಮಹಾಮಂಗಳಾರತಿ ೮ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ.