ಮಡಿಕೇರಿ, ಮೇ ೧೦: ನಿಯಂತ್ರಣ ಕಳೆದುಕೊಂಡ ಲಾರಿ ಮೂರು ಕಾರುಗಳಿಗೆ ಗುದ್ದಿದ ಘಟನೆ ನಗರದ ಮೈಸೂರು ರಸ್ತೆಯ ಸರಕಾರಿ ಬಸ್ ಡಿಪೋ ಬಳಿ ನಡೆದಿದೆ.

ಮೈಸೂರಿನಿಂದ ಮೊಟ್ಟೆ ಲೋಡ್ ಹೊತ್ತೊಯ್ದು ಬರುತ್ತಿದ್ದ ಲಾರಿಯು (ಕೆಎ-೧೨-ಬಿ-೪೪೩೦) ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಅಡ್ಡಾದಿಡ್ಡಿ ಚಾಲನೆಗೊಂಡ ಲಾರಿಯು ನಿಲುಗಡೆಗೊಂಡಿದ್ದ ಒಂದು ಕಾರು ಹಾಗೂ ಚಾಲನೆಯಲ್ಲಿದ್ದ ೨ ಕಾರುಗಳಿಗೆ ಗುದ್ದಿ ಕೆಲ ಅಂತರ ಸಾಗಿ ನಿಂತಿದೆ. ಇದರಿಂದ ೨ ಕಾರಿನ ಹಿಂಭಾಗ ಜಖಂಗೊAಡು ನಜ್ಜುಗುಜ್ಜಾಗಿದೆ. ಮತ್ತೊಂದು ಕಾರಿಗೆ ಅಲ್ಪಪ್ರಮಾಣದ ಹಾನಿಯಾಗಿದೆ. ಅಪಘಾತಕ್ಕೆ ಕಾರಣವಾದ ಲಾರಿಯ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಡಿಕೇರಿ ನಗರ ಹಾಗೂ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.