ವೀರಾಜಪೇಟೆ, ಮೇ ೧೧: ಕೊಡಗು ವಿಶ್ವವಿದ್ಯಾಲಯ ಪ್ರಾರಂಭವಾದ ನಂತರ ಕೊಡಗು ಎನ್.ಎಸ್.ಎಸ್. ಪ್ರತ್ಯೇಕಗೊಂಡ ಮೇಲೆ ಇದೇ ಪ್ರಥಮ ಬಾರಿಗೆ ರಾಷ್ಟಿçÃಯ ಭಾವೈಕ್ಯತಾ ಶಿಬಿರದಲ್ಲಿ ಕೊಡಗಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ತಾ. ೯ ರಂದು ಪ್ರಾರಂಭವಾಗಿರುವ ಶಿಬಿರವು ತಾ. ೧೫ ರವರಗೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆಯುವ ರಾಷ್ಟಿçÃಯ ಭಾವೈಕ್ಯತಾ ಶಿಬಿರದಲ್ಲಿ ಕೊಡಗಿನ ನಾಲ್ಕು ವಿದ್ಯಾರ್ಥಿಗಳು ಹಾಗೂ ಒಬ್ಬ ಎನ್.ಎಸ್.ಎಸ್. ಅಧಿಕಾರಿ ಭಾಗವಹಿಸುತ್ತಿದ್ದಾರೆ.
ಕಾವೇರಿ ಕಾಲೇಜು ಗೋಣಿಕೊಪ್ಪಲು ರಾಷ್ಟಿçÃಯ ಸೇವಾ ಯÃಜನೆಯ ವಿದ್ಯಾರ್ಥಿ ರಿಶು ಕಾವೇರಪ್ಪ, ಕಾವೇರಿ ಕಾಲೇಜು ವೀರಾಜಪೇಟೆ ಸ್ವಯಂ ಸೇವಕ ಮುತ್ತಣ್ಣ ಕೆ.ಕೆ. ಹಾಗೂ ಎನ್.ಎಸ್.ಎಸ್. ಅಧಿಕಾರಿ ಸುನಿಲ್ ಕುಮಾರ್ ಬಿ.ಬಿ., ಸೈಂಟ್ ಆನ್ಸ್ ವಿದ್ಯಾಸಂಸ್ಥೆ ಸ್ವಯಂ ಸೇವಕಿಯರಾದ ಲಾವಣ್ಯ ಬಿ.ಎನ್., ಜನಿತಾ. ಜಿ.ಎಂ. ಭಾಗವಹಿಸುತ್ತಾರೆ.
ಕೊಡಗು ವಿಶ್ವವಿದ್ಯಾಲಯದ ರಿಜಿಸ್ಟಾçರ್ ಡಾ. ಸೀನಪ್ಪ ಮತ್ತು ಎನ್.ಎಸ್.ಎಸ್ ಸಂಯೋಜನಾಧಿಕಾರಿ ಗುಣಶ್ರೀ. ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಕೊಡಗು ಎನ್.ಎಸ್.ಎಸ್. ನೋಡಲ್ ಅಧಿಕಾರಿ ವನಿತ್ ಕುಮಾರ್ ಎಂ.ಎನ್. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶಿಬಿರಕ್ಕೆ ಕಳುಹಿಸಿದ್ದಾರೆ.