ನಾಪೋಕ್ಲು, ಮೇ ೧೦: ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಲ್ಲಿ ಹಲವರು ಉನ್ನತ ಸ್ಥಾನ ತಲುಪಿದ್ದಾರೆ. ಶಿಬಿರಾರ್ಥಿಗಳ ಸಾಧನೆಗೆ ಪೋಷಕರ ಸಹಕಾರ ಅಗತ್ಯ ಎಂದು ರಾಷ್ಟಿçÃಯ ವೀಕ್ಷಕ ವಿವರಣೆಗಾರ, ಕ್ರೀಡಾಪಟು ಚೆಪ್ಪುಡಿರ ಕಾರ್ಯಪ್ಪ ಹೇಳಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಬುಧವಾರ ಆಯೋಜಿಸ ಲಾಗಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಟ್ಟ ಮಕ್ಕಳು ಮುಂದೆ ಬರಬೇಕಾದರೆ ಪೋಷಕರ ಸಹಕಾರ ಅತ್ಯಗತ್ಯ. ಮಕ್ಕಳು ಪ್ರೌಢಶಾಲೆಗೆ ಬರುವ ಹಂತದಲ್ಲಿ ಕ್ರೀಡಾಕೌಶಲ್ಯಗಳನ್ನು ಅರಿತಿರಬೇಕು. ಮಕ್ಕಳ ಉನ್ನತಿಯ ಬಗ್ಗೆ ಪೋಷಕರಿಗೆ ತಿಳುವಳಿಕೆ ಇರಬೇಕು. ಮಕ್ಕಳಿಗೆ ಬೇಸಿಗೆ ಶಿಬಿರ ಮಾತ್ರವಲ್ಲ. ಮಳೆಗಾಲದ ನಂತರದ ದಿನಗಳಲ್ಲೂ ಶಿಬಿರವನ್ನು ಆಯೋಜಿಸಿ ವಿವಿಧ ಕ್ರೀಡೆಗಳ ಬಗ್ಗೆ ತರಬೇತಿ ನೀಡುವಂತಾಗಬೇಕು ಎಂದ ಅವರು ಶಿಬಿರಾರ್ಥಿಗಳಿಗೆ ಅತ್ಯುತ್ತಮ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದರು.
ಕುಂಡ್ಯೋಳAಡ ಕೊಡವ ಕೌಟುಂಬಿಕ ಹಾಕಿ ಉತ್ಸವದ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಅವರ ನಿಸ್ವಾರ್ಥ ಸೇವೆ ಶ್ಲಾಘನೀಯ. ಕಳೆದ ೨೪ ವರ್ಷಗಳಿಂದ ಕ್ರೀಡಾ ತರಬೇತಿಯನ್ನು ಆಯೋಜಿಸುತ್ತಾ ಬಂದಿರುವ ಅಕಾಡೆ ಮಿಯ ಕಾರ್ಯವೂ ಅವಿಸ್ಮರಣೀಯ. ಇಂತಹ ಶಿಬಿರಗಳಿಂದ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದರು. ಕುಂಡ್ಯೋಳAಡ ಕೊಡವ ಕೌಟುಂಬಿಕ ಹಾಕಿ ಉತ್ಸವದ ಸಂಚಾಲಕ ದಿನೇಶ್ ಕಾರ್ಯಪ್ಪ ಮಾತನಾಡಿ, ಪ್ರತಿಯೊಬ್ಬರಲ್ಲೂ ದೌರ್ಬಲ್ಯಗಳು ಇರುತ್ತವೆ. ಆ ದೌರ್ಬಲ್ಯಗಳನ್ನು ಮೆಟ್ಟಿನಿಂತು ಗೆಲುವು ಸಾಧಿಸುವ ಛಲ ಇರಬೇಕು. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತಹ ಭಾವನೆ ಇರಬೇಕು ಎಂದರು.
ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೇದುರ ವಿಶಾಲ್ ಮಾತನಾಡಿ, ಮಕ್ಕಳ ಸಾಧನೆ ಹಿಂದೆ ಪೋಷಕರ ಪಾತ್ರ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಕುಂಡ್ಯೋಳAಡ ಕುಟುಂಬದ ಹಿರಿಯರಾದ ಸುಬ್ಬಯ್ಯ, ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಶಿಬಿರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕುಟ್ಟಂಜೆಟ್ಟಿರ ಫೂಕುಂಜಿ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಅಕಾಡೆಮಿ ಉಪಾಧ್ಯಕ್ಷ ಕಾಂಡAಡ ಜೋಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಶಿವಣ್ಣ ಎಂ.ಎಸ್., ಮಡಿಕೇರಿಯ ವಾಂಡರರ್ಸ್ ಕ್ಲಬ್ ಸದಸ್ಯರಾದ ಬೊಪ್ಪಂಡ ಶ್ಯಾಮ್ ಪೂಣಚ್ಚ, ಬಾಬು ಸೋಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ತರಬೇತುದಾರರಾದ ಕೇಟೋಳಿರ ಡಾಲಿ ಅಪ್ಪಚ್ಚ, ಅರೆಯಡ ಗಣೇಶ್ ಬೆಳ್ಳಿಯಪ್ಪ, ಕುಂಡ್ಯೋಳAಡ ಕವಿತಾ ಮುತ್ತಣ್ಣ, ಅಕಾಡೆಮಿ ನಿರ್ದೇಶಕರು, ಮಹಾಪೋಷಕರು, ಪೋಷಕರು, ಶಿಬಿರಾರ್ಥಿಗಳು ಇನ್ನಿತರರು ಇದ್ದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಗೌರವ ವಂದನೆಯನ್ನು ಹಾಕಿ ಉತ್ಸವದ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಸ್ವೀಕರಿಸಿದರು. ಈ ಸಂದರ್ಭ ಶಿಬಿರಾರ್ಥಿಗಳಿಂದ ಶಾರೀರಿಕ ಚಟುವಟಿಕೆಗಳ ಪ್ರದರ್ಶನ ನಡೆದವು. ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಪ್ರಮಾಣ ಪತ್ರಗಳನ್ನು ವಿತರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಾರ್ಷಿಕ ವರದಿಯನ್ನು ಶಿಬಿರಾರ್ಥಿ ಪಾಡಿಯಮ್ಮಂಡ ದುಂದುಬಿ ಬೆಳ್ಳಿಯಮ್ಮ ವಾಚಿಸಿದರು, ಬಿದ್ದಾಟಂಡ ಮಮತಾ ಚಿಣ್ಣಪ್ಪ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮವನ್ನು ಖಜಾಂಚಿ ಮಾಚೆಟ್ಟಿರ ಕುಶು ಕುಶಾಲಪ್ಪ ವಂದಿಸಿದರು.