*ಗೋಣಿಕೊಪ್ಪ, ಮೇ ೧೦: ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ತಾಲೂಕಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ತಾಲೂಕಿನ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದAತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊನ್ನಂಪೇಟೆ ಪಶುವೈದ್ಯ ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಭವಿಷ್ಯ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ ೨೦ನೇ ಜಾನುವಾರು ಗಣತಿಯ ಪ್ರಕಾರದಲ್ಲಿ ೧೫,೪೨೩ ಜಾನುವಾರುಗಳು ಮತ್ತು ೧೮೮೨ ಕುರಿ, ಮೇಕೆಗಳಿವೆ.
ಬೇಸಿಗೆಯಲ್ಲಿ ಈ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದAತೆ ಮೇವಿನ ಕಿರು ಪೊಟ್ಟಣಗಳಾದ ೧೦೦ ಎಟಿಎಂ ಹಾಗೂ ೬೫ ಸೋರ್ಗಂ ಮಿನಿ ಕಿಟ್ಗಳನ್ನು ನೀರಾವರಿ ಸೌಲಭ್ಯ ಹೊಂದಿರುವ ಮತ್ತು ಜಾನುವಾರು ಹೊಂದಿದ ರೈತ ಬಾಂಧವರಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಎ.ಟಿ.ಎಂ, ಏಕವಾರ್ಷಿಕ ಬೆಳೆಯಾಗಿದ್ದು ಮತ್ತು ಸೋರ್ಗಂ ಬಹುವಾರ್ಷಿಕ ಬೆಳೆಯಾಗಿರುತ್ತದೆ.
ಮೇವು ಬೀಜಗಳನ್ನು ಬಿತ್ತನೆ ಮಾಡಿದ ೬೦ ರಿಂದ ೭೫ ದಿನದೊಳಗೆ ಮೇವು ಕಟಾವಿಗೆ ಬರಲಿದೆ. ನಂತರ ಎರಡು ತಿಂಗಳಿಗೊಮ್ಮೆ ಮೂರ್ನಾಲ್ಕು ಬಾರಿ ಮೇವು ಕಟಾವು ಮಾಡಬಹುದಾಗಿದೆ. ಇದರಿಂದ ಜಾನುವಾರಗಳಿಗೆ ಮೇವಿನ ಕೊರತೆ ಉಂಟಾಗುವುದನ್ನು ತಪ್ಪಿಸ ಬಹುದಾಗಿದೆ ಎಂದು ಹೇಳಿದರು.
ಆಸಕ್ತ ರೈತರು ಪಶುವೈದ್ಯ, ಆಸ್ಪತ್ರೆ, ಪೊನ್ನಂಪೇಟೆ (೯೪೮೦೬೧೬೭೧೭) ಸಂಪರ್ಕಿಸಿ ತಮ್ಮ ಆಧಾರ್ ಕಾರ್ಡ್, ಆರ್.ಟಿ.ಸಿ. ಹಾಗೂ ಫ್ರೂಟ್ ಐಡಿ ಪ್ರತಿಗಳನ್ನು ಸಲ್ಲಿಸಿ ಮೇವಿನ ಕಿರು ಪೊಟ್ಟಣಗಳನ್ನು ಪಡೆಯುವಂತೆ ಮಾಹಿತಿ ಒದಗಿಸಿದರು.