ಗೋಣಿಕೊಪ್ಪ ವರದಿ, ಮೇ. ೧೨: ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ೧೧ ತಂಡಗಳು ಗೆದ್ದು ಮುನ್ನಡೆ ಪಡೆದುಕೊಂಡಿವೆ. ಸೋಮವಾರ ಮಹಿಳೆಯ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಅಜ್ಜಿಕುಟ್ಟಿರ, ಮುಕ್ಕಾಟಿರ (ಹರಿಹರ-ಬೆಳ್ಳೂರು), ಮಾಳೇಟಿರ (ಕೆದಮುಳ್ಳೂರು), ನಾಗಂಡ, ಅರಮಣಮಾಡ, ಅಳಮೇಂಗಡ, ಮಣವಟ್ಟಿರ, ಬಾಚಿನಾಡಂಡ ಸೆಣೆಸಲಿವೆ.
ಪುರುಷರ ವಿಭಾಗ : ಪಂದ್ಯAಡಕ್ಕೆ ಆಟ್ರಂಗಡ ವಿರುದ್ದ ೮ ವಿಕೆಟ್ಗಳ ಗೆಲುವು ದೊರೆಯಿತು. ಆಟ್ರಂಗಡ ೮ ವಿಕೆಟ್ ನಷ್ಟಕ್ಕೆ ೪೬ ರನ್, ಪಂದ್ಯAಡ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಪಂದ್ಯAಡ ಹರ್ಷನ್ ೩ ವಿಕೆಟ್ ಪಡೆದರು. ಬಲ್ಲಚಂಡವು ಪುಡಿಯಂಡವನ್ನು ೯ ವಿಕೆಟ್ಗಳಿಂದ ಪರಾಭವಗೊಳಿಸಿತು. ಪುಡಿಯಂಡ ೬ ವಿಕೆಟ್ ನಷ್ಟಕ್ಕೆ ೩೮ ರನ್, ಬಲ್ಲಚಂಡ ಉತ್ತಪ್ಪ ಬಾರಿಸಿದ ೩೦ ರನ್ಗಳ ನೆರವಿನಿಂದ ಗುರಿ ಮುಟ್ಟಿತು.
ಕೊಟ್ಟಂಗಡಕ್ಕೆ ನಂಬಿಯಪAಡ ವಿರುದ್ದ ೬೭ ರನ್ಗಳ ಭರ್ಜರಿ ಗೆಲುವು ದೊರೆಯಿತು. ಕೊಟ್ಟಂಗಡ ಪೂಣಚ್ಚ ೫೯ ರನ್, ರಂಜು ಬಾರಿಸಿದ ೩೨ ರನ್ಗಳ ನೆರವಿನಿಂದ ೩ ವಿಕೆಟ್ ಕಳೆದುಕೊಂಡು ೧೧೮ ರನ್ ಗುರಿ ನೀಡಿತು. ನಂಬಿಯಪAಡ ೭ ವಿಕೆಟ್ ನಷ್ಟಕ್ಕೆ ೫೦ ಕ್ಕೆ ಕುಸಿಯಿತು. ನಂಬಿಯಪAಡ ದರ್ಶನ್ ೨ ವಿಕೆಟ್, ಕೊಟ್ಟಂಗಡ ಸುಮಂತ್ ೩ ವಿಕೆಟ್ ಪಡೆದರು.
ಮಂಡುವAಡಕ್ಕೆ ಚೊಟ್ಟೆಯಂಡಮಾಡ ವಿರುದ್ದ ೧೦ ವಿಕೆಟ್ಗಳ ಜಯ ದೊರೆಯಿತು. ಚೊಟ್ಟೆಯಂಡಮಾಡ ೮ ವಿಕೆಟ್ಗೆ ೫೦ ರನ್ ಗುರಿ ನೀಡಿತು. ಮಂಡುವAಡ ೪.೫ ಓವರ್ಗಳಲ್ಲಿ ಗೆದ್ದು ಬೀಗಿತು. ಚೊಟ್ಟೆಯಂಡಮಾಡ ಭೀಮಯ್ಯ ೨೯ ರನ್ ಗಳಿಸಿದರು. ಚೆಕ್ಕೆರ ತಂಡವು ಮುದ್ದಂಡವನ್ನು ೯೬ ರನ್ಗಳಿಂದ ಸೋಲಿಸಿತು. ಚೆಕ್ಕೆರ ೪ ವಿಕೆಟ್ ನಷ್ಟಕ್ಕೆ ೧೩೮ ರನ್, ಮುದ್ದಂಡ ೮ ವಿಕೆಟ್ ನಷ್ಟಕ್ಕೆ ೪೮ ರನ್ ಗಳಿಸಿತು. ಚೆಕ್ಕೆರ ಕಾರ್ಯಪ್ಪ ೫೫ ರನ್, ಪೂವಣ್ಣ ೨ ವಿಕೆಟ್ ಪಡೆದರು.
ಚೀಯಕ್ಪೂವಂಡ ತಂಡವು ಚೇರಂಡವನ್ನು ೧೪ ರನ್ಗಳಿಂದ ಪರಾಭವಗೊಳಿಸಿತು. ಚೀಯಕ್ಪೂವಂಡ ೫ ವಿಕೆಟ್ ನಷ್ಟಕ್ಕೆ ೭೪ ರನ್, ಚೇರಂಡ ೪ ವಿಕೆಟ್ ಕಳೆದುಕೊಂಡು ೬೧ ರನ್ ಗಳಿಸಿತು. ಚೇರಂಡ ಸಂದೀಪ್ ೪೧ ರನ್, ನಾಚಪ್ಪ ೨ ವಿಕೆಟ್ ಕಬಳಿಸಿದರು. ಅಚ್ಚಪಂಡಕ್ಕೆ ಕಂಬೀರAಡ ವಿರುದ್ದ ೪ ವಿಕೆಟ್ ಗೆಲುವು ಲಭಿಸಿತು. ಕಂಬೀರAಡ ೩ ವಿಕೆಟ್ಗೆ ೮೧ ರನ್, ಅಚ್ಚಪಂಡ ೬ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಕಂಬೀರAಡ ತವಿಶ್ ೪೬ ರನ್ ಹಾಗೂ ೨ ವಿಕೆಟ್, ಅಯ್ಯಪ್ಪ ೨ ವಿಕೆಟ್, ಅಚ್ಚಪಂಡ ಮಿಥುನ್ ೫೩ ರನ್ ಗಳಿಸಿದರು. ಅಲ್ಲಂಗಡಕ್ಕೆ ಚಿಯಣಮಾಡ ವಿರುದ್ದ ೯ ವಿಕೆಟ್ ಜಯ ದೊರೆಯಿತು. ಚಿಯಣಮಾಡ ೩ ವಿಕೆಟ್ ನಷ್ಟಕ್ಕೆ ೫೩ ರನ್, ಅಲ್ಲಂಗಡ ೧ ವಿಕೆಟ್ ಕಳೆದುಕೊಂಡು ಸ್ವಗತ್ ಬಾರಿಸಿದ ೫೦ ರನ್ಗಳ ನೆರವಿನಿಂದ ಗೆದ್ದು ಬೀಗಿತು. ತನೀಶ್ ೨ ವಿಕೆಟ್ ಪಡೆದರು. ನೆರವಂಡವು ಮೊಣ್ಣಂಡವನ್ನು ೫೨ ರನ್ಗಳಿಂದ ಸೋಲಿಸಿತು. ನೆರವಂಡ ೨ ವಿಕೆಟ್ ನಷ್ಟಕ್ಕೆ ೧೦೩ ರನ್, ಮೊಣ್ಣಂಡ ೫ ವಿಕೆಟ್ ಕಳೆದುಕೊಂಡು ೫೧ ರನ್ ಗಳಿಸಿತು. ನೆರವಂಡ ಪ್ರಶಾಂತ್ ೫೦ ರನ್ ಹೊಡೆದರು.
ಕನ್ನಿಗಂಡಕ್ಕೆ ಮಣವಟ್ಟಿರ ವಿರುದ್ದ ೯ ವಿಕೆಟ್ಗಳ ಗೆಲುವು ಲಭಿಸಿತು. ಕನ್ನಿಗಂಡ ೭ ವಿಕೆಟ್ ನಷ್ಟಕ್ಕೆ ೫೫ ರನ್, ಮಣವಟ್ಟಿರ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಮಣವಟ್ಟಿರ ಅಪ್ಪಣ್ಣ ೩ ವಿಕೆಟ್, ತೇಜ್ ೩೧ ರನ್ ಗಳಿಸಿದರು. ಕಳಕಂಡಕ್ಕೆ ಓಡಿಯಂಡ ವಿರುದ್ದ ೪ ವಿಕೆಟ್ ಜಯ ಲಭಿಸಿತು. ಓಡಿಯಂಡ ೮ ವಿಕೆಟ್ ನಷ್ಟಕ್ಕೆ ೭೩ ರನ್, ಕಳಕಂಡ ೬ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕಳಕಂಡ ಮಧು ೪ ವಿಕೆಟ್, ಓಡಿಯಂಡ ಕಾರ್ಯಪ್ಪ ೨೮ ರನ್ ಗಳಿಸಿದರು.
ಕನ್ನಿಗಂಡ ಕಾರ್ತಿಕ್, ಮೊಣ್ಣಂಡ ನಂದನ್, ಚೀಯಣಮಾಡ ಬೋಪಣ್ಣ, ಕಂಬೀರAಡ ತವಿಶ್ ತಮ್ಮಯ್ಯ, ಚೇರಂಡ ಸಂದೀಪ್, ಮುದ್ದಂಡ ಬಿಶನ್, ಚೊಟ್ಟೆಯಂಡಮಾಡ ಭೀಮಯ್ಯ, ಓಡಿಯಂಡ ಗಗನ್, ಆಟ್ರಂಗಡ ಶರತ್, ಪುಡಿಯಂಡ ಸುಭಾಷ್ ಅಯ್ಯಪ್ಪ, ನಂಬಿಯಪAಡ ಬ್ರಿಜೇಶ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.