ವೀರಾಜಪೇಟೆ, ಮೇ ೧೩: ವಾಟ್ಸಾö್ಯಪ್‌ಗೆ ಬಂದ ಆ್ಯಪ್‌ವೊಂದನ್ನು ಕ್ಲಿಕ್ಕಿಸಿ ಬೆಳೆಗಾರರೊಬ್ಬರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ನಡೆದಿದೆ.

ವೀರಾಜಪೇಟೆ ನಗರದ ವಿಜಯನಗರ ಮೂರನೇ ಹಂತದ ನಿವಾಸಿ ರ‍್ವೀನ್ ಲೋಬೊ ಎಂಬವರೆ ಹಣ ಕಳೆದುಕೊಂಡ ವ್ಯಕ್ತಿ ಯಾಗಿದ್ದಾರೆ.

ಬೆಳೆಗಾರರಾದ ರ‍್ವೀನ್ ಲೋಬೊ ಅವರು ವೀರಾಜಪೇಟೆ ನಗರದ ಕೆನರಾ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದಾರೆ. ಅವರ ವಾಟ್ಸಾö್ಯಪ್‌ಗೆ ಎಪಿಕೆ ಫೈಲ್ಸ್ ಎಂಬ ಸಂದೇಶ ಬಂದಿದೆ. ಲೋಬೋ ಅವರು ಅರಿವಿಲ್ಲದೆ ಆ್ಯಪನ್ನು ಕ್ಲಿಕ್ ಮಾಡಿದ್ದಾರೆ. ಕೆಲವೆ ಕ್ಷಣದಲ್ಲಿ ನಾಲ್ಕು ಹಂತಗಳಲ್ಲಿ ೧ ಲಕ್ಷದ ೮೫ ಸಾವಿರ ಹಣವು ದೇಶದ ವಿವಿಧ ಭಾಗಗಳಲ್ಲಿರುವ ರಾಷ್ಟಿçÃಕೃತ ಬ್ಯಾಂಕ್ ಖಾತೆಗಳಿಗೆ ರವಾನೆಂiಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.

ಮನೆಯಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣ ಇಟ್ಟಲ್ಲಿ ಕಳ್ಳಕಾಕರ ಕಾಟ, ಬ್ಯಾಂಕ್ ಖಾತೆಯಲ್ಲಿ ಹಣಯಿಟ್ಟರೆ ಸಾಮಾಜಿಕ ಜಾಲತಾಣದ ಮೂಲಕ ಹಣ ಲಪಟಾಯಿಸುವ ಖದೀಮರ ಕಾಟ. ಜನಸಾಮಾನ್ಯರ ಹಣಕ್ಕೆ ಭದ್ರತೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಇಂತಹ ಖದೀಮರಿಂದ ಜನಸಾಮಾನ್ಯರಿಗೆ ವಂಚನೆ ಯಾಗದಂತೆ ಸೂಕ್ತ ಕಾನೂನು ತರಬೇಕು ಎಂದು ರ‍್ವೀನ್ ಲೋಬೊ ÀiÁಗಿದೆ. ತಾನು ಹೊಂದಿರುವ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆೆಯಾಗಿರುವುದನ್ನು ತಿಳಿದ ತಕ್ಷಣ ಸೈಬರ್ ಕ್ರೆöÊಂ ಕೇಂದ್ರಕ್ಕೆ ಸಂಪರ್ಕಿಸಿ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಬಾರಿ ಬಿಹಾರ ರಾಜ್ಯದ ಯುಟಿಕೆ ಬ್ಯಾಂಕ್‌ಗೆ ತಲಾ ರೂ. ೫೦ ಸಾವಿರ, ರೂ. ೫೦ ಸಾವಿರ ಕೇರಳ ರಾಜ್ಯದ ಅಂಗುಲಿಮಾಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ, ರೂ. ೨೦ ಸಾವಿರ ಐ.ಡಿ.ಐ.ಬಿ. ಪಶ್ಚಿಮ ಬಂಗಾಳಕ್ಕೆ ವರ್ಗಾವಣೆಗೊಂಡಿದ್ದು, ರೂ. ೧೫ ಸಾವಿರವನ್ನು ರಿಚಾರ್ಜ್ ಟಿಕೆಟ್ ಎಂಬುದಾಗಿ ಹಣ ಒತ್ತಾಯಿಸಿದ್ದಾರೆ.

ಪ್ರಸ್ತುತವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಆ್ಯಪ್‌ಗಳು ಚಾಲ್ತಿಯಲ್ಲಿವೆ. ಹ್ಯಾಕರ್‌ಗಳು ಖಾತೆದಾರರಿಂದ ಹಣ ಲಪಟಾಯಿಸಲು ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯುತ್ತಾರೆ. ಅಮಾಯಕರು ವಂಚನೆಯ ಸುಳಿಯಲ್ಲಿ ಸಿಲುಕಿ ಹಣ ಕಳೆದುಕೊಳ್ಳುತ್ತಾರೆ. ಆದ್ದರಿಂದ ಎಲ್ಲಾ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ಬ್ಯಾಂಕ್‌ಗಳು ತನ್ನದೆಯಾದ ಆ್ಯಪ್‌ಗಳನ್ನು ಖಾತೆದಾರರಿಗೆ ಬಳಕೆಗಾಗಿ ತಿಳಿಸುತ್ತದೆ. ಅವುಗಳನ್ನು ಮಾತ್ರ ಖಾತೆ ಬಳಕೆದಾರರು ಬಳಸಿದಲ್ಲಿ ಕೂಡಿಟ್ಟ ಹಣಕ್ಕೆ ಭದ್ರತೆ ಒದಗುತ್ತದೆ ಎಂದು ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ನಿಬೀನ್ ಹೇಳಿದ್ದಾರೆ.

- ಕಿಶೋರ್ ಕುಮಾರ್ ಶೆಟ್ಟಿ