ವೀರಾಜಪೇಟೆ, ಮೇ ೧೨: ಪಟ್ಟಣದ ಸೆಂಟ್‌ಆನ್ಸ್ ಪದವಿ ಕಾಲೇಜಿನ ಅಂತಿಮ ಬಿ.ಎಸ್.ಸಿ. ವಿದ್ಯಾರ್ಥಿನಿ ಯಶಿಕ ಅವರನ್ನು ಅವರ ನೃತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಅವರು ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು. ಯಶಿಕ ಇತ್ತೀಚಿಗೆ ಜಮ್ಮುವಿನಲ್ಲಿ ನಡೆದ ರಾಷ್ಟçಮಟ್ಟದ ನೃತ್ಯ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನವನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾಳೆ. ಮಾತ್ರವಲ್ಲದೆ ಅಂರ‍್ರಾಷ್ಟಿçÃಯ ಮಟ್ಟಕ್ಕೂ ಆಯ್ಕೆಯಾಗಿರುತ್ತಾಳೆ.

ಸನ್ಮಾನ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಉಪನ್ಯಾಸಕಿಯರಾದ ಹೇಮ, ನಿಶಾ, ಪ್ರತಿಮಾ ಇತರರು ಉಪಸ್ಥಿತರಿದ್ದರು.