ಕೂಡಿಗೆ, ಮೇ ೧೨: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಯಿಂದ ಜಿಲ್ಲೆ ಮತ್ತು ಪಕ್ಕದ ಜಿಲ್ಲೆಗಳಾದ ಮೈಸೂರು, ಹಾಸನ ಜಿಲ್ಲೆಗಳ ಆರು ತಾಲೂಕುಗಳ ವ್ಯಾಪ್ತಿಗಳಿಗೆ ಬೇಸಾಯಕ್ಕೆ ಸಂಬAಧಿಸಿದAತೆ ಎಡದಂಡೆ ಮತ್ತು ಬಲದಂಡೆಯ ಮೂಲಕ ನೀರನ್ನು ನಾಲೆಯ ಮೂಲಕ ಹರಿಸಲಾಗುತ್ತಿದೆ. ಆದರೆ ಅಣೆಕಟ್ಟೆಯ ಕಾಮಗಾರಿ ಪೂರ್ಣಗೊಂಡು ಮುಖ್ಯ ನಾಲೆಯಿಂದ ನೀರು ಹರಿಯುವ ಆರಂಭದಿAದ ಇದುವರೆಗೂ ಮುಖ್ಯ ನಾಲೆಯ ದುರಸ್ತಿ ಕಾಮಗಾರಿಗಳು ನಡೆಯದೆ, ನಾಲೆಯಲ್ಲಿ ನೀರು ಸೋರಿಕೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅನೇಕ ಕಡೆಗಳಿಂದ ತೋಡುಗಳ ಮೂಲಕ ನದಿಗೆ ನೀರು ಹರಿಯುತ್ತಿದ್ದು, ಇದರಿಂದಾಗಿ ಮುಖ್ಯ ನಾಲೆಯಲ್ಲಿ ನೀರಿನ ಹರಿಯುವಿಕೆ ಪ್ರಮಾಣವು ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೂ. ೪೯ ಕೋಟಿ ವೆಚ್ಚದಲ್ಲಿ ಮುಖ್ಯ ನಾಲೆಯ ದುರಸ್ತಿ, ಕಾಮಗಾರಿ ಜೊತೆಗೆ ರೂ. ೮ ಕೋಟಿ ವೆಚ್ಚದ ಕಟ್ ಆ್ಯಂಡ್ ಕವರ್ (ಬ್ಲಾಕ್ ಮಾದರಿಯ ನಾಲೆಯ) ಕಾಮಗಾರಿ ಆರಂಭಗೊAಡಿದ್ದು ಭರದಿಂದ ಸಾಗುತ್ತಿದೆ.

ಹಾರಂಗಿಯ ಅಣೆಕಟ್ಟೆಯ ಮುಖ್ಯ ನಾಲೆಯ ಒಂದನೆಯ ತೂಬಿನಿಂದ ಆರನೇ ತೂಬಿನವರೆಗೆ ದುರಸ್ತಿ, ಮತ್ತು ಮುಖ್ಯ ನಾಲೆಯ ಮೇಲ್ಬಾಗದಲ್ಲಿ ರಸ್ತೆಯ ನಿರ್ಮಾಣ. ವಿವಿಧ ಭಾಗಗಳಲ್ಲಿ ಕಿರುಸೇತುವೆ ನಿರ್ಮಾಣ, ಸೇರಿದಂತೆ ಮುಖ್ಯ ನಾಲೆಯ ಎರಡೂ ಬದಿಗಳಲ್ಲಿ ಕಾಂಕ್ರೀಟಿಕರಣ, ಮುಖ್ಯ ನಾಲೆಯು ಕಿರಿದಾದ ಸ್ಥಳಗಳಲ್ಲಿ ಬೆಟ್ಟ ಕುಸಿಯದ ಹಾಗೆ ಆ ಸ್ಥಳದಲ್ಲಿ ಒಳಭಾಗದಲ್ಲಿ ನಾಲೆಯ ನಿರ್ಮಾಣ ಅದೇ ಜಾಗದಲ್ಲಿ ಮೇಲ್ಭಾಗದಲ್ಲಿ ಸಂಪೂರ್ಣ ಮುಚ್ಚುವಿಕೆಯ ಮೂಲಕ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ಕಾಮಗಾರಿಗಳು ಇಲಾಖೆಯ ಕ್ರಿಯಾ ಯೋಜನೆಯ ಅನುಗುಣವಾಗಿ ನಡೆಯುತ್ತಿದೆ. ಈಗಾಗಲೇ ಮೂರನೆಯ ತೂಬಿನವರೆಗೆ ಕಾಮಗಾರಿಯು ನಡೆದಿದೆ.

ರೂ. ೮ ಕೋಟಿ ವೆಚ್ಚದಲ್ಲಿ ಬ್ಯಾಡಗೊಟ್ಟ ಗ್ರಾಮದ ಸಮೀಪದಲ್ಲಿರುವ ೧೫೦ ಮೀಟರ್ ಆಳದಲ್ಲಿ ಹೋಗಿರುವ ಮುಖ್ಯ ನಾಲೆಯ ಕಾಮಗಾರಿಯು ಆರಂಭಗೊAಡಿದೆ. ಚೌಕಾಕಾರದಲ್ಲಿ ನಾಲೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ಕಾಮಗಾರಿ ಪ್ರಥಮ ಬಾರಿಗೆ ನಡೆಯುತ್ತಿದೆ.

ಈ ಸಾಲಿನಲ್ಲಿ ರೈತರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವ ಎಲ್ಲಾ ಯೋಜನೆ ಅನು ಗುಣವಾಗಿ ಕಾಮಗಾರಿಗಳು ಆರಂಭಗೊAಡಿವೆ ಎಂದು ಹಾರಂಗಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿ ಯಂತರ ಇ. ಪುಟ್ಟಸ್ವಾಮಿ ತಿಳಿಸಿ ದ್ದಾರೆ. ಕಾಮಗಾರಿ ಪರಿಶೀಲನೆ ವೇಳೆ ಕಾವೇರಿ ನೀರಾವರಿ ನಿಗಮದ ಹಾರಂಗಿ ನೀರಾವರಿ ಇಲಾಖೆಯ ಅಭಿಯಂತರ ಕೆ.ಕೆ. ರಘುಪತಿ, ಸಹಾಯಕ ಅಭಿ ಯಂತರ ದೇವೇಗೌಡ, ಸಹಾ ಯಕ ಕಾರ್ಯಪಾಲಕ ಅಭಿ ಯಂತರ ಇ. ಪುಟ್ಟಸ್ವಾಮಿ, ಸೇರಿ ದಂತೆ ಸಹಾ ಯಕ ಇಂಜಿನಿ ಯರ್‌ಗಳು, ಗುತ್ತಿಗೆದಾರರ ಮೇಲ್ವಿಚಾರಕರು ಹಾಜರಿದ್ದರು.

- ಕೆ.ಕೆ. ನಾಗರಾಜಶೆಟ್ಟಿ.