ಮಡಿಕೇರಿ, ಮೇ ೧೩: ಫೆಬ್ರವರಿಯಲ್ಲಿ ವಿಸ್ತರಣೆಯಾಗಿದ್ದ ‘ಹೈ ಸೆಕ್ಯೂರಿಟಿ ರಿಜಿಸ್ಟೆçÃಷನ್ ಪ್ಲೇಟ್’ (ಹೆಚ್.ಎಸ್.ಆರ್.ಪಿ.) ಅಳವಡಿಕೆ ದಿನಾಂಕದ ಗಡುವು ಇದೀಗ ಮುಕ್ತಾಯ ಹಂತಕ್ಕೆ ತಲುಪುತ್ತಿದ್ದು, ೨೦೧೯ರ ಮಾರ್ಚ್ ೩ ರ ಬಳಿಕ ರಸ್ತೆಗಿಳಿದ ವಾಹನಗಳಿಗೆ ತಡಮಾಡದೆ ಹೆಚ್.ಎಸ್.ಆರ್.ಪಿ. ಅಳವಡಿಸಿ ದಂಡ ತೆರುವುದರಿಂದ ತಪ್ಪಿಸಿಕೊಳ್ಳಿ.
ಹೌದು.. ಮೇ ೩೦ ಹೆಚ್.ಎಸ್.ಆರ್.ಪಿ. ಅಳವಡಿಸಲು ಕೊನೆ ದಿನವಾಗಿದೆ. ಇದು ಅಂತಿಮ ಗಡುವಾಗಿದ್ದು, ಮುಂದೆ ದಿನಾಂಕ ವಿಸ್ತರಣೆ ಅಸಾಧ್ಯ ಎಂಬ ವಿಷಯವನ್ನು ಇಲಾಖೆಯ ಉನ್ನತಾಧಿಕಾರಿಗಳು ದೃಢಪಡಿಸಿದ್ದಾರೆ. ಹೀಗಾಗಿ ವೆಬ್ಸೈಟ್ ಮೂಲಕ ನಂಬರ್ ಪ್ಲೇಟ್ ಪಡೆಯಲು ಅವಕಾಶಗಳಿವೆ. ಫೆ. ೧೭ರೊಳಗೆ ಹೆಚ್.ಎಸ್.ಆರ್.ಪಿ. ಅಳವಡಿಸುವಂತೆ ಈ ಹಿಂದೆ ಸರಕಾರ ಸೂಚಿಸಿತ್ತು. ರಾಜ್ಯದಲ್ಲಿ ಹೆಚ್ಚಿನ ವಾಹನಗಳಿರುವ ಕಾರಣ, ಗ್ರಾಮೀಣ ಪ್ರದೇಶಗಳಲ್ಲಿ ಬೋರ್ಡ್ ಅಳವಡಿಕೆಗೆ ತೋರುತ್ತಿರುವ ನಿರಾಸಕ್ತಿ ಗಮನಿಸಿ ರಾಜ್ಯದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ದಿನಾಂಕವನ್ನು ೩ ತಿಂಗಳು ವಿಸ್ತರಿಸಿದ್ದರು. ಇದೀಗ ಈ ಅವಧಿ ಕೊನೆಗೊಳ್ಳುವ ಹಂತಕ್ಕೆ ಸಮೀಪಿಸಿದೆ.
ನೂತನ ಭದ್ರತಾ ತಂತ್ರಜ್ಞಾನ ಹೊಂದಿರುವ ‘ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್’ ಬಳಕೆ ಕಡ್ಡಾಯ ವಾಗಿದ್ದು, ಹಳೆ ನಂಬರ್ ಪ್ಲೇಟ್ಗಳು ಮುಂದೆ ಅನಧಿಕೃತ ವಾಗಲಿವೆ. ಈ ಹಿಂದೆ ವಿವಿಧ ವಿನ್ಯಾಸ, ಶೈಲಿಗಳ ಹಾಗೂ ಅಕ್ಷರ-ಸಂಖ್ಯಾ ಶೈಲಿಗಳುಳ್ಳ ನಂಬರ್ ಪ್ಲೇಟ್ಗಳನ್ನು ಅಳವಡಿಸಲು ಅವಕಾಶವಿತ್ತು. ಈ ಕಾರಣದಿಂದಾಗಿ ಕೆಲವೊಂದು ನಂಬರ್ ಪ್ಲೇಟ್ಗಳಲ್ಲಿ ಸಂಖ್ಯೆ ಹಾಗೂ ಅಕ್ಷರಗಳು ಸ್ಪಷ್ಟವಾಗಿ ಗೋಚರವಾಗುತ್ತಿರಲಿಲ್ಲ. ಇದನ್ನು ತಡೆಗಟ್ಟಲು ‘ಐಎನ್ಡಿ’ ಮಾದರಿಯ ಒಂದೇ ಸಂಖ್ಯಾ-ಅಕ್ಷರ ಶೈಲಿವುಳ್ಳ ನಂಬರ್ ಪ್ಲೇಟ್ಗಳನ್ನು ಮಾತ್ರ ಬಳಸುವಂತೆ ಸರಕಾರ ಸೂಚಿಸಿ ತ್ತಾದರೂ ಇದೀಗ ಕಳೆದ ವರ್ಷ ಹೊರಡಿಸಿದ ಆದೇಶದ ಪ್ರಕಾರ ಈ ನಂಬರ್ ಪ್ಲೇಟ್ಗಳು ಕೂಡ ಅನಧಿಕೃತವಾಗಲಿವೆ. ಇದರ ಬದಲು ‘ಹೈ ಸೆಕ್ಯೂರಿಟಿ ರಿಜಿಸ್ಟೆçÃಷನ್ ಪ್ಲೇಟ್’ ಬಳಕೆ ಕಡ್ಡಾಯವಾಗಲಿದೆ. ಮೇ ೩೦ ರೊಳಗೆ ಎಲ್ಲಾ ವಾಹನಗಳು ಈ ನಂಬರ್ ಪ್ಲೇಟ್ ಅನ್ನು ತಮ್ಮ ವಾಹನ ಗಳಿಗೆ ಅಳವಡಿಸಿ ಕೊಳ್ಳುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ರೂ. ೧ ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ದಂಡ ವಿಧಿಸಲಾಗುತ್ತದೆ.
ಹಳೆ ವಾಹನ ಮಾಲೀಕರ ಗೊಂದಲ
ಒAದೆಡೆ ಹೆಚ್.ಎಸ್.ಆರ್.ಪಿ. ಅಳವಡಿಕೆಗೆ ದೂರದ ಊರಿನ ಶೋರೂಂಗಳನ್ನು ಅವಲಂಬಿಸ ಬೇಕೆಂಬ ನೋವಿನೊಂದಿಗೆ ಸ್ಥಗಿತ ಗೊಂಡಿರುವ ಕಂಪೆನಿಗಳ ಶೋರೂಂ ಇಲ್ಲದೆ ವಾಹನ ಮಾಲೀಕರು ಗೊಂದಲಕ್ಕೆ ಒಳಗಾಗಿದ್ದಾರೆ.
ವಿಶೇಷವಾಗಿ ಕೊಡಗು ಜಿಲ್ಲೆಯ ಹಳೆಯ ವಾಹನಗಳನ್ನು ಪ್ರೀತಿ ಯಿಂದ ನಿರ್ವಹಣೆ ಮಾಡಿಕೊಂಡು ಉತ್ತಮ ಗುಣಮಟ್ಟದಲ್ಲಿಟ್ಟು ಕೊಂಡಿರುವುದು ಗಮನಾರ್ಹ ವಾಗಿದೆ. ಹಲವಷ್ಟು ಹಳೆಯ ವಾಹನಗಳು ‘ಫಿಟ್ನೆಸ್ ಸರ್ಟಿಫಿಕೇಟ್’
(ಮೊದಲ ಪುಟದಿಂದ) ಅನ್ನು ಪಡೆದುಕೊಂಡು ಚಲಾಯಿಸಲು ಅವಕಾಶ ಪಡೆದುಕೊಂಡಿವೆ. ಈ ಹೊಸ ನಿಯಮ ಹಳೆ ವಾಹನ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಇದಕ್ಕೆ ಏನು ಪರಿಹಾರ? ಎಂಬ ಪ್ರಶ್ನೆ ಉದ್ಭವಿಸಿದೆ. ಆನ್ಲೈನ್ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದ್ದು, ಖಾಸಗಿ ಕಂಪೆನಿಯೊAದು ಇದರ ನಿರ್ವಹಣೆ ಜವಾಬ್ದಾರಿ ಪಡೆದುಕೊಂಡಿದೆ.
ಆಯಾ ವಾಹನಗಳ ತಯಾರಿಕ ಕಂಪನೆಗಳ ಮೂಲಕವೇ ಬೋರ್ಡ್ ಪಡೆಯಲು ಅವಕಾಶವಿರುವುದರಿಂದ ಸ್ಥಗಿತಗೊಂಡಿರುವ ಸಂಸ್ಥೆಗಳ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಸುವುದು ಹೇಗೆ.? ಎಂಬ ಗೊಂದಲ ಉಂಟಾಗಿದೆ. ಈ ಹಿಂದೆ ಈ ಬಗ್ಗೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ನಂತರ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರದ ಸಾರಿಗೆ ಇಲಾಖೆ ಅಧಿಕಾರಿಗಳು ಕೋರಿದ್ದರು. ಇದೀಗ ವೆಬ್ಸೈಟ್ನಲ್ಲಿ ಪರಿಹಾರ ದೊರೆತ್ತಿದ್ದು, ಬೇರೆ ಸಂಸ್ಥೆಯೊAದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿಂದ ಬೋರ್ಡ್ ಪಡೆಯಲು ಅವಕಾಶ ಲಭ್ಯವಿದೆ ಎಂದು ತಿಳಿದು ಬಂದಿದೆ. ಕೈನೆಟಿಕ್ ಹೋಂಡಾ ನೋಂದಣಿ ಮಾತ್ರ ಸದ್ಯಕ್ಕೆ ಮಾಡಲಾಗುತ್ತಿಲ್ಲ. ಉಳಿದಂತೆ ಅಂಬಾಸೆಡರ್, ಫಿಯೆಟ್, ಶೆಮ್ರೊಲೆ ಸಿಯೊಲೊ, ಎಲ್.ಎಂ.ಎಲ್. ಸೇರಿದಂತೆ ಸ್ಥಗಿತಗೊಂಡಿರುವ ವಾಹನಗಳಿಗೆ ಇತರ ಕಂಪೆನಿಗಳೊAದಿಗೆ ಸೇರ್ಪಡೆ ಮಾಡಿ ವೆಬ್ಸೈಟ್ನಲ್ಲಿ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ. ಈ ವೇಳೆ ಸಮಸ್ಯೆ ಉಂಟಾದಲ್ಲಿ ಸಹಾಯವಾಣಿ ೯೪೪೯೮೬೩೪೨೯, ೯೪೪೯೮೬೩೪೨೬ ಸಂಖ್ಯೆಯನ್ನು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆ ತನಕದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಆನ್ಲೈನ್ ನೋಂದಣಿ ಹೇಗೆ?
ಕರ್ನಾಟಕ ಸರಕಾರದ ಅಧಿಕೃತ ವೆಬ್ಸೈಟ್ ‘ಣಡಿಚಿಟಿsಠಿoಡಿಣ.ಞಚಿಡಿಟಿಚಿಣಚಿಞಚಿ.gov.iಟಿ’ಗೆ ತೆರಳಿ ಊSಖP ಆಯ್ಕೆಯನ್ನು ಒತ್ತಿದರೆ ವಾಹನ ನೋಂದಣಿ ಕಾರ್ಡ್ನಲ್ಲಿನ ವಿವರ ನೀಡಿದ್ದಲ್ಲಿ ಹತ್ತಿರದ ವಾಹನ ಸಂಸ್ಥೆಯ ಅಧಿಕೃತ ವಾಹನ ಮಾರಾಟಗಾರರ ವಿವರವನ್ನು ನೀಡುತ್ತದೆ. ಅನುಕೂಲಕರ ಮಾರಾಟಗಾರರನ್ನು ಆಯ್ಕೆ ಮಾಡಿ ದಿನಾಂಕ ಹಾಗೂ ಸಮಯ ನಿಗದಿಪಡಿಸಿ ನಿಗದಿತ ಮೊತ್ತವನ್ನು ಆನ್ಲೈನ್ ಮೂಲಕವೇ ಪಾವತಿಸಿದಲ್ಲಿ ಆ ದಿನದಂದು ಸಾರಿಗೆ ಇಲಾಖೆ ಆನ್ಲೈನ್ ತಂತ್ರಾAಶದಲ್ಲಿ ನೋಂದಣಿಯಾದ ನಂಬರ್ ಪ್ಲೇಟ್ಅನ್ನು ಅವರಿಂದಲೇ ವಾಹನಕ್ಕೆ ಅಳವಡಿಸಿಕೊಳ್ಳಬಹುದಾಗಿದೆ.
-ಹೆಚ್.ಜೆ. ರಾಕೇಶ್