ಶನಿವಾರಸಂತೆ, ಮೇ ೧೩: ಸಮೀಪದ ಗೋಪಾಲಪುರ ಗ್ರಾಮದ ದೇವಾಂಗ ಸಂಘದ ವತಿಯಿಂದ ಶ್ರೀ ಬನಶಂಕರಿ ದೇವಸ್ಥಾನದ ೨೬ನೇ ವಾರ್ಷಿಕ ಮಹೋತ್ಸವ ತಾ.೧೪ ರಂದು (ಇಂದು) ಮತ್ತು ೧೫ ರಂದು ನಡೆಯಲಿದೆ.
ತಾ.೧೪ರ (ಇಂದು) ಬೆಳಿಗ್ಗೆ ೮ ಗಂಟೆಯಿAದ ಪೂಜಾ ಕಾರ್ಯಕ್ರಮ ಆರಂಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಶ್ರೀಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತಗಳಿಂದ ಅಭಿಷೇಕ ಮಾಡಲಾಗುವುದು. ನಂತರ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ, ಕಲಶಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾ ಹಾಗೂ ಮೃತ್ಯುಂಜಯ ಹೋಮ ನಡೆಯಲಿದೆ. ಪೂರ್ಣಾಹುತಿಯಾಗಿ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಮಧ್ಯಾಹ್ನ ೩ ಗಂಟೆಗೆ ಶ್ರೀ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯನ್ನು ವೀರಗಾಸೆ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಗುತ್ತದೆ. ಸಂಜೆ ೬.೩೦ ರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆಯಾಗಿ, ೭.೩೦ ರಿಂದ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ, ೮ ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ ಸುಗ್ಗಿ ಕುಣಿತ ಮತ್ತು ಸಿಡಿಮದ್ದು ಪ್ರದರ್ಶನವಿರುತ್ತದೆ. ತಾ. ೧೫ ರಂದು ಪ್ರಾತಃಕಾಲ ೫ ಗಂಟೆಗೆ ಅಮ್ಮನವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ವೀರಗಾಸೆ ಕುಣಿತದೊಂದಿಗೆ ಗಂಗಾಸ್ನಾನಕ್ಕೆ ತರಲಾಗುತ್ತದೆ. ಪಂಚಕಲಶದೊAದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಗುತ್ತದೆ. ಬೆಳಿಗ್ಗೆ ೯ ಗಂಟೆಗೆ ಕೆಂಡೋತ್ಸವ ನಡೆದು ೧೦ ಗಂಟೆಗೆ ದೇವಾಲಯ ಪ್ರವೇಶ, ನಂತರ ಅಮ್ಮನವರಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ, ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಪೂಜಾ ಕಾರ್ಯಕ್ರಮಗಳ ನೇತೃತ್ವವನ್ನು ದೇವಸ್ಥಾನದ ಅರ್ಚಕ ಕೆ.ಎಸ್. ಪ್ರಸನ್ನಭಟ್ ವಹಿಸಲಿದ್ದಾರೆ.