ವೀರಾಜಪೇಟೆ, ಮೆ ೧೨: ನಗರದ ಶಕ್ತಿ ದೇವತೆಯಾದ ಶ್ರೀ ದಕ್ಷಿಣ ಮಾರಿಯಮ್ಮ ದೇವಿಯ ವಾರ್ಷಿಕ ಮಹೋತ್ಸವವು ಐದು ದಿನಗಳ ಕಾಲ ವಿವಿಧ ದೈವಿಕಾ ಕಾರ್ಯಕ್ರಮ ಗಳೊಂದಿಗೆ ನೆರವೇರಿತು.
ವೀರಾಜಪೇಟೆ ನಗರದ ರಾಜ ಬೀದಿಯಾದ ತೆಲುಗು ಶೆಟ್ಟರ ಬೀದಿಯ ದೇವಾಲಯದಲ್ಲಿ ಮಂಗಳವಾರ ದೇವಿಯನ್ನು ಆರಾಧಿಸಿ ನಗರದ ಗೌರಿಕೆರೆಯಲ್ಲಿ ವಿವಿಧ ಹೂವುಗಳಿಂದ ಅಲಂಕರಿಸಿದ ಕರಗವನ್ನು ಪಂಚವಾದ್ಯಗಳೊAದಿಗೆ ದೇವಾಲಯಕ್ಕೆ ಬರಮಾಡಿ ಕೊಳ್ಳಲಾಯಿತು.
ಬುಧವಾರ ಮಹಿಳೆಯರಿಂದ ತಂಬಿಟ್ಟು ಆರತಿ ಸೇವೆ ನಡೆಯಿತು. ಗುರುವಾರ ದೇವಿಗೆ ವಿಶೇಷ ಅಲಂಕಾರ ಸೇವೆ, ಮಹಾಪೂಜೆ, ಮಹಾ ಮಂಗಳಾರತಿ, ಭಕ್ತರಿಂದ ವಿವಿಧ ಹರಕೆ ಸೇವೆಗಳು ಜರುಗಿ ಏಳು ಬಗೆಯ ವಿಶೇಷ ಪ್ರಸಾದ ವಿನಿಯೋಗ ನಡೆಯಿತು.
ಶುಕ್ರವಾರ ಶ್ರೀ ದೇವಿಗೆ ಅಲಂಕಾರ ಸೇವೆ ನಡೆಯಿತು. ಸಂಜೆ ವಿಶೇಷ ಪೂಜೆ ಸಲ್ಲಿಕೆಯಾಗಿ ಅನ್ನಸಂತರ್ಪಣೆ ನಡೆಯಿತು. ಶನಿವಾರ ಸಂಜೆ ಶ್ರೀ ದೇವಿಯ ಕರಗದ ಮೆರವಣಿಗೆ ನಡೆಯಿತು.
ಈ ಸಂದರ್ಭ ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಅಂಗಾಳ ಪರಮೇಶ್ವರಿ ದೇವಾಲಯ ಟ್ರಸ್ಟ್ನ ಆಡಳಿತ ಮಂಡಳಿಯ ಪದಾಧಿಕಾರಿ ಗಳು, ಹತ್ತು ಕುಲಸ್ಥರು, ಭಕ್ತಾದಿಗಳು ಹಾಜರಿದ್ದರು.