ಪೊನ್ನಂಪೇಟೆ, ಮೇ ೧೨: ಆಯಾ ಧರ್ಮಗಳು ಸಾರಿದ ತತ್ವ ಆದರ್ಶಗಳ ಪಾಲನೆ ಬಗೆಗಿನ ಜನರ ಅಸಡ್ಡೆಯೇ ಇಂದಿನ ಮನುಷ್ಯ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಸತ್ಯ, ಪ್ರಾಮಾಣಿಕತೆ, ಅಹಿಂಸೆ ಮೇಲಿನ ನಂಬಿಕೆಯ ಕೊರತೆಯೇ ಜಗತ್ತಿನ ಇಂದಿನ ವಿವಿಧ ಸಮಸ್ಯೆಗಳಿಗೆ ರಹದಾರಿಯಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಪಿ.ಎ. ಹನೀಫ್ ಹೇಳಿದರು.
ವೀರಾಜಪೇಟೆ ಸಮೀಪದ ಕಂಡAಗಾಲದ ಬದ್ರಿಯಾ ಜುಮಾ ಮಸೀದಿಯ ಆಶ್ರಯದಲ್ಲಿ ಮಸೀದಿಯ ಆವರಣದಲ್ಲಿ ನಡೆದ ವಾರ್ಷಿಕ ಪಳ್ಳಿನೇರ್ಚೆ ಮತ್ತು ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಜನರು ಕೆಟ್ಟ ಆಲೋಚನೆಗಳನ್ನು ತೊಡೆದು ಹಾಕಿದಾಗ ಮಾತ್ರ ಮಾನವೀಯತೆಯ ಬೆಳಕು ಗೋಚರಿಸುತ್ತದೆ. ಪ್ರತಿಯೊಬ್ಬರು ಸತ್ಯ, ಪ್ರಾಮಾಣಿಕತೆ, ಅಹಿಂಸೆ, ಮೊದಲಾದವುಗಳನ್ನು ಸದ್ಗುಣದ ಜೀವನಕ್ಕೆ ಮೂಲ ಸಿದ್ಧಾಂತವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವ ವಿದ್ವಾಂಸ ಎಮ್ಮೆಮಾಡಿನ ಸಯ್ಯದ್ ಸಮೀಹ್ ಅನ್ವಾರಿ ಅಹ್ಸನಿ ತಂಗಳ್ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರಲ್ಲದೆ ದುವಾ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಇದಕ್ಕೂ ಮೊದಲು ವೀರಾಜಪೇಟೆಯ ಅನ್ವಾರಲ್ ಹುದಾ ಸಂಸ್ಥೆಯ ಪ್ರಾಂಶುಪಾಲರಾದ ಅಶ್ರಫ್ ಅಹ್ಸನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೀರಾಜಪೇಟೆಯ ಅನ್ವರುಲ್ ಹುದಾ ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೋಳುಮಂಡ ರಫೀಕ್, ಮಂದಮಾಡ ಕುಟುಂಬದ ಹಿರಿಯರಾದ ಎಂ.ಎA. ಹಸನ್, ಕಂಡAಗಾಲ ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಯು. ಮಮ್ಮದ್, ಕಾರ್ಯದರ್ಶಿ ಎಂ.ಎA. ಅಬ್ದುಲ್ಲಾ, ಕೋಶಾಧಿಕಾರಿ ಎಂ.ಎ. ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.
ಕಂಡAಗಾಲ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷÀ ಎಂ.ಎ. ಮುನೀರ್ ಸ್ವಾಗತಿಸಿದರು. ಮಸೀದಿಯ ಖತೀಬರಾದ ಅಬ್ದುಲ್ ರಹಿಮಾನ್ ಅನ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಸೀದಿಯ ಅಧ್ಯಾಪಕ ಅಬ್ಬಾಸ್ ಮುಸ್ಲಿಯಾರ್ ವಂದಿಸಿದರು. ಕಾರ್ಯಕ್ರಮದ ನಂತರ ಮೌಲೂದ್ ಪಾರಾಯಣ ಮತ್ತು ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.