ಮಡಿಕೇರಿ, ಮೇ ೧೩: ಮಾದಾಪುರದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಾದಾಪುರ ಹಿಂದೂ ಮಲಯಾಳಿ ಕುಟುಂಬ ಸಂಘಟನೆ ವತಿಯಿಂದ ಆಯೋಜನೆ ಮಾಡಿದ್ದ ಜಿಲ್ಲಾಮಟ್ಟದ ಪ್ರಥಮ ವರ್ಷದ ಮಲಯಾಳಿ ಬಾಂಧವರ ಕ್ರಿಕೆಟ್ ಪಂದ್ಯಾಟದಲ್ಲಿ ಚರಿಷ್ ರಾಮ್ ಐಗೂರು ತಂಡ ಪ್ರಶಸ್ತಿ ಗೆದ್ದುಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಇಲೆವೆನ್ ಸ್ಟರ್ಸ್ ಕಂಬಿಬಾಣೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಮಹಿಳೆಯರಿಗಾಗಿ ಪ್ರಥಮ ಬಾರಿಗೆ ನಡೆದ ಕ್ರಿಕೆಟ್ನಲ್ಲಿ ಟೀಮ್ ಇಲೆವೆನ್ ಮಾಲ್ದಾರೆ ತಂಡ ಪ್ರಥಮ ಸ್ಥಾನ ಗಳಿಸಿಕೊಂಡರೆ, ದ್ವಿತೀಯ ಸ್ಥಾನವನ್ನು ಚಾಲೆಂರ್ಸ್ ಗುಡ್ಲೂರು ತನ್ನದಾಗಿಸಿಕೊಂಡಿತು. ಕ್ರಿಕೆಟ್ ಪಂದ್ಯಾಟದೊAದಿಗೆ ನಡೆದ ಹಗ್ಗಜಗ್ಗಾಟ ರೋಚಕತೆಯಿಂದ ಕೂಡಿತ್ತು.
ಪುರುಷರ ವಿಭಾಗದ ಕ್ರಿಕೆಟ್ ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕಂಬಿಬಾಣೆ ತಂಡ ೫ ಓವರ್ಗಳಿಗೆ ೩೮ ರನ್ ಗಳಿಸಿತು. ನಂತರ ಗುರಿ ಬೆನ್ನತ್ತಿದ ಐಗೂರು ತಂಡ ೩ ಓವರ್ಗಳಲ್ಲಿ ನಿಗದಿತ ರನ್ ಕಲೆಹಾಕಿ ಗೆಲುವಿನ ದಡ ಸೇರಿ ಪ್ರಶಸ್ತಿಗೆ ಮುತ್ತಿಕ್ಕಿತು. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಐಗೂರು ತಂಡದ ಸುದರ್ಶನ್ ಮತ್ತು ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಐಗೂರು ತಂಡದ ಸಚಿನ್ ಪಡೆದುಕೊಂಡರು.
ಮಹಿಳಾ ಕ್ರಿಕೆಟ್
ಮಹಿಳಾ ಕ್ರಿಕೆಟ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಲೆವೆನ್ ಮಾಲ್ದಾರೆ ತಂಡ ನಾಲ್ಕು ಓವರ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಚಾಲೆಂರ್ಸ್ ಗುಡ್ಲೂರು ತಂಡ ಕೇವಲ ೨೩ ರನ್ ಗಳಿಸಲು ಶಕ್ತವಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮಹಿಳೆಯರಿಗಾಗಿ ಆಯೋಜಿಸಿದ್ದ ಹಗ್ಗಜಗ್ಗಾಟದಲ್ಲಿ ಟೀಮ್ ಭಜರಂಗಿ ಐಗೂರು ತಂಡ ಪ್ರಥಮ ಸ್ಥಾನ ಗಳಿಸಿದರೆ, ಚಾಲೆಂರ್ಸ್ ಗುಡ್ಲೂರು ದ್ವಿತೀಯ ಸ್ಥಾನ ಪಡೆದುಕೊಂಡಿತು.
ಹಿAದೂ ಮಲಯಾಳಿ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯನ್ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿ, ಮಲಯಾಳಿ ಬಾಂಧವರು ಇದೇ ರೀತಿಯಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸಮುದಾಯವನ್ನು ಒಂದು ಮಾಡುವ ಕೆಲಸ ಮಾಡಬೇಕು. ಅದೇ ರೀತಿ ಮಲಯಾಳಿಗರ ಪ್ರಮುಖ ಹಬ್ಬಗಳಾದ ವಿಶು ಮತ್ತು ಓಣಂ ದಿನ ಸರ್ಕಾರಿ ರಜೆ ನೀಡುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು. ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲಾ ಭಾಗಗಳಲ್ಲೂ ವರ್ಷಕ್ಕೊಮ್ಮೆ ಕಾರ್ಯಕ್ರಮ ಆಯೋಜನೆ ಮಾಡುವಂತಾಗಬೇಕು ಎಂದು ಕರೆ ನೀಡಿದರು.
ನಾಪೋಕ್ಲು ಮಲಯಾಳಿ ಸಮಾಜದ ಅಧ್ಯಕ್ಷ ಅನಿಲ್, ವೀರಾಜಪೇಟೆಯ ಸುಮೇಶ್ ಮಾತನಾಡಿದರು. ಇದೇ ಸಂದರ್ಭ ನಿವೃತ್ತ ಯೋಧ ಕ್ಯಾಪ್ಟನ್ ಕುಮಾರ್ (ಮುತ್ತು) ಅವರಿಗೆ ಹಿಂದೂ ಮಲಯಾಳಿ ಕುಟುಂಬ ಮಾದಾಪುರದ ವತಿಯಿಂದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಮಲಯಾಳಿ ಸಮಾಜ ಜಿಲ್ಲಾ ಸಲಹೆಗಾರರಾದ ವಿನೋಬ್, ಪದ್ಮನಾಭ, ಉದ್ಯಮಿ ಸುರೇಶ್ ಚಾಮಿ, ವೀರಾಜಪೇಟೆ ಮಲಯಾಳಿ ಸಮಾಜ ಕಾರ್ಯದರ್ಶಿ ಸಿಜು ಮೋನ್, ಪ್ರಮುಖರಾದ ವಾಸು, ಶ್ರೀನಿಧಿ ವಿಶ್ವನಾಥ್, ಉಷಾ ಮುರಳಿ, ಸುರೇಶ್ ಬಾವೆ, ಅಜೀಶ್ ಐಗೂರು, ಕುಮಾರ (ಮುತ್ತು), ಅನೂಪ್, ಪ್ರಭಾ, ರಾಜನ್ ಟಿ.ಕೆ., ಅಶೋಕ ಕಾರೆಕಾಡು, ಮಾನಸ ಮಣಿಕಂಠ, ಶೀಲಾ, ಶಶಿ ಇತರರು ಹಾಜರಿದ್ದರು.