ಮಡಿಕೇರಿ, ಮೇ ೧೨: ಬರ್ಬರವಾಗಿ ಕೊಲೆಯಾದ ಬಾಲಕಿ ಮೀನಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ರುಂಡ-ಮುAಡ ಜೋಡಿಸಿ ಕುಟುಂಬಸ್ಥರಿಗೆ ಭಾನುವಾರ ಹಸ್ತಾಂತರ ಮಾಡಲಾಯಿತು.
ತಾ. ೯ ರಂದು ಕುಂಬಾರಗಡಿಗೆಯಲ್ಲಿ ನಿಶ್ಚಿತಾರ್ಥ ಮುರಿದುಬಿದ್ದ ಕಾರಣಕ್ಕೆ ಬಾಲಕಿ ಮೀನಾಳ ತಲೆಯನ್ನು ಕೊಚ್ಚಿ ಕೊಲೆಗೈದು ಆರೋಪಿ ಓಂಕಾರಪ್ಪ (ಪ್ರಕಾಶ್) ರುಂಡ ಸಹಿತ ಅರಣ್ಯದ ನಡುವೆ ಪರಾರಿಯಾಗಿದ್ದ. ಶನಿವಾರ ಈತ ಬಂಧಿತನಾಗಿದ್ದು, ಪತ್ತೆಯಾಗಿದ್ದ ರುಂಡವನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯರಿಗೆ ಒಪ್ಪಿಸಿ ಮರಣೋತ್ತರ ಪರೀಕ್ಷೆಗೆ ಕ್ರಮವಹಿಸಿದ್ದರು.
ಭಾನುವಾರ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವೈದ್ಯರ ರುಂಡ-ಮುAಡ ಜೋಡಿಸಿ ಕುಟುಂಬಸ್ಥರಿಗೆ ಮಧ್ಯಾಹ್ನ ವೇಳೆಗೆ ಹಸ್ತಾಂತರ ಮಾಡಿದರು.
ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ
ಘಟನೆ ನಡೆದು ನಾಲ್ಕು ದಿನಗಳ ನಂತರ ಬಾಲಕಿ ಮೀನಾಳ ಮೃತದೇಹವನ್ನು ಸ್ವಗ್ರಾಮ ಕುಂಬಾರಗಡಿಗೆಗೆ ಕೊಂಡೊಯ್ದು ಸಂಜೆ ವೇಳೆಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಘಟನೆ ನಡೆದ ದಿನದಂದು ಗಾಯಗೊಂಡಿದ್ದ ತಂದೆ ಸುಬ್ರಮಣಿ, ತಾಯಿ ಜಾನಕಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ಆಗಮಿಸಿ ಅಗಲಿದ ಮಗಳಿಗೆ ಕಣ್ಣೀರ ತರ್ಪಣಗೈದರು. ಮೀನಾಳ ಸಹೋದರ-ಸಹೋದರಿಯರು, ಕುಟುಂಬಸ್ಥರು, ಗ್ರಾಮಸ್ಥರು ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸಂತಾಪ ಸೂಚಿಸಿದರು. ಬಾಳಿ ಬದುಕಬೇಕಾದ ಮನೆಮಗಳನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಊರಿನ ಹುಡುಗಿಯ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದರು.
ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಬಾಲಕಿ ಹತ್ಯೆ ನಡೆದ ಗ್ರಾಮದಲ್ಲಿ ಇಂದಿಗೂ ನೀರವ ಮೌನ ಆವರಿಸಿತ್ತು. ಊರಿನ ಜನರಲ್ಲಿ ಕಣ್ಣೀರಿನೊಂದಿಗೆ ಕೊಲೆಗಾರನ ವಿರುದ್ಧ ಆಕ್ರೋಶವೂ ಬೆರೆತಿತ್ತು. ಅಂತ್ಯಕ್ರಿಯೆ ಸಂದರ್ಭವೂ ಓಂಕಾರಪ್ಪನಿಗೆ ಶಾಪ ಹಾಕುತ್ತ ಕೊಲೆಯಾದ ಮೀನಾಳ ಆತ್ಮಕ್ಕೆ ಹಲವರು ಶಾಂತಿ ಕೋರಿದ್ದು ಕಂಡುಬAತು.