ಗೋಣಿಕೊಪ್ಪ ವರದಿ, ಮೇ. ೧೩ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಮುಕ್ಕಾಟೀರ (ಹರಿಹರ-ಬೆಳ್ಳೂರು), ಮಾಳೇಟೀರ (ಕೆದಮುಳ್ಳೂರು), ಅರಮಣಮಾಡ, ಮಣವಟ್ಟೀರ ಮಹಿಳಾ ತಂಡಗಳು ಸೆಮಿ ಫೈನಲ್‌ಗೆ ಪ್ರವೇಶಿಸಿವೆ.
ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ೪ ತಂಡಗಳು ಜಯಭೇರಿ ಬಾರಿಸಿದವು. ಮುಕ್ಕಾಟೀರ (ಹರಿಹರ-ಬೆಳ್ಳೂರು) ತಂಡಕ್ಕೆ ಅಜ್ಜಿಕುಟ್ಟೀರ ವಿರುದ್ದ ೧೭ ರನ್‌ಗಳ ಜಯ ದೊರೆಯಿತು. ಮುಕ್ಕಾಟೀರ ೨ ವಿಕೆಟ್ ನಷ್ಟಕ್ಕೆ ೪೭ ರನ್ ದಾಖಲಿಸಿತು. ಅಜ್ಜಿಕುಟ್ಟೀರ ೨ ವಿಕೆಟ್ ಕಳೆದುಕೊಂಡು ೩೦ ರನ್ ಗಳಿಸಿತು. ಮುಕ್ಕಾಟೀರ ಪ್ರೇಮಿ ೨೦, ಅಜ್ಜಿಕುಟ್ಟೀರ ಭವ್ಯ ೧ ವಿಕೆಟ್ ಪಡೆದು ಮಿಂಚಿದರು.
ಮಾಳೇಟೀರ (ಕೆದಮುಳ್ಳೂರು) ತಂಡಕ್ಕೆ ನಾಗಂಡ ವಿರುದ್ದ ೧೦ ವಿಕೆಟ್‌ಗಳ ಗೆಲುವು ದೊರೆಯಿತು. ನಾಗಂಡ ೪ ವಿಕೆಟ್ ನಷ್ಟಕ್ಕೆ ೩೫ ರನ್, ಮಾಳೇಟೀರ ೨.೫ ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಮಾಳೇಟಿರ ಸಾಹಿತ್ಯ ೨೧ ರನ್, ಕವಿತ ೨ ವಿಕೆಟ್, ನಾಗಂಡ ಲಾವಣ್ಯ ೬ ರನ್ ಬಾರಿಸಿದರು.
ಅತಿಥೇಯ ಅರಮಣಮಾಡ ತಂಡಕ್ಕೆ ಅಳಮೇಂಗಡ ವಿರುದ್ದ ೨೦ ರನ್‌ಗಳ ಗೆಲುವು ದೊರೆಯಿತು. ಅರಮಣಮಾಡ ೨ ವಿಕೆಟ್ ಕಳೆದುಕೊಂಡು ೫೬ ರನ್ ಗುರಿ ನೀಡಿತು. ಅಳಮೇಂಗಡ ೩ ವಿಕೆಟ್ ಕಳೆದುಕೊಂಡು ೩೫ ಕ್ಕೆ ಕುಸಿಯಿತು. ಅರಮಣಮಾಡ ಟೀನಾ, ದೀಪಿಕಾ ತಲಾ ೧೭ ರನ್, ಅಳಮೇಂಗಡ ಶಶಿ ೧ ವಿಕೆಟ್, ಭವ್ಯ ೯ ರನ್ ಬಾರಿಸಿದರು.
ಮಣವಟ್ಟೀರ ತಂಡವು ಬಾಚಿನಾಡಂಡವನ್ನು ೧೫ ರನ್‌ಗಳಿಂದ ಮಣಿಸಿತು. ಮಣವಟ್ಟೀರ ೧ ವಿಕೆಟ್ ಕಳೆದುಕೊಂಡು ೪೦ ರನ್ ದಾಖಲಿಸಿತು. ಬಾಚಿನಾಡಂಡ ೩ ವಿಕೆಟ್ ನಷ್ಟಕ್ಕೆ ೨೫ ರನ್ ಗಳಿಸಿತು. ಬಾಚಿನಾಡಂಡ ಪೂಜಿತ ೧ ವಿಕೆಟ್, ಮಣವಟ್ಟೀರ ಸಂಗೀತಾ ೨ ವಿಕೆಟ್ ೧೪ ರನ್, ಸ್ಮಿತಾ ೧೦ ರನ್ ಗಳಿಸಿದರು.
ಪುರುಷರ ವಿಭಾಗದಲ್ಲಿ: ಬಲ್ಲಚಂಡಕ್ಕೆ ಮೂಕಳೇರ ವಿರುದ್ದ ೨೦ ರನ್ ಗೆಲುವು ದೊರೆಯಿತು. ಬಲ್ಲಚಂಡ ೫ ವಿಕೆಟ್‌ಗೆ ೫೯ ರನ್, ಮೂಕಳೇರ ೩೯ ರನ್‌ಗಳಿಗೆ ಸರ್ವಪತನವಾಯಿತು. ಮೂಕಳೇರ ನಿಖಿಲ್ ಹಾಗೂ ಬಲ್ಲಚಂಡ ಸಚಿನ್ ತಲಾ ೩ ವಿಕೆಟ್ ಕಬಳಿಸಿದರು.
ಕಾಣತಂಡಕ್ಕೆ ಕುಟ್ಟಂಡ (ಅಮ್ಮತ್ತಿ) ವಿರುದ್ದ ೭೩ ರನ್‌ಗಳ ಗೆಲುವು ಸಿಕ್ಕಿತು. ಕಾಣತಂಡ ೩ ವಿಕೆಟ್ ನಷ್ಟಕ್ಕೆ ೧೧೭ ರನ್ ದಾಖಲಿಸಿತು. ಕುಟ್ಟಂಡ ೮ ವಿಕೆಟ್ ಕಳೆದುಕೊಂಡು ೪೪ ರನ್‌ಗಳಿಗೆ ಕುಸಿಯಿತು. ಕುಟ್ಟಂಡ ನಿಖಿಲ್ ೨ ವಿಕೆಟ್, ಕಾಣತಂಡ ಸಮಂತ್ ೩ ವಿಕೆಟ್ ಪಡೆದರು.
ಗೀಜಿಗಂಡವು ಚೋನೀರವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಚೋನೀರ ೬ ವಿಕೆಟ್ ನಷ್ಟಕ್ಕೆ ೫೯ ರನ್, ಗೀಜಿಗಂಡ ೧ ವಿಕೆಟ್ ಕಳೆದುಕೊಂಡು ೫.೧ ಓವರ್‌ಗಳಲ್ಲಿ ಗುರಿ ಸಾಧಿಸಿತು. ಚೋನೀರ ಬಿಪಿನ್ ೧೯ ರನ್, ಗೀಜಿಗಂಡ ಸತೀಶ್ ೩೩ ರನ್ ದಾಖಲಿಸಿದರು.
ಮೂಕೊಂಡಕ್ಕೆ ನಂದೀರ ವಿರುದ್ದ ೪೪ ರನ್‌ಗಳ ಗೆಲುವು ಸಿಕ್ಕಿತು. ಮೂಕೊಂಡ ೩ ವಿಕೆಟ್ ನಷ್ಟಕ್ಕೆ ೭೫ ರನ್, ನಂದೀರ ೮ ವಿಕೆಟ್ ಕಳೆದುಕೊಂಡು ೩೧ ರನ್‌ಗಳಿಗೆ ಕುಸಿಯಿತು. ಮೂಕೊಂಡ ದೀನಾ ೩೫ ರನ್, ಮಿತೇಶ್ ೩ ವಿಕೆಟ್ ಪಡೆದರು.
ಕೊಂಗAಡಕ್ಕೆ ಮಾಚಂಗಡ ವಿರುದ್ದ ೧೦ ವಿಕೆಟ್ ಜಯ ಲಭಿಸಿತು. ಮಾಚಂಗಡ ಅಯ್ಯಪ್ಪ ೩೫, ಪೊನ್ನಣ್ಣ ಬಾರಿಸಿದ ೩೪ ರನ್‌ಗಳ ನೆರವಿನಿಂದ ೧ ವಿಕೆಟ್ ಕಳೆದುಕೊಂಡು ೯೧ ರನ್ ಗುರಿ ನೀಡಿತು. ಕೊಂಗAಡ ೫.೫ ಓವರ್‌ಗಳಲ್ಲಿ ರಚನ್ ಬಾರಿಸಿದ ೬೦ ರನ್‌ಗಳ ಕಾಣಿಕೆಯಿಂದ ಗೆದ್ದು ಬೀಗಿತು.
ಚೆಕ್ಕೇರಕ್ಕೆ ಜಮ್ಮಡ ವಿರುದ್ದ ೯ ವಿಕೆಟ್ ಗೆಲುವು ದೊರೆಯಿತು. ಜಮ್ಮಡ ೩೨ ರನ್ ಗುರಿ ನೀಡಿತು. ಚೆಕ್ಕೇರ ೧.೧ ಓವರ್‌ಗಳಲ್ಲಿ ಪಂದ್ಯ ಗೆದ್ದುಕೊಂಡಿತು. ಚೆಕ್ಕೇರ ಅಕಾಶ್ ೩ ವಿಕೆಟ್ ಪಡೆದು ೨೬ ರನ್ ಬಾರಿಸಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.
ಅಳಮೇಂಗಡ ರಿನಿತಾ, ಅಜ್ಜಿಕುಟ್ಟೀರ ಭವ್ಯ, ನಾಗಂಡ ಲಾವಣ್ಯ, ಬಾಚಿನಾಡಂಡ ವಿಹಾನ್ ಮುತ್ತಮ್ಮ, ಮೂಕಳೇರ ಕವನ್, ಕುಟ್ಟಂಡ ಕವನ್, ಚೋನೀರ ವಿನಯ್, ನಂದೀರ ಸಜನ್, ಮಾಚಂಗಡ ಅಯ್ಯಪ್ಪ, ಜಮ್ಮಡ ರಿಕಿ ಪಂದ್ಯ ಶ್ರೇಷ್ಠ ಗೌರವ ಪಡೆದರು.