ಮಡಿಕೇರಿ, ಮೇ ೧೨ : ಪ್ರಸಕ್ತ ವರ್ಷ ರೋಬಸ್ಟಾ ಕಾಫಿ ಧಾರಣೆಯಲ್ಲಿ ದಾಖಲೆಯ ಏರಿಕೆ ಕಂಡುಬAದಿದ್ದು, ಇದೀಗ ಕೆಲ ದಿನಗಳಿಂದ ದರ ಕುಸಿತ ಕಾಣಲಾರಂಭಿಸಿದೆ. ಈ ದಿಢೀರ್ ಬೆಳವಣಿಗೆ ಹೊಸ ಆಶಾಭಾವನೆಯಲ್ಲಿದ್ದ ಕಾಫಿ ಬೆಳೆಗಾರರಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗುತ್ತಿದೆ. ಕೆಲದಿನಗಳ ಹಿಂದೆ ದಿನಂಪ್ರತಿ ರೋಬಸ್ಟಾ ಬೆಲೆ ಹೆಚ್ಚಳವಾಗುತ್ತಿದ್ದು, ರೂ. ೧೦,೫೦೦ರ ತನಕವೂ ತಲುಪಿತ್ತು. ಈ ದರ ಏರಿಕೆಯನ್ನು ಬೆಳೆಗಾರರು ನಿರೀಕ್ಷೆ ಮಾಡಿರಲಿಲ್ಲವಾದರೂ ಕಳೆದ ಹಲವಷ್ಟು ವರ್ಷಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟವನ್ನೇ ಎದುರಿಸುವುದರೊಂದಿಗೆ ಉತ್ತಮ ಧಾರಣೆಯನ್ನೂ ಕಾಣದಿದ್ದ ಬೆಳೆಗಾರರು ಈ ಬಾರಿ ಸಹಜವಾಗಿಯೇ ಸಂತುಷ್ಟರಾಗಿದ್ದರು.

ಆದರೆ ಇದೀಗ ಅಂತರರಾಷ್ಟಿçÃಯ ವಹಿವಾಟಿನ ಏರಿಳಿತದಿಂದಾಗಿ ಬೆಲೆ ಕುಸಿಯಲಾರಂಭಿಸಿರುವುದು ಆತಂಕಕ್ಕೆ ಆಸ್ಪದವಾಗುತ್ತಿದೆ. ಯಾವುದನ್ನೂ ಖಚಿತವಾಗಿ ನಿರೀಕ್ಷೆ ಮಾಡಲಾಗದ ಪರಿಸ್ಥಿತಿಯಲ್ಲಿ ಸಂದಿಗ್ಧತೆಯನ್ನು ಎದುರಿಸುವಂತಾಗಿದೆ.

ಜಾಗತಿಕ ಮಟ್ಟದಲ್ಲಿ ಕಾಫಿ ರಫ್ತುದಾರರು ವಹಿವಾಟನ್ನು ಜೂಜಾಟದಂತೆ ಬಳಸಿಕೊಂಡ ಹಿನ್ನೆಲೆಯಲ್ಲಿ ರೋಬಸ್ಟಾ ಕಾಫಿ ದರ ಎಂದೂ ಕಂಡು ಕೇಳರಿಯದ ಮಟ್ಟದಲ್ಲಿ ಏರಿಕೆ ಕಂಡಿತ್ತು ಎನ್ನಲಾಗುತ್ತಿದೆ. ದಿಢೀರ್ ದರ ಏರಿಕೆ ಶಾಶ್ವತವಲ್ಲ ಎಂಬುದನ್ನು ಮನಗಾಣಬೇಕು. ಆದರೂ ಇದೀಗ ಇರುವ ದರವೇ ಉತ್ತಮವಾದುದು ಎಂಬದು ಕೆಲವು ತಜ್ಞರ ಅಭಿಪ್ರಾಯವಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಆರು ಸಾವಿರದಷ್ಟಿದ್ದ ರೊಬಸ್ಟಾ ಚೆರಿ ಕಾಫಿ ನೋಡನೋಡುತ್ತಿದ್ದಂತೆ ೧೦,೫೦೦ರ ಗಡಿ ತಲಪಿ ಅಚ್ಚರಿ ಮೂಡಿಸಿತ್ತು. ಆದರೆ, ಕಳೆದ ಒಂದು ವಾರದಿಂದ ಕಾಫಿ ದರದಲ್ಲಿ ದಿಢೀರನೇ ಇಳಿಮುಖ ಕಾಣಲಾರಂಭಿಸಿದೆ. ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದ ದರ ಇದೀಗ ದಿನದಿಂದ ದಿನಕ್ಕೆ ಇಳಿಮುಖಗೊಳ್ಳುತ್ತಿದ್ದು, ಪ್ರಸ್ತುತ ೮೫೦೦-೯೦೦೦ದ ಆಸುಪಾಸಿನಲ್ಲಿ ಬಂದು ನಿಂತಿದೆ. ಒಮ್ಮೆಲೆ ದರ ಏರಿಕೆಯಾದ ಹಿನ್ನೆಲೆಯಲ್ಲಿ ಸಂತಸಗೊAಡ ಕೆಲ ಬೆಳೆಗಾರರು ತಮ್ಮಲ್ಲಿದ್ದ ಕಾಫಿಯನ್ನು ಮಾರಾಟ ಮಾಡಿ ಒಂದಿಷ್ಟು ಸಂಪಾದನೆ ಮಾಡಿಕೊಂಡರು. ಆದರೆ, ಇನ್ನೂ ದರ ಏರಿಕೆಯಾಗಬಹುದೆಂಬ ನಂಬಿಕೆಯೊAದಿಗೆ ದಾಸ್ತಾನು ಇರಿಸಿಕೊಂಡಿರುವ ಬೆಳೆಗಾರರು ನಿರಾಸೆ ಅನುಭವಿಸುವಂತಾಗಿದೆ. ಆದರೂ ಇದುವರೆಗಿನ ಕಾಫಿ ವಹಿವಾಟಿನಂತೆ ಹೇಳುವುದಾದರೆ ಈಗ ಇರುವದೇ ಉತ್ತಮ ದರವಾಗಿದೆ, ಇನ್ನೂ ಕೂಡ ಏರಿಕೆಯಾಗಬಹುದು, ಆದರೆ ಯಾವಾಗ ಎಂದು ಹೇಳಲಾಗದು ಎಂದು ತಜ್ಞರು ಹೇಳುತ್ತಾರೆ. ಆದರೆ ಸಣ್ಣ ಬೆಳೆಗಾರರಿಗೆ ಮಾತ್ರ ಈಗಿನ ದರದ ಲಾಭ ದೊರಕಲಿಲ್ಲ. ಕುಯಿಲಿನ ಬಳಿಕ ತಕ್ಷಣವೇ ಬಹುತೇಕ ಸಣ್ಣ ಬೆಳೆಗಾರರು ಮಾರಾಟ ಮಾಡಿದ್ದಾರೆ.

ದರ ಏರಿಕೆ ಅಪಾಯ

ಕಾಫಿ ಬೆಲೆಯನ್ನು ಜಾಗತಿಕ ಮಟ್ಟದಲ್ಲಿ ರಫ್ತುದಾರರು ನಿರ್ಧರಿಸುತ್ತಾರೆ. ಅವರುಗಳ ಒಪ್ಪಂದದ ಪ್ರಕಾರ ಕಾಫಿ ದಾಸ್ತಾನು ಇಲ್ಲದಿರುವಾಗ ದರ ಏರಿಕೆ ಮಾಡಿ ಖರೀದಿ ಮಾಡುತ್ತಾರೆ. ಅಗತ್ಯ ದಾಸ್ತಾನು ಆದ ಮೇಲೆ ದಿಢೀರನೇ ಖರೀದಿ ಸ್ಥಗಿತಗೊಳಿಸುವದರಿಂದ ದರದಲ್ಲಿ ಇಳಿಕೆಯಾಗುತ್ತದೆ. ದಿನದಿಂದ ದಿನಕ್ಕೆ ದರ ಏರಿಕೆಯಾಗುವದು ಒಂದು ರೀತಿಯ ಅಪಾಯಕಾರಿ ಬೆಳವಣಿಗೆಯಾಗಿದೆ. ಇಪಿ ದರ ೪೦೦ಕ್ಕೆ ಬರುವಾಗಲೇ ಈ ಬಗ್ಗೆ ಚಿಂತನೆ ನಡೆಸಬೇಕಿತ್ತು. ಆದರೆ ಕೆಲವರು ಇನ್ನೂ ದರ ಬರಲಿದೆ ಎಂದು ದಾಸ್ತಾನಿರಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಾಫಿ ಬೆಳೆಯುವಿಕೆ ಕಡಿಮೆಯಾಗಿದೆಯಾದರೂ ಆಂತರಿಕ ಬಳಕೆ ಜಾಸ್ತಿಯಾಗುತ್ತಿದೆ. ಹಾಗಾಗಿ ಮತ್ತೆ ದರ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ, ಯಾವಾಗ ಎಂದು ನಿಖರವಾಗಿ ಹೇಳಲಾಗದು ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ, ಬೆಳೆಗಾರ ಡಾ. ಸಣ್ಣುವಂಡ ಕಾವೇರಪ್ಪ ಅಭಿಪ್ರಾಯಪಡುತ್ತಾರೆ.

ಕಾಫಿಗೆ ಉತ್ತಮ ದರ ಬಂದಿದ್ದರೂ ಇದರ ಲಾಭ ಸಣ್ಣ ಬೆಳೆಗಾರರಿಗೆ ಸಿಕ್ಕಿಲ್ಲ. ವಿವಿಧ ಸಮಸ್ಯೆಗಳ ನಡುವೆ ಕಾಫಿ ಕುಯ್ಲು ಮಾಡಲು ಕೂಲಿ ನೀಡುವದೇ ಕಷ್ಟವಾಗಿರುವ ಈಗಿನ ಕಾಲದಲ್ಲಿ ಸಣ್ಣ ಬೆಳೆಗಾರರು ಆಗಿಂದ್ದಾಗಲೇ ಮಾರಾಟ ಮಾಡಿಯಾಗಿದೆ. ಇದರಿಂದಾಗಿ ಅವರುಗಳಿಗೆ ಲಾಭವಾಗಿಲ್ಲ. ಈ ಬಾರಿ ಮಳೆ ಕೂಡ ಕೈಕೊಟ್ಟಿದ್ದರಿಂದ ಮುಂದಿನ ವರ್ಷದ ಬೆಳೆಯಲ್ಲೂ ಇಳಿಮುಖವಾಗಲಿದೆ, ಇದೀಗ ಸುರಿಯುತ್ತಿರುವ ಮಳೆಯಿಂದ ಯಾವದೇ ಪ್ರಯೋಜನವಿಲ್ಲ, ವಿದೇಶಗಳಲ್ಲಿಯೂ ಕಾಫಿ ಫಸಲು ಹಾಳಾಗಿದ್ದು, ಹಾಗಾಗಿ ಮುಂದಿನ ಸಾಲಿನಲ್ಲೂ ಗರಿಷ್ಠ ಪ್ರಮಾಣದ ದರ ಲಭಿಸುವ ಸಾಧ್ಯತೆ ಇದೆ ಎಂದೂ ಅವರು ಹೇಳುತ್ತಾರೆ.

ಈಗಿನ ದರ ಉತ್ತಮದ್ದೇ..

ಕಾಫಿಗೆ ಇಷ್ಟೊಂದು ಪ್ರಮಾಣದಲ್ಲಿ ದರ ಏರಿಕೆಯಾಗಿದ್ದೇ ಒಂದು ರೀತಿಯ ಅವಕಾಶ.. ನಿಖರವಾದ ದರ ಇಷ್ಟಿರುವದಿಲ್ಲ. ಕಾಫಿ ಮಾಫಿಯಾದವರು (ಕೆಲವರ ಹಿಡಿತ) ಜೂಜಾಟದಂತೆ ವಹಿವಾಟನ್ನು ಬಳಸಿಕೊಂಡಿದ್ದರಿAದ ಈ ರೀತಿಯಾಗಿದೆ. ಕಾಫಿ ದರ ಇಪಿ ೩೦೦ರಷ್ಟಿದ್ದರೆ ಅದುವೇ ಉತ್ತಮ ದರವಾಗಿದೆ. ಜಾಸ್ತಿಯಾದರೂ, ಕಡಿಮೆಯಾದರೂ ಕಷ್ಟ. ಇನ್ನೂ ದರ ಜಾಸ್ತಿಯಾಗಬಹುದೆಂದು ವ್ಯಾಪಾರಿಗಳು ದಾಸ್ತಾನು ಮಾಡಿಕೊಂಡಿದ್ದರು. ಇದೀಗ ಕಡಿಮೆಯಾಗಿದ್ದು ಮಾರಾಟ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನಿಶ್ಚಿತತೆ ಕಾಡುವಂತಾಗಿದೆ ಎಂದು ಕಾಫಿ ಉದ್ಯಮಿ ಎನ್. ಸಾತಪ್ಪನ್ ಅವರ ಅಭಿಪ್ರಾಯವಾಗಿದೆ.

ಜಾಗತಿಕ ಮಟ್ಟದಲ್ಲಿ ಏರಿಕೆ

ಕಾಫಿಗೆ ಇಷ್ಟೊಂದು ದರ ಹೇಗೆ ಏರಿಕೆಯಾಯಿತು ಎಂಬದೇ ಗೊತ್ತಾಗುತ್ತಿಲ್ಲ, ಎಲ್ಲವೂ ಜಾಗತಿಕ ಮಟ್ಟದಲ್ಲಿ ನಿರ್ಧರಿತವಾಗುತ್ತದೆ. ನಾಳೆ ಹೇಗೆ ಎಂಬದೇ ತಿಳಿಯಲಾಗುವುದಿಲ್ಲ. ಕಾಫಿ ದರ ಭಾರತೀಯ ಕಾಫಿಯ ಮೇಲೆ ನಿರ್ಧರಿತವಾಗುವುದಿಲ್ಲ ಎಂದು ಬೆಳೆಗಾರ ಕೆ.ಕೆ. ವಿಶ್ವನಾಥ್ ಹೇಳುತ್ತಾರೆ.

ಬೆಳೆಯಲ್ಲಿ ಇಳಿಕೆ, ಬೆಲೆ ಕುಸಿತ, ಕಾರ್ಮಿಕರ ಅಲಭ್ಯತೆಯೊಂದಿಗೆ ದುಪ್ಪಟ್ಟು ಕೂಲಿ ನೀಡಬೇಕಾದ ಕಾಲಘಟ್ಟದಲ್ಲಿ ಸಂಕಷ್ಟದಲ್ಲಿದ್ದ ಬೆಳೆಗಾರರ ಮೊಗದಲ್ಲಿ ಈ ದರ ಏರಿಕೆ ಒಂದಿಷ್ಟು ಮಂದಹಾಸ ಮೂಡಿಸಿತ್ತು. ಆದರೆ, ಇದೀಗ ಮತ್ತೆ ದರ ಇಳಿಮುಖವಾಗುತ್ತಿರುವದು ಮತ್ತೆ ನಿರಾಸೆ ಮೂಡಿಸುತ್ತಿದೆ.