ಮಡಿಕೇರಿ, ಮೇ ೧೨: ಸಮಾಜವನ್ನು ಸಬಲೀಕರಣ ಗೊಳಿಸಬೇಕಾದರೆ ಶಂಕರಾಚಾರ್ಯರ ತತ್ವಗಳನ್ನು ಪಾಲಿಸಬೇಕು. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು ಎಂದು ಸುಳ್ಯದ ಸ್ನೇಹ ವಿದ್ಯಾಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಹೇಳಿದರು.
ಕೊಡಗು ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಹಾಗೂ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಇವರ ಸಹಯೋಗ ದೊಂದಿಗೆ ನಗರದ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವಿತದ ಅಲ್ಪಾವಧಿಯಲ್ಲಿ ಕಾಲು ನಡಿಗೆಯಲ್ಲಿ ದೇಶವನ್ನು ಸುತ್ತಿ ಸನಾತನÀ ಧರ್ಮದ ಏಳಿಗೆಗಾಗಿ ಶ್ರಮಿಸಿದ ಶಂಕರಾಚಾರ್ಯರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸನಾತನ ಧರ್ಮದಲ್ಲಿನ ಒಳ್ಳೆಯ ಅಂಶಗಳನ್ನು ಸರಳವಾಗಿ ಜನಮಾನಸದಲ್ಲಿ ಬಿತ್ತುವ ಮೂಲಕ ಕಾರ್ಯಾಂಗದ ದೊಡ್ಡ ಹೊರೆ ಹಾಗೂ ಅಡೆÀತಡೆಗಳನ್ನು ನಿವಾರಿಸುವುದರ ಮೂಲಕ ಬೌದ್ಧ, ಜೈನ ಧರ್ಮಗಳು ಪ್ರಬಲವಾದವು. ಶಂಕರಾಚಾರ್ಯರು ಭಾರತದಲ್ಲಿ ಬೌದ್ಧ ಧರ್ಮದ ಪ್ರಭಾವ ಹೆಚ್ಚುತ್ತಿದ್ದಾಗ ಸನಾತನ ಧರ್ಮದ ಮಹತ್ವವನ್ನು ಹಾಗೂ ಅದರ ನೈಜ ತಿರುಳನ್ನು ಜನಮಾನಸದಲ್ಲಿ ಬಿತ್ತಿ ಸನಾತನದ ಬೆಳವಣಿಗೆಗೆೆ ಕಾರಣರಾದರು. ಸಾಕಷ್ಟು ವೈಚಾರಿಕ ಚಿಂತನೆಗಳ ಮೂಲಕ ಜನರನ್ನು ಸೆಳೆಯುವಲ್ಲಿ ಶಕ್ತರಾದರು. ಅದ್ಭುತವಾದ ಜ್ಞಾನ ಭಂಡಾರವನ್ನು ಹೊಂದಿದ್ದ ಶಂಕರಾಚಾರ್ಯರು ಬ್ರಹ್ಮಸೂತ್ರಗಳಿಗೆ, ಭಗವದ್ಗೀತೆಗೆ ಭಾಷ್ಯವನ್ನು ಬರೆದರು. ಶೈವ, ವೈಷ್ಣವ, ಸೂರ್ಯ, ಸ್ಕಂದ ಸೇರಿದಂತೆ ವಿವಿಧ ಮಾರ್ಗಗಳ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರತಿಪಾದಕರಾಗಿದ್ದರು ಎಂದರು.
ಶಂಕರಾಚಾರ್ಯರು ಪ್ರತಿಪಾದಿಸಿ ದಂತೆ ಅರ್ಹತೆಗೆ ಮೀರಿದ ಪ್ರತಿ ಫಲಾಪೇಕ್ಷೆಯನ್ನು ನಿರೀಕ್ಷಿಸಬಾರದು. ಅಗತ್ಯಕ್ಕಿಂತ ಹೆಚ್ಚಿನ ಆಸೆ ಆಕಾಂಕ್ಷೆಗಳ ವಿಚಾರವನ್ನು ಮನಸ್ಸಿನಿಂದ ಹೊರ ಹಾಕಿದರೆ ಜೀವನ ಸಾರ್ಥಕವಾಗುವುದು. ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಬೇಕು. ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಸಮಾಜದ ಏಳಿಗೆಗೆ ಶಂಕರಾಚಾರ್ಯರು ಪ್ರೇರಕರಾಗಿದ್ದು ಮಹಾನ್ ಆಚಾರ್ಯರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವುದು ಅಗತ್ಯವಾಗಿದೆ ಎಂದರು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಕಾರ್ಯಕ್ರಮದ ಅಂಗವಾಗಿ ವೈಭವ ತಂಡದಿAದ ಶತರುದ್ರಪಠಣ, ಸ್ತೋತ್ರ ಪಠಣ, ಕೊಡಗು ವಿಪ್ರ ಮಹಿಳಾ ವೃಂದದಿAದ ಶಾಂಕರಭಜನ್, ಝೀ ಕನ್ನಡ ಸರಿಗಮಪ ಖ್ಯಾತಿಯ ಯುವ ಹಿನ್ನೆಲೆ ಗಾಯಕ ಅನ್ವಿತ್ ಬಾಳೆಲೆ ಅವರಿಂದ ಶ್ರೀ ಶಾಂಕರ ಭಕ್ತಿಸುಧೆ ಹಾಗೂ ನೃತ್ಯ ಕಲಾವಿದೆ ಸುರಕ್ಷ ವೈಲಾಯ ಇವರಿಂದ ಭರತನಾಟ್ಯ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷೆ ಗೀತಾ ಗಿರೀಶ್, ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದ ಶ್ರೀಧರ್ ಭಟ್, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಸವಿತಾ ಭಟ್, ಜಯ ಶೀಲಾ ಪ್ರಕಾಶ್, ರವಿಶಂಕರ್, ಭರತೇಶ್ ಖಂಡಿಗೆ, ಮಾಜಿ ಕಾರ್ಯದರ್ಶಿ ಅರುಣ್‌ಕುಮಾರ್ ಉಪಸ್ಥಿತರಿದ್ದರು.
-ವರದಿ: ಸಿಎಸ್‌ಎಸ್