ಕಣಿವೆ, ಮೇ ೧೨ : ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲಾ ಅಲೆದಾಡಿದರಂತೆ. ಈ ಗಾದೆ ಮಾತು ಕುಶಾಲನಗರಕ್ಕೆ ಪ್ರಸಕ್ತ ಸನ್ನಿವೇಶದಲ್ಲಿ ಅನ್ವಯವಾಗುತ್ತಿದೆ.
ಕುಶಾಲನಗರ ಪಟ್ಟಣದ ಕೂಗಳತೆಯಲ್ಲಿ ಹಾರಂಗಿ ಜಲಾಶಯವಿದೆ. ಆದರೂ ಕೂಡ ಕುಶಾಲನಗರ ವ್ಯಾಪ್ತಿಯ ಜನರು ಕುಡಿಯುವ ನೀರಿಗಾಗಿ ಹಿಂದೆAದೂ ಪರದಾಟ ನಡೆಸಿರದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇದಕ್ಕೆ ಯಾರು ಕಾರಣರು...?
ಕುಶಾಲನಗರದ ಸ್ಥಳೀಯ ಚುನಾಯಿತ ಆಡಳಿತ ಮಂಡಳಿಯಾ ? ಕುಡಿಯುವ ನೀರನ್ನು ಪೂರೈಸುವ ಜಲಮಂಡಳಿಯಾ ? ೨೫ ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಈ ಹಿಂದಿನಾ ಶಾಸಕರಾ ? ಯಾರು ಕಾರಣರು? ಈ ಪ್ರಶ್ನೆಗಳನ್ನು ಕುಶಾಲನಗರದ ಕೆಲವು ಪ್ರಜ್ಞಾವಂತ ನಾಗರಿಕರು ಕೇಳುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿಯೇ ಅತ್ಯಂತ ವಿಸ್ತಾರವಾದ ಹಾಗೂ ಸಮತಟ್ಟಾದ ಭೂ ಪ್ರದೇಶವುಳ್ಳ ಕುಶಾಲನಗರ ಸರಿ ಸುಮಾರು ೨೫ ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಈ ೨೫ ಸಾವಿರ ಜನಸಂಖ್ಯೆಗೂ ಕಾವೇರಿ ನದಿಯ ನೀರನ್ನು ಕಳೆದ ಅನೇಕ ದಶಕಗಳಿಂದ ಸರಬರಾಜು ಮಾಡುತ್ತಾ ಬರಲಾಗುತ್ತಿದೆ. ಆದರೆ ನಾಡಿನ ಜೀವನದಿ ಕಾವೇರಿ ಹಿಂದೆAದೂ ಕಂಡಿರದ ಮಾದರಿಯಲ್ಲಿ ಈ ಬಾರಿ ಅಸ್ವಸ್ಥಳಾಗುವ ಮೂಲಕ ತನ್ನ ಹರಿವನ್ನು ಸ್ಥಗಿತಗೊಳಿಸಿ ಬರೋಬ್ಬರಿ ಎರಡು ತಿಂಗಳಾಗುತ್ತಾ ಬಂತು.
ಇದೀಗ ಇಲ್ಲಿನ ನಿವಾಸಿಗಳಿಗೆ ಜಲಮಂಡಳಿ ೫ ಟ್ರಾö್ಯಕ್ಟರ್ಗಳನ್ನು ಬಾಡಿಗೆಗೆ ಪಡೆದು ಅಷ್ಟೂ ಟ್ರಾö್ಯಕ್ಟರ್ಗಳ ಮೂಲಕ ಜೀವಜಲವಿರುವ ಕೊಳವೆ ಬಾವಿಯೊಂದರಿAದ ನೀರನ್ನು ತುಂಬಿಸಿ ನಿವಾಸಿಗಳ ಮನೆ ಮನೆಗಳಿಗೆ ತೆರಳಿ ಮನೆಯೊಂದಕ್ಕೆ ತಲಾ ೧೦ ಬಿಂದಿಗೆಗಳAತೆ ನೀರನ್ನು ಪೂರೈಸುತ್ತಿದೆ.
ಜಲಮಂಡಳಿ ಪೂರೈಸುವ ಈ ನೀರು "ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ"ಯಂತಾಗಿದೆ. ಕಾವೇರಿ ನದಿಯಲ್ಲಿ ನೀರು ಸಮೃದ್ಧವಾಗಿದ್ದಾಗ ಜಲಮಂಡಳಿ ಹಗಲು-ರಾತ್ರಿ ಎನ್ನದೇ ನೀರನ್ನು ಮೇಲೆತ್ತಿ ಪೂರೈಸುತ್ತಿದ್ದ ಪರಿಣಾಮ ನಿವಾಸಿಗಳು ನೀರನ್ನು ಲೆಕ್ಕವಿಲ್ಲದಷ್ಟು ವ್ಯಯ ಮಾಡುತ್ತಿದ್ದರು.
ಒಂದು ಅರ್ಥದಲ್ಲಿ ಕಾವೇರಿ ನದಿಯಿಂದ ಮೇಲೆತ್ತಿದ ಶುದ್ಧ ನೀರಿನ ಅರ್ಧದಷ್ಟು ನೀರು ಚರಂಡಿಗಳ ಮೂಲಕ ಮರಳಿ ನದಿಗೆ ಸೇರುತ್ತಿತ್ತು. ಅಷ್ಟರಮಟ್ಟಿಗೆ ನೀರನ್ನು ವ್ಯಯ ಮಾಡುತ್ತಿದ್ದ ಮಂದಿಗೆ ಈಗ ೧೦ ಬಿಂದಿಗೆ ನೀರೂ ಸಾಕಾಗುತ್ತಿಲ್ಲ.
ಪರಿಸ್ಥಿತಿ ಹೀಗೆಯೇ ಸಾಗಿದರೆ ಮುಂದೇನು...?
ಕುಶಾಲನಗರ ಪಟ್ಟಣದ ಎತ್ತರ ಪ್ರದೇಶದಲ್ಲಿರುವ ಬಸವೇಶ್ವರ ಬಡಾವಣೆ, ನಾಗೇಗೌಡ ಬಡಾವಣೆ, ಬಯಲು ಬಸವೇಶ್ವರ ಕ್ಷೇತ್ರ, ಜನತಾ ಕಾಲೋನಿ ಮೊದಲಾದ ಕಡೆಗಳಲ್ಲಿ ನಿವಾಸಿಗಳು ತಮ್ಮ ಮನೆಯಂಗಳದಲ್ಲಿ ಅಳವಡಿಸಿಕೊಂಡಿದ್ದ ಕೊಳವೆ ಬಾವಿಗಳ ಪೈಕಿ ಶೇ. ೮೦ ರಷ್ಟು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಅಷ್ಟೇ ಏಕೆ ಕಾವೇರಿ ನದಿ ದಂಡೆಯ ಕೆಲವು ಬಡಾವಣೆಗಳಲ್ಲಿನ ಜನವಸತಿ ಪ್ರದೇಶಗಳ ಕೊಳವೆ ಬಾವಿಗಳು ಕೂಡ ಕೈಕೊಡುತ್ತಿವೆ. ಹೀಗಿರುವಾಗ ಜಲಮಂಡಳಿ ನೀಡುತ್ತಿರುವ ನೀರು ಏನೇನಕ್ಕೂ ಸಾಲುತ್ತಿಲ್ಲ ಎಂಬ ಕೊರಗು ನಿವಾಸಿಗಳದ್ದಾಗಿದೆ.
ಆಡಳಿತ ಮಂಡಳಿಯೂ ನಿಷ್ಕಿçಯ
ಕುಶಾಲನಗರ ಪುರಸಭೆಯಲ್ಲಿ ಕಳೆದ ಒಂದು ವರ್ಷದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಜರುಗದ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಾರಣ ಆಡಳಿತ ಅಧಿಕಾರಿಗಳ ದರ್ಬಾರ್ ನಡೆಯುತ್ತಿದ್ದು, ಬಹುತೇಕ ಚುನಾಯಿತ ಜನಪ್ರತಿನಿಧಿಗಳು ನೀರಿಗೆ ಬಂದಿರುವ ಇಂತಹ ‘ಬರ' ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಕಾಳಜಿ ತೋರದೇ ನಿಷ್ಕಿçಯವಾಗಿದ್ದಾರೆ ಎಂಬ ದೂರು ಸ್ಥಳೀಯ ನಿವಾಸಿಗಳದ್ದಾಗಿದೆ.
ಸಾಮೂಹಿಕ ಕಾರ್ಯಾಚರಣೆ ಆಗಬೇಕಿದೆ
ಮನುಷ್ಯನಿಗೆ ಅತೀ ಮುಖ್ಯವಾಗಿ ಬೇಕಾದ ಕುಡಿಯವ ನೀರಿನ ಸರಬರಾಜು ವಿಚಾರದಲ್ಲಿ ಜಲಮಂಡಳಿ, ಪುರಸಭೆ ಹಾಗೂ ಸಂಘ-ಸAಸ್ಥೆಗಳ ಸಾಮೂಹಿಕ ಕಾರ್ಯಾಚರಣೆಯಿಂದ ಮಾತ್ರ ನೀರಿನ ಒಂದಷ್ಟು ಕೊರತೆಯನ್ನು ನೀಗಿಸಲು ಅನುವಾಗುತ್ತದೆ.
ಮನೆಗಳ ಮುಂದೆ ನೀರಿಗಾಗಿ ಕಾವಲು
ಕುಶಾಲನಗರದ ಬಹುತೇಕ ಕಡೆಗಳಲ್ಲಿ ನಿವಾಸಿಗಳು ಖಾಲಿ ಇರುವಂತಹ ಬಿಂದಿಗೆ, ಬಕೆಟ್, ಪ್ಲಾಸ್ಟಿಕ್ ಡಬ್ಬಗಳೊಂದಿಗೆ ನೀರಿನ ವಾಹನವನ್ನು ಕಾಯುತ್ತಾ ತಮ್ಮ ತಮ್ಮ ಮನೆಯಂಗಳದಲ್ಲಿ ಕಾವಲು ಕಾಯುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಮೊದಲೇ ನೆತ್ತಿ ಸುಡುವ ಬಿಸಿಲ ಧಗೆಯ ನಡುವೆ ಕುಡಿಯುವ ನೀರಿಗೆ ಕಾಡುತ್ತಿರುವ ಭೀಕರ ಬರ ಮಂದಿಯ ನೆಮ್ಮದಿ ಕಸಿದಿದೆ.
ಹಾರಂಗಿ ನೀರು ಶಾಶ್ವತ ಯೋಜನೆಯಾಗಬೇಕಿದೆ
ಕುಶಾಲನಗರಕ್ಕೆ ಇದೀಗ ಕಾಡುತ್ತಿರುವ ಕುಡಿಯುವ ನೀರಿನ ಬರವನ್ನು ತಪ್ಪಿಸಲು ಹಾರಂಗಿ ಜಲಾಶಯದ ನೀರಿನ ಯೋಜನೆಯನ್ನು ಕಾರ್ಯಗತಗೊಳಿಸುವಂತಹ ಗಂಭೀರವಾದ ಚಿಂತನೆ ಇನ್ನಾದರೂ ಚುನಾಯಿತರಿಂದ ನಡೆಯಬೇಕಿದೆ.
ಏಕೆಂದರೆ ಕಾವೇರಿಯಲ್ಲಿ ನೀರು ಬರಿದಾದ ಬಳಿಕ ಹಾರಂಗಿ ಜಲಾಶಯದಲ್ಲಿ ಲಭ್ಯವಿರುವಂತಹ ನೀರನ್ನು ಕುಶಾಲನಗರದ ಜನತೆಗೆ ಹರಿಸುವಂತಹ ಶಾಶ್ವತ ಯೋಜನೆಯನ್ನು ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಕುಳಿತು ಚಿಂತಿಸಬೇಕಿದೆ.
ಫಲಪ್ರದವಾಗದ ರೂ. ೮೦ ಕೋಟಿಗಳ ಯೋಜನೆ
ಕಳೆದ ಹತ್ತು ವರ್ಷಗಳ ಹಿಂದೆ ಸ್ಥಳೀಯ ಜಲಮಂಡಳಿ ಹಾರಂಗಿ ಜಲಾಶಯದಿಂದ ಕುಶಾಲನಗರಕ್ಕೆ ಕುಡಿಯುವ ನೀರು ತರುವ ಯೋಜನೆ ರೂಪಿಸಿ ರೂ. ೮೦ ಕೋಟಿಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಕುಶಾಲನಗರ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಂಡಿಸಿತ್ತು.
ಅAದರೆ ಹಾರಂಗಿಯಿAದ ಕುಶಾಲನಗರದವರೆಗೆ ಪೈಪ್ಲೈನ್ಗಳನ್ನು ಅಳವಡಿಸಿ ನೀರುತರುವ ಯೋಜನೆ ಅದಾಗಿತ್ತು. ಆದರೆ ಅಂದು ಪಟ್ಟಣ ಪಂಚಾಯಿತಿಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಇದೇ ಬಿಜೆಪಿ ಆಡಳಿತ ಅಂದಿನ ಶಾಸಕ ಅಪ್ಪಚ್ವು ರಂಜನ್ ಅವರನ್ನು ಪ್ರೇರೇಪಿಸಿ ಸ್ವಲ್ಪ ಶ್ರಮ ಹಾಕಿದ್ದರೆ ಯೋಜನೆ ಕಾರ್ಯರೂಪಕ್ಕೆ ಬರುತ್ತಿತ್ತು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಆ ಯೋಜನೆ ಹಳ್ಳ ಹಿಡಿಯಿತು.
ರೂ. ೪೦ ಕೋಟಿಗಳ ಯೋಜನೆ
ಕುಶಾಲನಗರ ಪಟ್ಟಣದಿಂದ ೮ ಕಿ.ಮೀ. ದೂರದ ಹಾರಂಗಿ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆ ಹಳ್ಳಹಿಡಿದೊಡನೆ ಮತ್ತೆ ಅದೇ ಹಾರಂಗಿ ನದಿಯಿಂದ ಸುಮಾರು ೫ ಕಿ.ಮೀ. ದೂರದ ಹಳೇ ಕೂಡಿಗೆ ಬಳಿಯಿಂದ ನೀರು ತರುವ ರೂ. ೪೦ ಕೋಟಿಗಳ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ ಎನ್ನಲಾಗಿದೆ.
ಅಂದರೆ ‘ಕೊಂಕಣ ಸುತ್ತಿ ಮೈಲಾರಕ್ಕೆ ಬಂದAತೆ' ಎಂಬ ನಾಣ್ನುಡಿಯಂತೆ ಹಾರಂಗಿಯಿAದ ನೇರವಾಗಿ ಕುಶಾಲನಗರಕ್ಕೆ ಜಲಮಾರ್ಗ ರೂಪಿಸದೇ ಕೂಡಿಗೆಯಿಂದ ಯೋಜಿಸಲಾಗಿದೆ.
ಅಂದರೆ, ಕಾವೇರಿ ನದಿ ನೀರಿಲ್ಲದೇ ಬರಿದಾದ ಸಂದರ್ಭಗಳಲ್ಲಿ ಹಾರಂಗಿಯಿAದ ನದಿಗೆ ಹರಿಬಿಟ್ಟ ನೀರನ್ನು ಹಳೆಯ ಕೂಡಿಗೆಯ ಬಳಿ ಇರುವ ಕಾವೇರಿ ಹಾಗೂ ಹಾರಂಗಿ ನದಿಗಳ ಸಂಗಮದ ಬಳಿ ಕಟ್ಟೆಯೋಪಾದಿಯ ಕೊಳವೆ ನಿರ್ಮಿಸಿ ಅದರಿಂದ ನೀರನ್ನು ಮೇಲೆತ್ತಿ ಕುಶಾಲನಗರ ಪಟ್ಟಣದ ನಿವಾಸಿಗಳಿಗೆ ಹರಿಸುವ ಯೋಜನೆ ಇದಾಗಿದೆ.
ಜಲಮಂಡಳಿ ತಯಾರಿಸಿರುವ ರೂ. ೪೦ ಕೋಟಿಗಳ ಕುಡಿಯುವ ನೀರಿನ ಯೋಜನೆಗೆ ರೂ. ೧೬ ಕೋಟಿಗಳನ್ನು ರಾಜ್ಯ ಸರ್ಕಾರ ಭರಿಸಿದರೆ, ಕೇಂದ್ರ ಸರ್ಕಾರ ರೂ. ೨೦ ಕೋಟಿ ನೀಡುತ್ತದೆ.
ಉಳಿದ ರೂ. ೪ ಕೋಟಿಗಳನ್ನು ಕುಶಾಲನಗರ ಪುರಸಭೆ ಭರಿಸಬೇಕಿದೆ ಎಂಬ ಸ್ಪಷ್ಟವಾದ ನಿಯಮವಿದ್ದು, ರಾಜ್ಯದ ಪಾಲಿನ ರೂ. ೧೬ ಕೋಟಿ ಹಣ ನೀಡಿದ್ದು ಖಚಿತವಾದರೆ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ನೀಡುತ್ತದೆ.
ಆದರೆ, ಈಗಿನ ರಾಜ್ಯ ಸರ್ಕಾರ ಅದ್ಯಾವಾಗ ಹಣ ಬಿಡುಗಡೆ ಮಾಡುತ್ತದೋ... ಅದ್ಯಾವಾಗ ಕೂಡಿಗೆಯ ಬಳಿ ನೀರಿನ ಕಾಮಗಾರಿ ಆರಂಭವಾಗುತ್ತದೋ... ಕುಶಾಲನಗರದ ಜನ ಅದು ಯಾವಾಗ ಹಾರಂಗಿಯ ನೀರನ್ನು ಕುಡಿಯುವ ಗ್ಯಾರಂಟಿ ಭಾಗ್ಯ ಸಿಗುವುದೋ ಕಾದು ನೋಡಬೇಕಷ್ಟೆ.
- ಕೆ.ಎಸ್. ಮೂರ್ತಿ, ಕಣಿವೆ.