ಕುಶಾಲನಗರ, ಮೇ.೧೨: ಕೊಡಗು ಜಿಲ್ಲೆಯ ವಾತಾವರಣ ಪ್ರವಾಸೋ ದ್ಯಮಕ್ಕೆ ಪೂರಕವಾಗಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಚೇಂಬರ್ ಅಪ್ ಕಾಮರ್ಸ್ ವತಿಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿ ಸಿದ್ದ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಸೇವೆಗಳನ್ನು ಒದಗಿಸಿದಲ್ಲಿ ಜಿಲ್ಲೆಯ ಉದ್ಯಮಗಳ ಬೆಳವಣಿಗೆ ಸಾಧ್ಯ ಎಂದರು. ಕುಶಾಲನಗರದಲ್ಲಿ ಮೂರು ದಶಕಗ ಳಿಂದ ಚೇಂಬರ್ ಅಪ್ ಕಾಮರ್ಸ್ ತನ್ನ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸು ತ್ತಿದೆ. ಹಿಂದಿನ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳು ವರ್ತಕರಿಗೆ ಅನಾವಶ್ಯಕ ಕಿರುಕುಳ ನೀಡಿ ವರ್ತಕರಿಗೆ ಸಮಸ್ಯೆ ಗಳನ್ನು ಉಂಟು ಮಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಚೇಂಬರ್ ವರ್ತಕರ ಪರವಾಗಿ ನಿಂತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿ ದಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ನಿರ್ದೇಶಕ ಎಸ್.ಕೆ. ಸತೀಶ್ ಮಾತನಾಡಿ, ನಿರಂತರ ಕೆಲಸಗಳ ಒತ್ತಡದ ಜಂಜಾಟದಲ್ಲಿರುವ ಉದ್ಯಮಿಗಳು, ವರ್ತಕರ ದಿನಾಚರಣೆಯನ್ನು ಆಚರಿಸುವಂತಾ ಗಬೇಕು. ಕುಶಾಲನಗರ ಸ್ಥಾನಿಯ ಸಮಿತಿ ವತಿಯಿಂದ ಉದ್ದೇಶಿಸಿರುವ ವರ್ತಕರ ಭವನಕ್ಕೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಚೇಂಬರ್ ಸ್ಥಾನೀಯ ಸಮಿತಿ ಅಧ್ಯಕ್ಷ ರವೀಂದ್ರ.ವಿ.ರೈ ಮಾತನಾಡಿ, ವರ್ತಕರ ಸಹಕಾರದಿಂದ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ. ಭವನ ನಿರ್ಮಾಣಕ್ಕೆ ಬಹುತೇಕ ಎಲ್ಲಾ ಪೂರ್ವಸಿದ್ಧತೆಗಳು ನಡೆದಿದೆ. ಸದ್ಯದಲ್ಲೇ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಪ್ರತಿಯೊಬ್ಬರೂ ಕೈಜೋಡಿ ಸಬೇಕೆಂದರು.
ಕುಶಾಲನಗರ ಸ್ಥಾನಿಯ ಸಮಿತಿಯ ಸ್ಥಾಪಕ ಅಧ್ಯಕ್ಷ ಪಿ.ಪಿ.ಸತ್ಯನಾರಾಯಣ, ಮಾಜಿ ಅಧ್ಯಕ್ಷ ಬಿ.ಅಮೃತ್ರಾಜ್, ಕಾರ್ಯದರ್ಶಿ ಕೆ.ಎಸ್. ನಾಗೇಶ್, ಕಾರ್ಯಕ್ರಮ ನಿರ್ದೇಶಕ ಕೆ.ಎನ್.ದೇವರಾಜ್, ಉಪಾಧ್ಯಕ್ಷ ಎಂ.ಡಿ.ರAಗಸ್ವಾಮಿ, ನಿರ್ದೇಶಕರಾದ ಎನ್.ವಿ.ಬಾಬು, ಚಿತ್ರ, ರೂಪ, ಚಂದ್ರು, ಎಂ.ಕೆ.ದಿನೇಶ್ ಮತ್ತಿತರರು ಇದ್ದರು.