ಮಡಿಕೇರಿ, ಮೇ ೧೪: ಮಡಿಕೇರಿಯ ಬ್ರೆöÊನೋಬ್ರೆöÊನ್ ಕೇಂದ್ರದ ವತಿಯಿಂದ ಇತ್ತೀಚೆಗೆ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರೆöÊನೋಬ್ರೆöÊನ್ ಕೇಂದ್ರದ ಇಪ್ಪತ್ತನೇ ಬ್ಯಾಚ್‌ನ ಒಟ್ಟು ೨೦ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಎರಡೂವರೆ ವರ್ಷ ೧೦ ಹಂತಗಳಿರುವ ಅಬಾಕಸ್ ಕೋರ್ಸ್ ಅನ್ನು ಈ ವಿದ್ಯಾರ್ಥಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ.
ಅಂತರರಾಷ್ಟಿçÃಯ ಬ್ರೆöÊನೋಬ್ರೆöÊನ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಹ್ಮಣ್ಯಂ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ ಇಲ್ಲಿಯವರೆಗೆ ಮಡಿಕೇರಿ ಕೇಂದ್ರದಿAದ ಒಟ್ಟು ೫೪೦ ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಿದ್ದಾರೆ. ಇದು ರಾಜ್ಯದ ಇತರ ಬ್ರೆöÊನೋಬ್ರೆöÊನ್ ಕೇಂದ್ರಗಳಲ್ಲೆ ಅತ್ಯಧಿಕ ಮತ್ತು ಎಲ್ಲಾ ಕೇಂದ್ರಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಮಾತನಾಡಿ ಮಕ್ಕಳಲ್ಲಿ ಸ್ಮರಣ ಶಕ್ತಿ, ಕಲ್ಪನಾ ಶಕ್ತಿ, ಆತ್ಮವಿಶ್ವಾಸ, ಚುರುಕುತನ, ಬಹುಕಾರ್ಯ ಕೌಶಲ್ಯ, ಛಾಯಾಗ್ರಹಣ ಶಕ್ತಿ ಸೇರಿದಂತೆ ಮಕ್ಕಳ ಕನಸ್ಸಿಗೆ ರೆಕ್ಕೆ ಸಿಕ್ಕಂತಾಗಿದೆ ಎಂದರು. ವಿದ್ಯಾರ್ಥಿಗಳು ಕೂಡ ಅಬಾಕಸ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.ಕೊಡಗಿನ ಸಾಂಪ್ರದಾಯಿಕ “ಒಡಿ ಕತ್ತಿ”ಯನ್ನು ಮಾಪಂಗಡ ಮೋಹನ್ ಕರುಂಬಯ್ಯ ಅವರು ನೆನಪಿನ ಕಾಣಿಕೆಯಾಗಿ ಅರುಲ್ ಸುಬ್ರಮಣ್ಯಂ ಅವರಿಗೆ ನೀಡಿದರು.
ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪೋಷಕರ ಉಮ್ಮತ್ ಆಟ್ ಪ್ರದರ್ಶನ ಗಮನ ಸೆಳೆಯಿತು.
ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು
ಕೃಷ್ಣಪ್ರಿಯ ಪಿ.ಕೆ, ಚಹನ ಎನ್.ಕೆ, ಅನ್ವಿ.ಪಿ, ನಿಧಿ ಟಿ.ಪಿ, ನಿತ್ಯ ಟಿ.ಪಿ, ನೈಶ ನಾಚಯ್ಯ ಪಾಲೆಕಂಡ, ಕುನಲ್ ಪ್ರಸಾದ್ ಡಬ್ಲ್ಯೂ.ವಿ, ಶಾನ್ವಿಕ ಡಬ್ಲ್ಯೂ.ವಿ, ಪ್ರೀತಮ್ ಟಿ.ಎಂ, ದೀಶ್ನ ಡಿ.ಎನ್, ಕುನಾಲ್ ರಾಜ್, ಆರ್ನ ಕುಶಾಲಪ್ಪ, ಅಫ್ಹಾನ್ ಅಹಮ್ಮದ್ ಟಿ.ಬಿ, ತ್ರಿಶಾ ಎ.ವೈ, ಅಪೇಕ್ಷ ಆರ್. ರೈ, ಮೊಹಮ್ಮದ್ ಆದಿಯಾನ್ ಡಿ.ಎ, ಎನ್.ನಿರನ್ ಪೂವಣ್ಣ, ನಾಪಂಡ ನಿಶಾ ಪೂವಣ್ಣ, ಮೀನಾಕ್ಷಿ ಡಿ.ಎಂ ಹಾಗೂ ಸಂಜನಾ ಪಿ.ಕೆ.