ಮಡಿಕೇರಿ, ಮೇ ೧೪: ಕಳೆದ ಮಳೆಗಾಲದಲ್ಲಿ ಮಣ್ಣು ಸಡಿಲಗೊಂಡು ಕುಸಿದ ಬರೆಯ ಒಂದು ಭಾಗದ ಬಗ್ಗೆ ನಗರಾಡಳಿತ ತಲೆಯೇ ಕೆಡಿಸಿಕೊಳ್ಳದ ಕಾರಣ ಇಂದೋ-ನಾಳೆಯೋ ಯಾರನ್ನಾದರು ಬಲಿ ಪಡೆಯುವ ರೀತಿ ಅಪಾಯಕಾರಿಯಾಗಿ ಬಾಯ್ತೆರೆದು ನಿಂತಿದೆ. ನಗರದ ಅಸ್ಟೊçÃಟರ್ಫ್ ಹಾಕಿ ಮೈದಾನದಿಂದ ಎಫ್.ಎಂ.ಸಿ ಕಾಲೇಜು ರಸ್ತೆಗೆ ತೆರಳುವ ರಸ್ತೆಯ ಎಡಭಾಗ ರಾಜಕಾಲುವೆಗೆ ಹೊಂದಿಕೊAಡಿದ್ದು, ರಸ್ತೆ ಬದಿಯ ಬರೆಯ ಒಂದು ಭಾಗ ಕಳೆದ ಮಳೆಗಾಲದ ಸಂದರ್ಭ ಕುಸಿದು ರಾಜಕಾಲುವೆಯ ಪಾಲಾಗಿತ್ತು. ಇದೀಗ ಮತ್ತೊಂದು ಮಳೆಗಾಲ ಸಮೀಪಿಸುತ್ತಿದ್ದರೂ ಯಾವುದೇ ದುರಸ್ತಿ ಕಾಮಗಾರಿ ನಡೆಯದೆ ರಸ್ತೆ ಬದಿಯಲ್ಲಿ ನಡೆಯುವ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಮುಂಜಾಗ್ರತಾ ಕ್ರಮವಾಗಿ ಇರಿಸಲಾಗಿದ್ದ ಬ್ಯಾರಿಕೇಡ್ ಕೂಡ ಮಾಯವಾಗಿದ್ದು, ಬರೆಯ ತೆರೆದ ಬಾಯಿಯ ಸುತ್ತಲೂ ಪೊದೆಗಳು ಆವರಿಸಿರುವ ಪರಿಣಾಮ ಅಪಾಯದ ಸುಳಿವಿಲ್ಲದೆ ನಡೆಯುವ ಪಾದಚಾರಿಗಳು ಎಚ್ಚರ ವಹಿಸುವ ಅಗತ್ಯವಿದೆ. ಇತ್ತೀಚೆಗಷ್ಟೆ ಇಲ್ಲಿ ನಡೆಯುವ ವೇಳೆ ಪಾದಚಾರಿಯೋರ್ವರು ಎಡವಿ ರಾಜಕಾಲುವೆಯ ಪಾಲಾಗುತ್ತಿದ್ದರು. ಸ್ಥಳದಲ್ಲೆ ಇದ್ದ ಮತ್ತೋರ್ವ ಪಾದಚಾರಿಯ ಸಮಯಪ್ರಜ್ಜೆಯಿಂದ ಈ ವ್ಯಕ್ತಿಯು ಪಾರಾಗಿದ್ದು ದೊಡ್ಡ ಅನಾಹುತ ಸಂಭವಿಸುವ ಮುನ್ನ ನಗರಸಭೆ ಆಡಳಿತ, ಸ್ಥಳೀಯ ನಗರಸಭಾ ಸದಸ್ಯರು ಇದರ ದುರಸ್ತಿ ಕಾರ್ಯ ನಡೆಸಬೇಕಾಗಿ ಸ್ಥಳೀಯರು 'ಶಕ್ತಿ' ಮೂಲಕ ಒತ್ತಾಯಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಸಹ ಇದೇ ಮಾರ್ಗವಾಗಿ ಪ್ರತಿನಿತ್ಯ ತೆರಳುತ್ತಿದ್ದು ತಾತ್ಕಾಲಿಕ ಅಥವಾ ಶಾಶ್ವತ ಪರಿಹಾರಕ್ಕೆ ನಗರಸಭೆ ಮುಂದಾಗಬೇಕಿದೆ.