ಮಡಿಕೇರಿ, ಮೇ ೧೪: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೀರಾಜ ಪೇಟೆ ಶಿವಕೇರಿಯ ಶ್ರೀ ಆದಿ ದಂಡಿನ ಮಾರಿಯಮ್ಮ ಮತ್ತು ಶ್ರೀ ಚಾಮುಂಡಿ (ಚೌಂಡಿ) ದೇವರ ಉತ್ಸವವು ಶ್ರದ್ಧಾಭಕ್ತಿ ಯಿಂದ ನಡೆಯಿತು.

ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.

ದೇವಾಲಯದಲ್ಲಿ ಮುಂಜಾನೆ ಯಿಂದ ಗಣಪತಿ ಹೋಮ, ಕಲಶ ಪೂಜೆ, ದೇವಿಗೆ ಹೂವಿನ ಅಲಂಕಾರ ನೆರವೇರಿತು. ನಂತರ ಮಹಾಪೂಜೆ ಮತ್ತು ಮಂಗಳಾರತಿ ಜರುಗಿತು.

ಅಪರಾಹ್ನ ವೀರಾಜಪೇಟೆಯ ಮುಖ್ಯಬೀದಿಯಲ್ಲಿ ಅಲಂಕೃತ ಮಂಟಪದೊAದಿಗೆ ದೇವರ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ನಂತರ ತಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಬಳಿಕ ದೇವಿಗೆ ಆರತಿ ಪೂಜೆ, ಮಹಾಪೂಜೆ ಹಾಗೂ ಮಂಗಳಾರತಿ ನೆರವೇರಿತು.