ಗೋಣಿಕೊಪ್ಪ ವರದಿ, ಮೇ ೧೪: ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯ ಪುರುಷರ ವಿಭಾಗದ ಮಂಗಳವಾರದ ಪಂದ್ಯಗಳಲ್ಲಿ ಮಾಚೇಟೀರ, ತಂಬುಕುತ್ತೀರ, ಚಿರಿಯಪಂಡ, ಮಾಳೇಟೀರ (ಕೆದಮುಳ್ಳೂರು), ಮಚ್ಚಮಾಡ ಹಾಗೂ ಕುಂದತ್ ಮಾಳೇಟೀರ ಗೆದ್ದು ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡವು.

ಫಲಿತಾಂಶ ; ಮಾಚೇಟೀರ ತಂಡವು ಕಾಳಿಮಾಡವನ್ನು ೮ ವಿಕೆಟ್‌ಗಳಿಂದ ಪರಾಭವಗೊಳಿಸಿತು. ಕಾಳಿಮಾಡ ೭ ವಿಕೆಟ್ ನಷ್ಟಕ್ಕೆ ೪೬ ರನ್ ದಾಖಲಿಸಿತು. ಮಾಚೇಟೀರ ೨ ವಿಕೆಟ್ ಕಳೆದುಕೊಂಡು ೫.೪ ಓವರ್‌ಗಳಲ್ಲಿ ಗೆದ್ದು ಬೀಗಿತು. ಮಾಚೇಟೀರ ಪರ ಕವನ್ ೨ ವಿಕೆಟ್, ಭರತ್ ೧೯ ರನ್, ಕಾಳಿಮಾಡ ಪರ ಪ್ರತೀಶ್, ಗಣಪತಿ ತಲಾ ೯ ರನ್ ಗಳಿಸಿದರು.

ತಂಬುಕುತ್ತೀರ ತಂಡಕ್ಕೆ ಚೆನ್ನಪಂಡ ವಿರುದ್ಧ ೭೮ ರನ್‌ಗಳ ಜಯ ದೊರೆಯಿತು. ತಂಬುಕುತ್ತೀರ ೨ ವಿಕೆಟ್ ನಷ್ಟಕ್ಕೆ ೧೦೯ ರನ್ ಪೇರಿಸಿತು. ಚೆನ್ನಪಂಡ ೬ ವಿಕೆಟ್ ಕಳೆದುಕೊಂಡು ೩೧ ರನ್ ಗಳಿಸಿತು. ಚೆನ್ನಪಂಡ ಪರ ದರ್ಶನ್ ೧೩ ರನ್, ದೀಕ್ಷಿತ್ ೨ ವಿಕೆಟ್, ತಂಬುಕುತ್ತೀರ ಅನಿಲ್ ೫೭ ರನ್, ದೀಪಕ್ ೨, ಸುಕೇಶ್ ತಲಾ ೧ ವಿಕೆಟ್ ಕಬಳಿಸಿದರು. ಚಿರಿಯಪಂಡಕ್ಕೆ ಅಳಮೇಂಗಡ ವಿರುದ್ದ ೫ ರನ್‌ಗಳ ಗೆಲುವು ದೊರೆಯಿತು. ಚಿರಿಯಪಂಡ ೪ ವಿಕೆಟ್ ಕಳೆದುಕೊಂಡು ೫೭ ರನ್ ಗುರಿ ನೀಡಿತು. ಅಳಮೇಂಗಡ ೫ ವಿಕೆಟ್ ನಷ್ಟಕ್ಕೆ ೫೧ ರನ್ ಗಳಿಸಿ ಸೋಲಿಗೆ ಶರಣಾಯಿತು. ಅಳಮೇಂಗಡ ಸೋಮಯ್ಯ ೧ ವಿಕೆಟ್, ಅಳಮೇಂಗಡ ದಿಲೀಪ್ ೨೩ ರನ್, ಚಿರಿಯಪಂಡ ರ‍್ವಿನ್ ೨೭ ರನ್, ಸಚಿನ್ ೨ ವಿಕೆಟ್ ಗಳಿಸಿದರು.

ಮಾಳೇಟೀರ (ಕೆದಮುಳ್ಳೂರು) ತಂಡವು ಮುಕ್ಕಾಟೀರ (ಕುಂಜಿಲಗೇರಿ)ಯನ್ನು ೩೬ ರನ್‌ಗಳಿಂದ ಸೋಲಿಸಿತು. ಮಾಳೇಟೀರ ೧ ವಿಕೆಟ್ ಕಳೆದುಕೊಂಡು ೯೨ ರನ್ ದಾಖಲಿಸಿತು. ಮುಕ್ಕಾಟೀರ ೪ ವಿಕೆಟ್ ನಷ್ಟಕ್ಕೆ ೫೬ ರನ್ ಸೇರಿಸಿತು. ಮಾಳೇಟೀರ ನವೀನ್ ೫೦ ರನ್, ಮುಕ್ಕಾಟೀರ ಚೆಂಗಪ್ಪ ೩೫ ರನ್, ಮಾಳೇಟೀರ ಅನ್ಸುಲ್ ೨ ವಿಕೆಟ್ ಪಡೆದರು.

ಮಚ್ಚಮಾಡ ತಂಡವು ಗಾಂಡAಗಡವನ್ನು ೬೫ ರನ್‌ಗಳಿಂದ ಸೋಲಿಸಿತು. ಮಚ್ಚಮಾಡ ೩ ವಿಕೆಟ್ ನಷ್ಟಕ್ಕೆ ೯೩ ರನ್ ದಾಖಲಿಸಿತು. ಗಾಂಡAಗಡ ೨೮ ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಮಚ್ಚಮಾಡ ಬೋಪಣ್ಣ ೪೨ ರನ್, ದರ್ಶನ್ ೩ ವಿಕೆಟ್, ಗಾಂಡAಗಡ ಅವಿನ್ ೧೪ ರನ್ ದಾಖಲಿಸಿದರು.

ಕುಂದತ್ ಮಾಳೇಟೀರಕ್ಕೆ ಮುಕ್ಕಾಟೀರ (ಹರಿಹರ-ಬೆಳ್ಳೂರು) ವಿರುದ್ದ ೭ ವಿಕೆಟ್ ಜಯ ಲಭಿಸಿತು. ಮುಕ್ಕಾಟೀರ ೬ ವಿಕೆಟ್ ಕಳೆದುಕೊಂಡು ೪೮ ರನ್‌ಗಳ ಗುರಿ ನೀಡಿತು. ಮಾಳೇಟೀರ ೩ ವಿಕೆಟ್ ಕಳೆದುಕೊಂಡು ೫.೧ ಓವರ್‌ಗಳಲ್ಲಿ ಗೆದ್ದು ಬೀಗಿತು. ಮುಕ್ಕಾಟೀರ ಬೋಪಣ್ಣ, ಕೌಶಿಕ್ ತಲಾ ೯ ರನ್, ಭವನ್, ಮಾಳೇಟೀರ ನಿತಿನ್, ವಿನಯ್ ತಲಾ ೨ ವಿಕೆಟ್ ಕಬಳಿಸಿದರು. ಸೋಲಿನಲ್ಲೂ ಉತ್ತಮ ಪ್ರದರ್ಶನ ನೀಡಿದ ಕಾಳಿಮಾಡ ಡ್ಯಾನಿ, ಚೆನ್ನಪಂಡ ದೀಕ್ಷಿತ್ ದೇವಯ್ಯ, ಅಳಮೇಂಗಡ ಸೋಮಯ್ಯ, ಮುಕ್ಕಾಟೀರ ಚೆಂಗಪ್ಪ, ಗಾಂಡAಗಡ ಅವಿನ್, ಮುಕ್ಕಾಟೀರ ಭವನ್ ಪಂದ್ಯ ಶ್ರೇಷ್ಠ ಗೌರವ ಸ್ವೀಕರಿಸಿದರು.