ಮಡಿಕೇರಿ, ಮೇ ೧೪: ತಾ. ೯ ರಂದು ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆಯಲ್ಲಿನ ವಿವಿಧ ಶಾಲೆಗಳ ಫಲಿತಾಂಶವನ್ನು ಇಲ್ಲಿ ನೀಡಲಾಗಿದೆ.

ಶನಿವಾರಸಂತೆ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ೧೦೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೧೦೪ ಮಂದಿ ಉತ್ತೀರ್ಣರಾಗಿ ಶೇ. ೯೯.೦೪ ಫಲಿತಾಂಶ ಲಭಿಸಿದೆ. ವಿದ್ಯಾರ್ಥಿಗಳಾದ ಬಿ.ಎಸ್. ಜ್ಞಾನೇಶ್ ಕುಮಾರ್- ೬೧೮ (ಶೇ. ೯೮.೮), ಸಿ.ಹೆಚ್. ದೀಕ್ಷಾ -೬೧೬ (ಶೇ. ೯೮.೫೬), ಎನ್. ಕುಚಳ್ಳಿ ತನಿಷ್ಕಾ- ೬೧೬ (ಶೇ. ೯೮.೫೬) ಅಂಕಗಳನ್ನು ಗಳಿಸಿದ್ದಾರೆ.

ಕುಶಾಲನಗರ ತಾಲೂಕಿನ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಗೆ ಶೇ. ೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದಿದ್ದ ೨೭ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕೂಡಿಗೆಯಲ್ಲಿರುವ ಆಂಗ್ಲ ಮಾಧ್ಯಮ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗೆ ಶೇ. ೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದಿದ್ದ ೪೬ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕೊಟ್ಟೂರು ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯು ಸತತ ೧೪ ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನೊಳಗೊಂಡ ಈ ಶಾಲೆಯಲ್ಲಿ ಈ ಬಾರಿ ೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿನಿ ಶೋಭಿತ ಎ.ಪಿ. ೬೧೦ (ಶೇ. ೯೭.೬) ಅಂಕಗಳೊAದಿಗೆ ಶಾಲೆಗೆ ಪ್ರಥಮ, ಟೀನಾ ಬಿ.ಎಂ. ೬೦೧(ಶೇ. ೯೬.೧೬) ಅಂಕಗಳೊAದಿಗೆ ಶಾಲೆಗೆ ದ್ವಿತೀಯ, ಕೆ.ಎಸ್. ಲಕ್ಷಿತ ೫೯೧ (ಶೇ. ೯೪.೫೬) ಅಂಕಗಳೊAದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಶನಿವಾರಸAತೆ ವಿಘ್ನೇಶ್ವರ ಬಾಲಕಿಯರ ಅನುದಾನಿತ ಪ್ರೌಢಶಾಲೆಗೆ ಶೇ. ೧೦೦ ಫಲಿತಾಂಶ ಬಂದಿದ್ದು ಶಾಲೆಯ ೩೧ ಬಾಲಕಿಯರು ಪರೀಕ್ಷೆ ಬರೆದಿದ್ದು ಎಲ್ಲಾ ಬಾಲಕಿಯರು ತೇರ್ಗಡೆಯಾಗಿದ್ದಾರೆ. ಇದೆ ವಿದ್ಯಾಸಂಸ್ಥೆಯ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆಗೆ ಇದೆ ಮೊದಲ ಬ್ಯಾಚಿನ ಹತ್ತನೆ ತರಗತಿ ಪರೀಕ್ಷೆಯಾಗಿದ್ದು ಮೊದಲ ಬ್ಯಾಚಿನಲ್ಲೆ ಶಾಲೆಗೆ ಶೇ. ೧೦೦ ಫಲಿತಾಂಶ ದೊರೆತಿದ್ದು, ಪರೀಕ್ಷೆ ಬರೆದಿದ್ದ ಎಲ್ಲಾ ೮ ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ವಿಘ್ನೇಶ್ವರ ಬಾಲಕಿಯರ ಅನುದಾನಿತ ಶಾಲೆಯ ವಿದ್ಯಾರ್ಥಿನಿಯರಾದ ಎಸ್.ಜೆ. ಹರ್ಷಿತ ೬೨೫ಕ್ಕೆ ೫೭೩ ಅಂಕ (ಶೇ. ೯೧.೬೮) ಮತ್ತು ಜಿ.ಎಸ್. ಹರಿಣಾಕ್ಷಿ ೫೭೦ ಅಂಕ (೯೧.೨) ಅಂಕಗಳಿಸಿದ್ದರೆ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆಯ ಬಿ.ಹೆಚ್. ಬೃಂದ ೬೨೫ಕ್ಕೆ ೫೯೫ ಅಂಕ (೯೫.೨) ಮತ್ತು ಚಿತ್ರಕಲಾ ೫೫೭ ಅಂಕ (ಶೇ. ೮೯.೧೨) ಅಂಕ ಗಳಿಸಿದ್ದಾರೆ.

ಮುಳ್ಳೂರು ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಗೆ ಶೇ. ೧೦೦ ರಷ್ಟು ಫಲಿತಾಂಶ ದೊರೆತಿದ್ದು, ಪರೀಕ್ಷೆ ಬರೆದ ಎಲ್ಲಾ ೮ ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಈ ಪೈಕಿ ಶಾಲೆಯ ಮೃದುಲ ಶೇ. ೮೯.೭೬ ಮತ್ತು ಕೆ.ಹೆಚ್. ಪ್ರೇಕ್ಷಿತ್ ಶೇ. ೮೯.೧೨ ಅಂಕಗಳಿಸಿದ ಶಾಲೆಗೆ ಮೊದಲೆರಡು ಸ್ಥಾನಗಳನ್ನು ಪಡೆದಿದ್ದಾರೆ.

ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಗೆ ಶೇ. ೧೦೦ ರಷ್ಟು ಫಲಿತಾಂಶ ದೊರೆತಿದ್ದು ಪರೀಕ್ಷೆ ಬರೆದ ಶಾಲೆಯ ಎಲ್ಲಾ ೧೭ ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ. ೧೦೦ ರಷ್ಟು ಫಲಿತಾಂಶ ದೊರೆತಿದೆ. ಪರೀಕ್ಷೆ ಬರೆದ ಶಾಲೆಯ ಎಲ್ಲಾ ೩೯ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶಾಲೆಯ ಹೆಚ್.ಎ. ಮೊಹಮ್ಮದ್ ಅಶಿರ್ ೫೭೫ ಅಂಕ (ಶೇ. ೯೩.೬೦), ಕೆ.ಸಿ. ಬಿಂದುಶ್ರೀ ೫೭೭ ಅಂಕ (ಶೇ. ೯೨.೩೨) ಮತ್ತು ಕೆ.ಆರ್. ಜೀವಿತ ೫೭೫ ಅಂಕ (ಶೇ. ೯೨) ಅಂಕಗಳಿಸಿ ಮೊದಲ ೩ ಸ್ಥಾನಗಳನ್ನು ಗಳಿಸಿದ್ದಾರೆ.

ನಿಡ್ತ ಸರಕಾರಿ ಪ್ರೌಢಶಾಲೆಗೆ ಶೇ. ೧೦೦ ಫಲಿತಾಂಶ ದೊರೆತಿದ್ದು, ಪರೀಕ್ಷೆ ಬರೆದ ಎಲ್ಲಾ ೧೫ ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ೩೩ ಶಾಲೆಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶಕ್ಕೆ ಭಾಜನವಾಗಿವೆ. ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಶೇ. ೯೨.೪೭ ರಷ್ಟು ಫಲಿತಾಂಶ ಲಭಿಸಿದೆ. ತಾಲೂಕಿನಲ್ಲಿ ಒಟ್ಟು ೨,೩೫೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೨,೧೭೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಸಕ್ತ ವರ್ಷ ೧,೨೨೭ ಬಾಲಕಿಯರು ಮತ್ತು ೧,೧೨೬ ಬಾಲಕರು ಪರೀಕ್ಷೆ ಬರೆದಿದ್ದರು.

ಪಟ್ಟಣದ ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು, ಗೋಣಿಮರೂರು ಸರ್ಕಾರಿ ಪ್ರೌಢಶಾಲೆ, ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆ, ಅಂಕನಳ್ಳಿ ಸರ್ಕಾರಿ ಪ್ರೌಢಶಾಲೆ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಾಂತಿನೀಕೇತನ ಪ್ರೌಢಶಾಲೆ, ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ ಶೇ. ೧೦೦ ಫಲಿತಾಂಶ ಪಡೆದಿವೆ.

ಇದರೊಂದಿಗೆ ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ, ಚೌಡ್ಲು ಜ್ಞಾನವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಅಂಕನಳ್ಳಿ ಸೆಂಟ್‌ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕಿರಗಂದೂರು ಸರ್ಕಾರಿ ಪ್ರೌಢಶಾಲೆ, ನೆಲ್ಲಿಹುದಿಕೇರಿ ಆಂಗ್ಲೋ ವರ್ಣಾಕುಲರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನಿಡ್ತ ಸರ್ಕಾರಿ ಪ್ರೌಢಶಾಲೆ, ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆ, ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೊಡ್ಡಕೊಡ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಟ್ಟಿಹೊಳೆ ನಿರ್ಮಲ ವಿದ್ಯಾಭವನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೊಡ್ಲಿಪೇಟೆ ಶ್ರೀಸದಾಶಿವ ಸ್ವಾಮೀಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಶಾಲನಗರ ಜ್ಞಾನಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಂಧದಕೋಟೆ ಕೆಎಂಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮಸಗೋಡು ಆಂಗ್ಲ ಮಾಧ್ಯಮ ಶಾಲೆ, ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಸ್ಕೂಲ್, ಕೂಡ್ಲೂರ್ ಯೂನಿಕ್ ಅಕಾಡೆಮಿ ಪ್ರೌಢಶಾಲೆ, ಸೋಮವಾರಪೇಟೆ ಓಎಲ್‌ವಿ ಪ್ರೌಢಶಾಲೆ, ಆಲೂರು ಸಿದ್ದಾಪುರ ಜಾನಕಿ ಕಾಳಪ್ಪ ಪ್ರೌಢಶಾಲೆ, ಶನಿವಾರಸಂತೆ ಸುಪ್ರಜಾ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆ, ತೋಳೂರುಶೆಟ್ಟಳ್ಳಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಬೊಳ್ಳೂರು ಉದ್ಗಮ್ ಶಾಲೆ, ಶನಿವಾರಸಂತೆ ಶ್ರೀ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆಗಳು ಶೇ. ೧೦೦ ಫಲಿತಾಂಶ ಪಡೆದಿವೆ.

ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಪರೀಕ್ಷೆಗೆ ಒಟ್ಟು ೪೩ ವಿದ್ಯಾರ್ಥಿಗಳು ಹಾಜರಾಗಿದ್ದು, ೩೪ ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ನರಿಯಂದಡ ಕೇಂದ್ರ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. ೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ ಒಟ್ಟು ೧೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೊಡಗರಹಳ್ಳಿಯ ಶಾಂತಿನೀಕೇತನ ಪ್ರೌಢಶಾಲೆ ಮತ್ತು ಸುಂಟಿಕೊಪ್ಪದ ಸಂತಮೇರಿ ಪ್ರೌಢಶಾಲೆಗೆ ಶೇ. ೧೦೦ ಫಲಿತಾಂಶ ಬಂದಿದೆ.

ಸಂತಮೇರಿ ಶಾಲೆಯ ೯೨ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾರೂ ಉತ್ತೀರ್ಣರಾಗುವ ಮೂಲಕ ಶೇ. ೧೦೦ ಫಲಿತಾಂಶ ದಾಖಲಿಸಿದ್ದಾರೆ. ಲೋಹಿತ್ ಆರ್. ೫೭೭- ಶೇ. ೯೨.೩೨, ಶಿಫಾ ಎಸ್. ೫೬೦- ಶೇ. ೮೯.೬೦, ಜಿ. ಪೂಜಿತ ಪೂಜಾರಿ ಶೇ. ೮೮.೮೦ ಅಂಕಗಳೊAದಿಗೆ ಮೊದಲ ೩ ಸ್ಥಾನಗಳನ್ನು ಹಂಚಿಕೊAಡಿದ್ದಾರೆ.

ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ೪೦ ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು ೩೯ ಮಕ್ಕಳು ಉತ್ತೀರ್ಣರಾಗುವುದರೊಂದಿಗೆ ಶೇ. ೯೮ ಪಡೆದುಕೊಂಡಿದೆ.

ಸುಂಟಿಕೊಪ್ಪದ ಸರಕಾರಿ ಪ್ರೌಢಶಾಲೆಯಲ್ಲಿ ೨೮ ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರು ಉತ್ತೀರ್ಣರಾಗಿ ಶೇ. ೧೦೦ ಫಲಿತಾಂಶ ದೊರಕಿದೆ.

೭ನೇ ಹೊಸಕೋಟೆ ಸರಕಾರಿ ಪ್ರಾಢಶಾಲೆ ಹತ್ತನೇ ತರಗತಿಯಲ್ಲಿ ೨೧ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೨೦ ಉತ್ತೀರ್ಣಗೊಂಡಿದ್ದು, ಶೇ. ೯೫.೨೩ ಫಲಿತಾಂಶ ಪಡೆದುಕೊಂಡಿದೆ.

ಕಾನ್‌ಬೈಲ್ ಸರಕಾರಿ ಪ್ರಾಢಶಾಲೆಯ ೧೨ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾರೂ ಉತ್ತೀರ್ಣರಾಗುವ ಮೂಲಕ ಶೇ. ೧೦೦ ಫಲಿತಾಂಶ ದಾಖಲಿಸಿದೆ.