ಸುAಟಿಕೊಪ್ಪ, ಮೇ ೧೩: ಸುಂಟಿಕೊಪ್ಪ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ೩ ಕುರಿ, ಕೋಳಿ ಮಾಂಸದ ಅಂಗಡಿಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಸೋಮವಾರ ಸಂಜೆ ಬೀಗ ಜಡಿದರು. ಈ ಸಂದರ್ಭ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ನಾವು ಕಾನೂನು ರೀತಿಯಲ್ಲಿ ಪರವಾನಗೆ ಪಡೆದು ಈ ವ್ಯಾಪಾರ ನಡೆಸುತ್ತಿದ್ದು, ನಮಗೆ ಪಂಚಾಯಿತಿ ವತಿಯಿಂದ ಇದುವರೆಗೆ ಯಾವುದೇ ನೋಟೀಸ್ ನೀಡದೆ ಏಕಾಏಕಿ ಅಂಗಡಿ ಮುಚ್ಚಿರುವುದರಿಂದ ಸಾವಿರಾರು ರೂ. ನಷ್ಟ ಸಂಭವಿಸಿದೆ. ಇದನ್ನು ಯಾರು ಭರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿ ವತಿಯಿಂದ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ತಾತ್ಕಾಲಿಕ ಕಟ್ಟಡ ನಿರ್ಮಿಸಲಾಗಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳಾದ ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆಗಳಿಲ್ಲದಿದ್ದರೂ ಅಲ್ಲಿಗೆ ತೆರಳುವಂತೆ ಒತ್ತಾಯಿಸುತ್ತಿದ್ದಾರೆ. ಎಲ್ಲಾ ಅಂಗಡಿಗಳಿಗೆ ಒಂದೇ ವಿದ್ಯುತ್ ಮೀಟರ್ ಅಳವಡಿಸಲಾಗಿದೆ. ಅಲ್ಲದೆ ಕೋಳಿ ಕುರಿ ಮಾಂಸದ ತ್ಯಾಜ್ಯ ನೀರು ಹರಿಯಲು ವ್ಯವಸ್ಥೆ ಕಲ್ಪಿಸಿಲ್ಲ. ಅಲ್ಲಿ ತೆರಳಿ ಹೇಗೆ ವ್ಯಾಪಾರ ನಡೆಸುವುದು ೬ ಅಡಿ ಇಂಗು ಗುಂಡಿ ತೆಗೆಯಲಾಗಿದ್ದು, ಅದರಲ್ಲಿ ಮಳೆ ನೀರು ಶೇಖರಣೆಯಾಗುತ್ತಿದೆ. ಅಲ್ಲದೆ ಕುರಿ ಕೋಳಿ ಸ್ವಚ್ಛಗೊಳಿಸಲು ಯಾವುದೇ ವ್ಯವಸ್ಥೆಗಳಿಲ್ಲ ಎಂದು ಆರೋಪಿಸಿದ ವ್ಯಾಪಾರಿಗಳು ನಮಗೆ ನ್ಯಾಯ ಸಿಗುವವರೆಗೆ ಕಾನೂನು ಹೋರಾಟ ನಡೆಸುವುದಾಗಿ ವ್ಯಾಪಾರಸ್ಥರಾದ ಮೊಹ್ಮದ್ ಅಸ್ಲಾಂ, ಮೋಹನ್ ಕೆ.ಆರ್. ರಿಯಾಜ್ ಆಹ್ಮದ್ ಹೇಳಿದರು. ಈ ಬಗ್ಗೆ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ಈ ಹಿಂದೆ ಪಂಚಾಯಿತಿ ವತಿಯಿಂದ ನೂತನ ಕಟ್ಟಡ ನಿರ್ಮಿಸಿ ಈಗಾಗಲೇ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ವ್ಯಾಪಾರಸ್ಥರು ತೆರಳಿದ ನಂತರ ನೂತನ ಅಂಗಡಿಗಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.