ಸಂಪಾಜೆ, ಮೇ ೧೪: ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ಶ್ರೀ ಮಹಾ ವಿಷ್ಣುಮೂರ್ತಿ ದೈವದ ಒತ್ತೆಕೋಲವು ತಾ. ೧೧ ರಂದು ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊAಡಿತು.
ತಾ. ೧೦ ರಂದು ರಾತ್ರಿ ದೀಪಾರಾಧನೆ ಹಾಗೂ ಶ್ರೀ ಮಹಾವಿಷ್ಣು ಮೂರ್ತಿ ದೈವದ ಭಂಡಾರವನ್ನು ಒತ್ತೆಕೋಲ ಗದ್ದೆಗೆ ತಂದ ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು.
ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ , ರಾತ್ರಿ ೧೨.೩೦ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, ಬಳಿಕ ಪೊಟ್ಟನ್ ದೈವದ ಕೋಲ ನಡೆಯಿತು.
ರಾತ್ರಿ ೧೦ ಗಂಟೆಗೆ ೬ ತಂಡಗಳನ್ನೊಳಗೊAಡ ಹಗ್ಗಜಗ್ಗಾಟ ಪಂದ್ಯಾವಳಿ ನಡೆಸಲಾಯಿತು. ಪ್ರಥಮ ಬಹುಮಾನವನ್ನು ಆದರ್ಶ ಫ್ರೆಂಡ್ಸ್ ಚಡಾವು ಹಾಗೂ ದ್ವಿತೀಯ ಬಹುಮಾನವನ್ನು ಶ್ರೀ ವಿಷ್ಣು ಸಂಪಾಜೆ, ತೃತೀಯ ಬಹುಮಾನವನ್ನು ಪಯಸ್ವಿನಿ ಸಂಪಾಜೆ ಪಡೆದುಕೊಂಡವು.
ತಾ. ೧೧ ರಂದು ಬೆಳಿಗ್ಗೆ ದೈವದ ಆಗ್ನಿಪ್ರವೇಶ ಹಾಗೂ ಪ್ರಸಾದ ವಿತರಣೆ ನಡೆಯಿತು. ಬಳಿಕ ದೈವದ ಮಾರಿಕಳ ಪ್ರವೇಶ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭ ಪ್ರಮುಖರಾದ ಮುರುಳಿ ಭಟ್ ಕೀಲಾರು, ಕೆ.ಜಿ. ಗೋಪಾಕೃಷ್ಣ ಭಟ್, ಸಂಪಾಜೆ ಪಂಚಲಿAಗೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಸೂರ್ಯ ನಾರಾಯಣ ಭಟ್, ದೈವಸ್ಥಾನದ ಗೌರವಾಧ್ಯಕ್ಷ ಶಭರೀಶ್ ಕುದುಕುಳಿ, ಅಧ್ಯಕ್ಷ ಕೊರಗಪ್ಪ ಅರಮನೆತೋಟ, ಕಾರ್ಯದರ್ಶಿ ಕೃಷ್ಣ ಅರಮನೆತೋಟ, ಉಪ ಕಾರ್ಯದರ್ಶಿ ಚಂದ್ರಶೇಖರ ಅರಮನೆತೋಟ, ದೈವಸ್ಥಾನದ ಪೂಜಾರಿ ಪಕೀರಾ ಅಂಬಟಕಜೆ ಹಾಗೂ ನಾರಾಯಣ ಹೆಚ್.ಐ., ಖಜಾಂಜಿ ಮುರಳಿ ಹೆಚ್.ಕೆ., ಕೊಡಗು-ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಸಂಪಾಜೆ ಪಯಶ್ವಿನಿ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಾರಾಮ ಕಳಗಿ, ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೈವಸ್ಥಾದ ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಕೋಶಾಧಿಕಾರಿ ಬಿ.ಆರ್. ಪದ್ಮಯ್ಯ, ಮಾಜಿ ಅಧ್ಯಕ್ಷ ಶ್ರೀಧರ ಮಾದೆಪಾಲು, ಸಂಪಾಜೆ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿದ್ಕಾರ್, ಶ್ರೀ ವಿಷ್ಣು ಮಿತ್ರ ಬಳಗದ ಅಧ್ಯಕ್ಷ ಜಯಕುಮಾರ್, ಮಾಜಿ ಗೌರವಾಧ್ಯಕ್ಷರಾದ ಲಿಂಗಪ್ಪ ದೇವಜನ ಮತ್ತು ಮೋಹನ್ ಬಾಳೆಕಜೆ, ರೋಹಿತಾಶ್ವ ಕುದುಕುಳಿ, ವಿಕ್ರಾಂತ್ ಅರಮನೆತೋಟ, ಧನಂಜಯ ಮೂರ್ನಾಡು ಹಾಗೂ ಅರಮನೆತೋಟ ವಿಷ್ಣುಮೂರ್ತಿ ದೈವಸ್ಥಾನದ ಸದಸ್ಯರು, ಶ್ರೀ ವಿಷ್ಣು ಮಿತ್ರ ಬಳಗದ ಸದಸ್ಯರು, ಊರಿನ ಭಕ್ತಾದಿಗಳು ಹಾಜರಿದ್ದರು.