ಸೋಮವಾರಪೇಟೆ, ಮೇ ೧೪: ಕಳೆದ ಹಲವಾರು ತಿಂಗಳ ನಂತರ ಸೋಮವಾರಪೇಟೆ ಪೊಲೀಸರು ಫೀಲ್ಡ್ಗಿಳಿದಿದ್ದಾರೆ.
ಪ್ರಥಮ ಹಂತದಲ್ಲಿ ಬೇಕಾಬಿಟ್ಟಿ ಚಾಲನೆ, ಹೆಲ್ಮೆಟ್ ರಹಿತ ಪ್ರಯಾಣ, ತ್ರಿಬಲ್ ರೈಡಿಂಗ್‌ಗೆ ಬಿಸಿ ಮುಟ್ಟಿಸಿದ್ದು, ಚಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.
ನಿನ್ನೆಯಷ್ಟೇ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ತೆರಳಿ, ಪಟ್ಟಣದ ಪಾರ್ಕಿಂಗ್ ಅವ್ಯವಸ್ಥೆ, ಬೇಕಾ ಬಿಟ್ಟಿ ಚಾಲನೆಗೆ ಸಂಬAಧಿಸಿದAತೆ ಪೊಲೀಸ್ ಠಾಣಾಧಿಕಾರಿ ರಮೇಶ್‌ಕುಮಾರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದರು.
ಇಂದು ಅದರ ಫಲಿತಾಂಶ ಬಂದಿದ್ದು, ಬೆಳಿಗ್ಗೆಯೇ ಪೊಲೀಸರು ಪಟ್ಟಣದ ವಿವಿಧ ಭಾಗಗಳಲ್ಲಿ ಕಂಡು ಬಂದು, ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ಪ್ರಕರಣಗಳಿಗೆ ದಂಡ ವಿಧಿಸಿದರು.
ಸೋಮವಾರಪೇಟೆ ಪಟ್ಟಣದಲ್ಲಿ ಸಂಚಾರ ನಿಯಮ ಸುಸ್ಥಿತಿಗೆ ತರಲು ಪೊಲೀಸರು ಫೀಲ್ಡ್ಗಿಳಿದಿರುವುದು ಸಮಾಧಾನ ಮೂಡಿಸಿದೆ. ಅಪ್ರಾಪ್ತ ಬಾಲಕರು ಬೈಕ್ ಚಲಿಸುತ್ತಿರುವ ಪ್ರಕರಣಗಳು ಹೆಚ್ಚಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.
ಇದರೊಂದಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸೇವನೆಯಂತಹ ಪ್ರಕರಣಗಳು ಕಂಡುಬರುತ್ತಿದ್ದು, ಈ ಬಗ್ಗೆಯೂ ಸಮಿತಿ ವತಿಯಿಂದ ಪೊಲೀಸರ ಗಮನ ಸೆಳೆಯಲಾಗಿದೆ. ಇದರ ನಿಗ್ರಹಕ್ಕೂ ವಿಶೇಷ ಕಾರ್ಯಾಚರಣೆ ಅಗತ್ಯವಾಗಿದೆ ಎಂದು ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ.