ಕಾಂಗ್ರೆಸ್, ಬಜೆಟ್ನ ಶೇ. ೧೫ ರಷ್ಟು ಹಣ ಮುಸ್ಲಿಮರಿಗೆ ಹಂಚಿಕೆ ಮಾಡಲಿದೆ: ಮೋದಿ
ನಾಸಿಕ್, ಮೇ ೧೫: ಕಾಂಗ್ರೆಸ್ ತನ್ನ ಹಿಂದಿನ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರದ ಬಜೆಟ್ನ ಶೇ. ೧೫ ರಷ್ಟು ಹಣವನ್ನು ಹಂಚಿಕೆ ಮಾಡಲು ಬಯಸಿತ್ತು ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ಅಥವಾ ಉದ್ಯೋಗ ಮತ್ತು ಶಿಕ್ಷಣದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ಅವಕಾಶ ನೀಡುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ. ಇಂದು ಉತ್ತರ ಮಹಾರಾಷ್ಟçದ ನಾಸಿಕ್ ಜಿಲ್ಲೆಯ ಪಿಂಪಲ್ಗಾAವ್ ಬಸವಂತ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಧರ್ಮದ ಆಧಾರದ ಮೇಲೆ ಬಜೆಟ್ ಅನ್ನು ವಿಭಜಿಸುವುದು ಅಪಾಯಕಾರಿ ಎಂದು ಹೇಳಿದರು. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಉದ್ಯೋಗ ಮತ್ತು ಶಿಕ್ಷಣದಲ್ಲಿ ಧರ್ಮ ಆಧಾರಿತ ಮೀಸಲಾತಿಯನ್ನು ದೃಢವಾಗಿ ವಿರೋಧಿಸಿದ್ದರು ಎಂದು ಪ್ರಧಾನಿ ಮೋದಿ ತಿಳಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಟ್ಟು ಬಜೆಟ್ನಲ್ಲಿ ಶೇ. ೧೫ ರಷ್ಟು ಹಣವನ್ನು ಅಲ್ಪಸಂಖ್ಯಾತರಿಗೆ ಮೀಸಲಿಡಲು ಯೋಜನೆ ರೂಪಿಸಿತ್ತು ಎಂದು ಮೋದಿ ಆರೋಪಿಸಿದರು. ನಾನು (ಗುಜರಾತ್ನ) ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಈ ಪ್ರಸ್ತಾವನೆ ತಂದಿತ್ತು. ಬಿಜೆಪಿ ಈ ಕ್ರಮವನ್ನು ಬಲವಾಗಿ ವಿರೋಧಿಸಿತು ಮತ್ತು ಆದ್ದರಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್ ಈ ಪ್ರಸ್ತಾವನೆಯನ್ನು ಮತ್ತೆ ಜಾರಿಗೆ ತರಲು ಬಯಸಿದೆ ಎಂದು ಪ್ರಧಾನಿ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ನಾಶ : ರಾಹುಲ್ ಗಾಂಧಿ
ಬೋಲAಗಿರ್, ಮೇ ೧೫: ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ನಾಶಪಡಿಸಲಿದೆ ಮತ್ತು ಆದಿವಾಸಿಗಳು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಮೀಸಲಾತಿಯನ್ನು ರದ್ದುಗೊಳಿಸಲು ಬಯಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ. ಒಡಿಶಾದ ಬೋಲಂಗಿರ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುತ್ತದೆ ಮತ್ತು ದೇಶವನ್ನು ೨೨ ಬಿಲಿಯನೇರ್ಗಳು ಮುನ್ನಡೆಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. "ಬಿಜೆಪಿ ಈ ಪುಸ್ತಕವನ್ನು ಹರಿದು ಹಾಕಲು ಬಯಸುತ್ತಿದೆ. ಆದರೆ ನಾವು ಕಾಂಗ್ರೆಸ್ ಮತ್ತು ಭಾರತದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ" ಎಂದು ರಾಹುಲ್ ಗಾಂಧಿ ತಮ್ಮ ಕೈಯಲ್ಲಿರುವ ಸಂವಿಧಾನವನ್ನು ತೋರಿಸಿದರು. “ಬಿಜೆಪಿ ಗೆದ್ದರೆ ಮೀಸಲಾತಿಯನ್ನು ರದ್ದುಪಡಿಸಲಾಗುತ್ತದೆ, ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಲಾಗುತ್ತದೆ ಮತ್ತು ದೇಶವನ್ನು ೨೨ ಕೋಟ್ಯಾಧಿಪತಿಗಳು ಮುನ್ನಡೆಸುತ್ತಾರೆ. ಹೀಗಾಗಿ ಜನಪರ ಸರ್ಕಾರ ರಚನೆಯಾಗಬೇಕು’’ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಳಿದರು.
ಲಾರೆನ್ಸ್ ವಾಂಗ್ ಪ್ರಮಾಣ ವಚನ ಸ್ವೀಕಾರ
ಸಿಂಗಾಪುರ, ಮೇ ೧೫: ಅರ್ಥಶಾಸ್ತçಜ್ಞ ಲಾರೆನ್ಸ್ ವಾಂಗ್ ಅವರು ಸಿಂಗಾಪುರದ ನಾಲ್ಕನೇ ಪ್ರಧಾನ ಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ೭೨ ವರ್ಷದ ಲೀ ಹ್ಸಿಯೆನ್ ಲೂಂಗ್ ಅಧಿಕಾರ ತ್ಯಜಿಸಿದ ನಂತರ ಅವರ ಉತ್ತರಾಧಿಕಾರಿಯಾಗಿ ೫೧ ವರ್ಷದ ವಾಂಗ್ ಅಧಿಕಾರ ವಹಿಸಿಕೊಂಡರು. ಇಬ್ಬರೂ ಆಡಳಿತಾರೂಢ ಪೀಪಲ್ಸ್ ಆಕ್ಷನ್ ಪಾರ್ಟಿಗೆ ಸೇರಿದವರು. ಈ ಪಾರ್ಟಿ ಐದು ದಶಕಗಳಿಗೂ ಹೆಚ್ಚು ಕಾಲ ಸಿಂಗಾಪುರದ ಆರ್ಥಿಕ ಪ್ರಗತಿಯನ್ನು ನಡೆಸುತ್ತಿದೆ. ಉಪ ಪ್ರಧಾನಿಯಾಗಿದ್ದ ವಾಂಗ್ ಅವರು ಪ್ರಧಾನಿ ಮತ್ತು ಹಣಕಾಸು ಸಚಿವರಾಗಿ ನಾಲ್ಕನೇ ತಲೆಮಾರಿನ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಸಿಂಗಾಪುರದ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ವಾಂಗ್ಗೆ ಪ್ರಮಾಣ ವಚನ ಬೋಧಿಸಿದರು.
ಇಸ್ರೇಲ್ನಲ್ಲಿ ಯುದ್ಧ ಟ್ಯಾಂಕರ್ಗಳ
ದಾಳಿ: ಓರ್ವ ಭಾರತೀಯ ಅಧಿಕಾರಿ ಸಾವು
ಗಾಜಾ, ಮೇ ೧೫: ಇಸ್ರೇಲ್ನಲ್ಲಿ ಯುದ್ಧ ಟ್ಯಾಂಕರ್ಗಳ ದಾಳಿಯಲ್ಲಿ ಭಾರತೀಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಮಾಜಿ ಸೇನಾ ಅಧಿಕಾರಿ ಮೃತಪಟ್ಟಿರುವುದಕ್ಕೆ ವಿಶ್ವಸಂಸ್ಥೆ ಸಂತಾಪ ಸೂಚಿಸಿ ಕ್ಷಮೆ ಕೋರಿದೆ. ಯುದ್ಧಗ್ರಸ್ತ ಗಾಜಾದ ರಫಾದಲ್ಲಿ ಈ ಘಟನೆ ನಡೆದಿದ್ದು, ಇಸ್ರೇಲ್ನದ್ದು ಎನ್ನಲಾದ ಟ್ಯಾಂಕ್ನಿAದ ಸಿಡಿದಿರುವ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಕರ್ನಲ್ ವೈಭವ್ ಅನಿಲ್ (೪೬) ಮೃತಪಟ್ಟಿದ್ದು, ೨೦೨೨ ರಲ್ಲಿ ಅವಧಿಗೂ ಮುನ್ನವೇ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದರು. ಬಳಿಕ ಎರಡು ತಿಂಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಯುಎನ್ ಡಿಪಾರ್ಟ್ಮೆಂಟ್ ಆಫ್ ಸೇಫ್ಟಿ ಅಂಡ್ ಸೆಕ್ಯುರಿಟಿನಲ್ಲಿ ಭದ್ರತಾ ಸಮನ್ವಯ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ವೈಭವ್ ಅನಿಲ್ ಕಾಶ್ಮೀರದಲ್ಲಿ ೧೧ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ಗೆ ಕಮಾಂಡರ್ ಆಗಿದ್ದರು, ಕಳೆದ ವರ್ಷ ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ನಂತರ ವಿಶ್ವಸಂಸ್ಥೆಗೆ ಮೊದಲ ಅಂರ್ರಾಷ್ಟಿçÃಯ ಗಾಯಾಳು ಅಥವಾ ಸಾವನ್ನಪ್ಪಿರುವ ಮೊದಲ ಅಂರ್ರಾಷ್ಟಿçÃಯ ವ್ಯಕ್ತಿಯಾಗಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ, ಕ್ಷಮೆಯಾಚಿಸುತ್ತೇವೆ ಮತ್ತು ಭಾರತ ಸರ್ಕಾರ ಮತ್ತು ಜನರಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.