ಮುಳ್ಳೂರು, ಮೇ ೧೫: ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯದೆ ತೋಟದಲ್ಲಿ ಬೆಲೆ ಬಾಳುವ ಮರಗಳನ್ನು ಕಡಿದು ಮರದ ನಾಟಗಳನ್ನು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ಅಧಿಕಾರಿಗಳು ತೋಟದ ಮಾಲೀಕ ಸೇರಿದಂತೆ ಮರ ಸಾಗಾಟ ಮಾಡಲು ಸಹಕರಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹೊಸಗುತ್ತಿ ಗ್ರಾಮದ ಆದರ್ಶ ಎಂಬವರು ಹೊಸಳ್ಳಿಯಲ್ಲಿರುವ ತನ್ನ ತೋಟದಲ್ಲಿ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆದುಕೊಳ್ಳದೆ ತೇಗ, ತಡಸಲು, ಬಿಲ್ವಾರ ಮರಗಳನ್ನು ಕಡಿದು ನಂತರ ಮರದ ನಾಟಗಳನ್ನು ಸಾಗಾಟ ಮಾಡುವ ಸಲುವಾಗಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಬಳಿಯ ಕಾರ್ಗಲ್ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದರು. ಈ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅರಕಲಗೂಡು ಅರಣ್ಯ ವಲಯದ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರದ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಹೊಸಳ್ಳಿ ಹೊಸಗುತ್ತಿ ಗ್ರಾಮದವರಾದ ಆದರ್ಶ, ಕೆ.ಸಿ. ಕುಮಾರ್ ಮತ್ತು ಸಾಗಾಣಿಕೆಗೆ ಸಹಕರಿಸಿದ ಅರಕಲಗೂಡು ತಾಲೂಕಿನ ಮಲ್ಲಪ್ಪನಳ್ಳಿ ಗ್ರಾಮದ ಎಂ.ಪಿ.ನಾಗೇಶ್ ಅವರುಗಳ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮೊಕದ್ದಮೆ ದಾಖಲಿಸಿದ್ದಾರೆ. ಶನಿವಾರಸಂತೆ ಆರ್‌ಎಫ್‌ಒ ಗಾನಶ್ರೀ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಎಂ.ಜೆ. ಸೂರ್ಯ, ಚಂದ್ರಪ್ಪ ಬಣ್ಣಕಾರ್, ಎಂ.ಎಸ್. ಪುನೀತ್, ಸಿಬ್ಬಂದಿ ರಮೇಶ್ ಪಾಲ್ಗೊಂಡಿದ್ದರು.