ಗೋಣಿಕೊಪ್ಪ ವರದಿ, ಮೇ ೧೫ : ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಅಚ್ಚಪಂಡ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದುಕೊಂಡಿದ್ದು, ನೆರವಂಡ, ಚಿಮ್ಮಣಮಾಡ, ಬಲ್ಲಚಂಡ, ಕಾಣತಂಡ, ಗೀಜಿಗಂಡ, ಚೆಕ್ಕೇರ ಪ್ರೀ ಕ್ವಾರ್ಟರ್‌ಗೆ ಲಗ್ಗೆ ಇಟ್ಟವು.
ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಅಚ್ಚಪಂಡ ತಂಡವು ಚಿರಿಯಪಂಡವನ್ನು ೯೨ ರನ್‌ಗಳಿಂದ ಮಣಿಸಿತು. ಅಚ್ಚಪಂಡ ೨ ವಿಕೆಟ್ ಕಳೆದುಕೊಂಡು ೧೦೯ ರನ್ ಗುರು ನೀಡಿತು. ಚಿರಿಯಪಂಡ ೧೬ ರನ್‌ಗಳಿಗೆ ಸರ್ವ ಪತನಗೊಂಡಿತು. ಅಚ್ಚಪಂಡ ಅಯ್ಯಪ್ಪ, ಬೋಪಣ್ಣ ತಲಾ ೨ ವಿಕೆಟ್ ಪಡೆದರು.
ಪ್ರೀ ಕ್ವಾರ್ಟರ್‌ಗೆ : ನೆರವಂಡ ತಂಡ ಮೂಕೊಂಡವನ್ನು ೫ ವಿಕೆಟ್‌ಗಳಿಂದ ಮಣಿಸಿತು. ಮೂಕೊಂಡ ೮ ವಿಕೆಟ್ ನಷ್ಟಕ್ಕೆ ೫೦ ರನ್ ದಾಖಲಿಸಿತು. ನೆರವಂಡ ೫ ಓವರ್‌ಗಳಿಗೆ ೫ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ನೆರವಂಡ ಪೆಮ್ಮಯ್ಯ ೩೯ ರನ್ ಸಿಡಿಸಿದರು. ಮೂಕೊಂಡ ಮಾಚಯ್ಯ, ನೆರವಂಡ ಕವನ್ ಕಾವೇರಪ್ಪ, ನೆರವಂಡ ಪ್ರಶಾಂತ್ ತಲಾ ೨ ವಿಕೆಟ್ ಪಡೆದರು.
ಚಿಮ್ಮಣಮಾಡ ತಂಡವು ಬಲಿಷ್ಟ ಮಂಡುವAಡವನ್ನು ೭ ವಿಕೆಟ್‌ಗಳಿಂದ ಸೋಲಿಸಿತು. ಮಂಡುವAಡ ೪ ವಿಕೆಟ್ ನಷ್ಟಕ್ಕೆ ೫೩ ರನ್, ಚಿಮ್ಮಣಮಾಡ ೬.೫ ಓವರ್‌ಗಳಿಗೆ ೩ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು. ಮಂಡುವAಡ ದರ್ಶನ್ ೧೫, ಗಣೇಶ್ ೧೩ ರನ್, ಚಿಮ್ಮಣಮಾಡ ದರ್ಶನ್ ೨೧ ರನ್, ಸಜನ್ ಸೋಮಣ್ಣ ೧೮ ರನ್, ಭರತ್ ೧ ವಿಕೆಟ್, ಮಂಡುವAಡ ಹರ್ಷಿತ್ ೨ ವಿಕೆಟ್ ಪಡೆದರು.
ಬಲ್ಲಚಂಡಕ್ಕೆ ಕೊಟ್ಟಂಗಡ ವಿರುದ್ಧ ೩ ವಿಕೆಟ್‌ಗಳ ಜಯ ದೊರೆಯಿತು. ಕೊಟ್ಟಂಗಡ ೭ ವಿಕೆಟ್ ನಷ್ಟಕ್ಕೆ ೫೭ ರನ್ ಗುರಿ ನೀಡಿತು. ಬಲ್ಲಚಂಡ ೭ ವಿಕೆಟ್ ಕಳೆದುಕೊಂಡು ಗೆಲುವು ಪಡೆದುಕೊಂಡಿತು. ಕೊಟ್ಟಂಗಡ ಸೂರಜ್ ೧೬ ರನ್, ಬಲ್ಲಚಂಡ ಚಂದನ್ ಅಪ್ಪಯ್ಯ ೪ ವಿಕೆಟ್, ಬಲ್ಲಚಂಡ ವಿವೇಕ್, ಚೇತನ್ ತಲಾ ೧೯ ರನ್, ಕೊಟ್ಟಂಗಡ ರೋಶನ್ ೩ ವಿಕೆಟ್, ಮಧು ೨ ವಿಕೆಟ್ ಕಬಳಿಸಿದರು.
ಕಾಣತಂಡಕ್ಕೆ ಚಿಯಕ್‌ಪೂವಂಡ ವಿರುದ್ಧ ೭೨ ರನ್‌ಗಳ ಭರ್ಜರಿ ಗೆಲುವು ದೊರೆಯಿತು. ಕಾಣತಂಡ ೨ ವಿಕೆಟ್ ಕಳೆದುಕೊಂಡು ೧೧ ರನ್ ದಾಖಲಿಸಿತು. ಚಿಯಕ್‌ಪೂವಂಡ ೬ ವಿಕೆಟ್ ಕಳೆದುಕೊಂಡು ೪೩ ರನ್‌ಗಳಿಗೆ ಕುಸಿಯಿತು. ಕಾಣತಂಡ ಪ್ರಮೋದ್ ಕಾರ್ಯಪ್ಪ ೬೧, ಕಿಶನ್ ೪೭ ರನ್, ಚಿಯಕ್‌ಪೂವಂಡ ನಿರನ್ ೧೪ ರನ್, ಕಾಣತಂಡ ನರೇಶ್, ವಿಪನ್, ಯಕ್ಷಿನ್ ತಲಾ ೨ ವಿಕೆಟ್ ಪಡೆದರು.
ಗೀಜಿಗಂಡ ತಂಡಕ್ಕೆ ಅಲ್ಲಂಗಡ ವಿರುದ್ಧ ೭ ವಿಕೆಟ್‌ಗಳ ಗೆಲುವು ದೊರೆಯಿತು. ಅಲ್ಲಂಗಡ ೯ ವಿಕೆಟ್ ಕಳೆದುಕೊಂಡು ೪೧ ರನ್ ಗುರಿ ನೀಡಿತು. ಗೀಜಿಗಂಡ ೩ ವಿಕೆಟ್ ನಷ್ಟಕ್ಕೆ ೪.೪ ಓವರ್‌ಗಳಲ್ಲಿ ಪಂದ್ಯ ಮುಗಿಸಿತು. ಅಲ್ಲಂಗಡ ಸ್ವಾಗತ್ ೧೮ ಹಾಗೂ ೧ ವಿಕೆಟ್, ಗೀಜಿಗಂಡ ಸಂತೋಷ್, ದಿಲನ್ ತಲಾ ೩ ವಿಕೆಟ್ ಪಡೆದರು.
ಚೆಕ್ಕೇರ ತಂಡಕ್ಕೆ ಕೊಂಗAಡ ವಿರುದ್ಧ ೧೦ ವಿಕೆಟ್‌ಗಳ ಗೆಲುವು ದಕ್ಕಿತು. ಕೊಂಗAಡ ೬ ವಿಕೆಟ್ ನಷ್ಟಕ್ಕೆ ೫೫ ರನ್ ದಾಖಲಿಸಿತು. ಚೆಕ್ಕೇರ ೪ ಓವರ್‌ಗಳಲ್ಲಿ ಪಂದ್ಯ ಮುಗಿಸಿತು. ಚೆಕ್ಕೇರ ಕಾರ್ಯಪ್ಪ ೨೩, ಆಕರ್ಶ್ ೩೧ ರನ್‌ಗಳ ಸಿಡಿಲಿಬ್ಬರದ ಬ್ಯಾಟಿಂಗ್ ತಂಡಕ್ಕೆ ನೆರವಾಯಿತು. ಚೆಕ್ಕೇರ ಶಾನ್ ೪ ವಿಕೆಟ್ ಕಿತ್ತರು.
ಉತ್ತಮ ಪ್ರದರ್ಶನ ನೀಡಿದ ಮೂಕೊಂಡ ಮಾಚಯ್ಯ, ಮಂಡುವAಡ ದರ್ಶನ್, ಕೊಟ್ಟಂಗಡ ಸೂರಜ್, ಚಿಯಕ್‌ಪೂವಂಡ ನಿರನ್, ಅಲ್ಲಂಗಡ ಸ್ವಾಗತ್, ಕೊಂಗAಡ ಕಾರ್ಯಪ್ಪ, ಚಿರಿಯಪಂಡ ಸೌರಭ್ ಪಂದ್ಯ ಶ್ರೇಷ್ಠ ಗೌರವ ಪಡೆದರು.