ನಾಪೋಕ್ಲು, ಮೇ ೧೫: ಸಮೀಪದ ಕೊಳಕೇರಿ ಗ್ರಾಮದ ಕುಂಡ್ಯೋಳAಡ ಕುಟುಂಬಸ್ಥರ ಐನ್ ಮನೆಯಲ್ಲಿ ಕುಂಡ್ಯೋಳAಡ ಹಾಕಿ ಕಾರ್ನಿವಲ್‌ಗೆ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ಕುಂಡ್ಯೋಳAಡ ಕುಟುಂಬ ಸಣ್ಣ ಕುಟುಂಬವಾದರೂ ಅವರ ಸಾಧನೆ ದೊಡ್ಡದು. ಗಿನ್ನಿಸ್ ದಾಖಲೆಯೊಂದಿಗೆ ದೇಶವಿದೇಶಗಳಲ್ಲಿ ಕೌಟುಂಬಿಕ ಹಾಕಿಯ ಖ್ಯಾತಿ ಹಬ್ಬಿರುವುದು ಶ್ಲಾಘನೀಯ ಎಂದರು.

ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳನ್ನು ಜೊತೆಗೂಡಿಸಿ ಹಾಕಿ ಕೂರ್ಗ್, ಹಾಕಿ ಕರ್ನಾಟಕ, ಹಾಕಿ ಇಂಡಿಯಾ ಸೇರಿದಂತೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವಂತಹ ಕಾರ್ಯ ಮಾಡಿದ ಕುಂಡ್ಯೋಳAಡ ಕುಟುಂಬಸ್ಥರ ಕಾರ್ಯ ಪ್ರಶಂಸನೀಯ.

ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿ ಹಾಕಿ ಉತ್ಸವ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದದ್ದು ಇಡೀ ಕೊಡವ ಜನಾಂಗಕ್ಕೆ ಸಿಕ್ಕ ಗೌರವ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು. ಹಾಕಿ ಉತ್ಸವದ ಸಂಚಾಲಕ ದಿನೇಶ್ ಕಾರ್ಯಪ್ಪ ಮಾತನಾಡಿ, ಉತ್ಸವದ ಯಶಸ್ಸಿಗೆ ಸಹಕರಿಸಿದ ಸರ್ವರನ್ನು ಸ್ಮರಿಸಿದರು.

ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಿ ಗಿನ್ನಿಸ್ ದಾಖಲೆ ಮಾಡಿದ ಕುಂಡ್ಯೋಳAಡ ಕುಟುಂಬದವರಿಗೆ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿದ ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಹಾಕಿ ಆಟಗಾರರು ಕುಂಡ್ಯೋಳAಡ ಐನ್‌ಮನೆಯಲ್ಲಿ ಗೌರವವನ್ನು ಸಲ್ಲಿಸಿದರು. ಕುಟುಂಬದ ಪಟ್ಟೇದಾರ ಸುಬ್ಬಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭ ವಿಶ್ವಕಪ್ ಆಟಗಾರ ಕೂತಂಡ ಪೂಣಚ್ಚ, ಅಂತರರಾಷ್ಟಿçÃಯ ಹಾಕಿ ಆಟಗಾರ ಚಂದಪAಡ ಪ್ರಿನ್ಸ್ ಕರುಂಬಯ್ಯ, ಕರಿನೆರವಂಡ ಸೋಮಣ್ಣ, ಕುಲ್ಲೆಟೀರ ಉತ್ತಯ್ಯ, ರಾಷ್ಟಿçÃಯ ಹಾಕಿ ಆಟಗಾರರಾದ ಅರೆಯಡ ರವಿ ಅಯ್ಯಪ್ಪ, ಕರ್ತಮಾಡ ರಿಕ್ಕಿ ಗಣಪತಿ, ಕನ್ನಂಬೀರ ಪ್ರವೀಣ್, ಅಂಜಪರವAಡ ಕಾರ್ಯಪ್ಪ, ಅಂತರರಾಷ್ಟಿçÃಯ ತರಬೇತಿದಾರ ಬೊಳ್ಳೇಪಂಡ ಜೆ. ಕಾರ್ಯಪ್ಪ ಪಾಲ್ಗೊಂಡು ಮಾತನಾಡಿದರು.

ಹಾಕಿ ಉತ್ಸವ ನಡೆಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಟುಂಬದ ಪರವಾಗಿ ಪಟ್ಟೆದಾರ ಸುಬ್ಬಯ್ಯ ಅವರಿಗೆ ಹಾಕಿಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಕಿ ಸ್ಟಿಕ್ ನೀಡಿ ಗೌರವ ಸಮರ್ಪಿಸಿದರು.

ಹೇಮಾ ಪೂವಣ್ಣ ಪ್ರಾರ್ಥಿಸಿ, ರಮೇಶ್ ಮುದ್ದಯ್ಯ ಸ್ವಾಗತಿಸಿದರು. ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಮುತ್ತಪ್ಪ ವಂದಿಸಿದರು.

-ದುಗ್ಗಳ