ಪೊನ್ನಂಪೇಟೆ, ಮೇ ೧೫: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ನೂತನವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಸಂಸ್ಥೆಯ ನಾಲ್ವರು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಧ್ಯಕ್ಷತೆಯಲ್ಲಿ ವೀರಾಜಪೇಟೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಟ್ಟಮುಡಿ ಹಳೇ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡಿರುವ ಕೆ.ಎಂ.ಎ. ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಎಂ.ಎ ಸಂಘಟನಾ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ೩ನೇ ಬಾರಿಗೆ ಆಯ್ಕೆಗೊಂಡಿರುವ ಮತ್ತು ಐಮಂಗಲ (ಕೊಮ್ಮೆತೋಡು) ಬದ್ರಿಯ ಜುಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ಕೋಳುಮಂಡ ರಫೀಕ್ ಮತ್ತು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕೆ.ಎಂ.ಎ ನಿರ್ದೇಶಕ ಕುಂಡAಡ ಎ. ರಜಾಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ನಾಲ್ವರನ್ನು ಸನ್ಮಾನಿಸಿ ಮಾತನಾಡಿದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಸಾರ್ವಜನಿಕ ಬದುಕಿನಲ್ಲಿ ಕಪ್ಪುಚುಕ್ಕೆ ಮೂಡಿಸದೆ ಜನಸೇವೆ ಮಾಡುವುದು ಎಲ್ಲಾ ಸಾಮಾಜಿಕ ಕಾರ್ಯಕರ್ತರ ಮೊದಲ ಧ್ಯೇಯವಾಗಿರಬೇಕು ಎಂದರು.

ಹರಿಶ್ಚAದ್ರ ಹಂಸ, ಮೀತಲತಂಡ ಇಸ್ಮಾಯಿಲ್, ಕೋಳುಮಂಡ ರಫೀಕ್ ಮತ್ತು ಕುಂಡAಡ ರಜಾಕ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಕರತೊರೆರ ಕೆ. ಮುಸ್ತಫ, ಮಂಡೆAಡ ಮೊಯ್ದು, ಆಲೀರ ಬಿ. ಅಬ್ದುಲ್ಲಾ, ಪೊಯಕೆರ ಎಸ್. ಮೊಹಮ್ಮದ್ ರಫೀಕ್, ದುದ್ದಿಯಂಡ ಹೆಚ್. ಮೊಯ್ದು, ಕುಪ್ಪೋಡಂಡ ಎ. ರಶೀದ್, ಪುದಿಯಾಣೆರ ಹನೀಫ್, ಆಲೀರ ಹೆಚ್.ಅಬ್ದುಲ್ ಲತೀಫ್, ಪುಡಿಯಂಡ ಹನೀಫ್, ಆಲೀರ ಎಂ. ರಶೀದ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು.