ವೀರಾಜಪೇಟೆ, ಮೇ ೧೫: ವೀರಾಜಪೇಟೆ ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ನೂತನ ಅಧ್ಯಕ್ಷರಾಗಿ ಜಾನ್ಸನ್ ಡಿಸೋಜ ಆಯ್ಕೆ ಯಾಗಿದ್ದಾರೆ. ಇತ್ತೀಚೆಗೆ ವೀರಾಜಪೇಟೆಯ ಸಂತ ಅನ್ನಮ್ಮ ದ್ವಿಶತಮಾನೋತ್ಸವದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ವೀರಾಜಪೇಟೆಯ ಜಾನ್ಸನ್ ಡಿಸೋಜ ಅವರು ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ವೀರಾಜಪೇಟೆ ತೆಲುಗರ ಬೀದಿಯ ಜೋಸೆಫ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಯಾಗಿ ಡ್ಯಾನಿಯಲ್ ಸಾಲ್ಡಾನ, ಖಜಾಂಚಿಯಾಗಿ ಅಗಸ್ಟಿನ್ ಸೇವಿಯರ್, ಕ್ರೀಡಾ ಕಾರ್ಯದರ್ಶಿ ಯಾಗಿ ಬಿಲ್ಟನ್ ವಾಜ್, ಸಹ ಕ್ರೀಡಾ ಕಾರ್ಯದರ್ಶಿಯಾಗಿ ಲೆನೋಕ್ಸ್ ಆಂತೋಣಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ರೆಫೆಲ್ ಪ್ರಿನ್ಸ್ ಅವರು ಆಯ್ಕೆಯಾದರು.

ಈ ಸಂದರ್ಭದಲ್ಲಿ ಕ್ರೆöÊಸ್ತ ಧರ್ಮದ ಸಂಘದ ಹಿರಿಯ ಸದಸ್ಯರಾದ ಮರ್ವಿಬ್ ಲೋಬೊ, ಜೂಡಿ ವಾಸ್, ರಾಬರ್ಟ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅಗಸ್ಟೀನ್ ಬೆನ್ನಿ, ಬ್ಲೆöÊಸಿ ಸೇರಿದಂತೆ ಇತರರು ಇದ್ದರು.