ಕ್ಯಾನ್ಸರ್ ಜಾಗೃತಿ, ತಪಾಸಣೆ
ಮಡಿಕೇರಿ, ಮೇ ೧೫: ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ರೋಟರಿ ಮಡಿಕೇರಿ ವತಿಯಿಂದ ಪ್ರಾಸ್ಟೇಟ್ ಹಾಗೂ ಬ್ರೆಸ್ಟ್ ಕ್ಯಾನ್ಸರ್ ಕುರಿತು ಜಾಗೃತಿ ಹಾಗೂ ತಪಾಸಣಾ ಶಿಬಿರವನ್ನು ತಾ.೧೯ ರಂದು ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ ೯:೩೦ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ತಪಾಸಣಾ ಶಿಬಿರ ನಡೆಯಲಿದ್ದು ಡಾ.ಎಸ್.ಕೆ. ರಘುನಾಥ್, ಡಾ.ಬೆಳ್ಳಿಯಪ್ಪ, ಡಾ.ರವಿ, ಡಾ.ಸುನಿತಾ ಹಾಗೂ ಡಾ.ಸಾಗರಿಕ ನಿತ್ಯಾನಂದ್ ಅವರುಗಳು ತಪಾಸಣೆ ನಡೆಸಲಿದ್ದಾರೆ ಎಂದು ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಫೌಂಡೇಷನ್ ಟ್ರಸ್ಟಿ ಕರ್ನಲ್ ಸಿ.ಎ. ಅಯ್ಯಪ್ಪ ಹಾಗೂ ರೋಟರಿ ಮಡಿಕೇರಿ ಅಧ್ಯಕ್ಷ ಅಚ್ಚಯ್ಯ ಇವರುಗಳು ತಿಳಿಸಿದ್ದಾರೆ.