ಮಡಿಕೇರಿ, ಮೇ ೧೫: ಕುಶಾಲನಗರ ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ಮದೆನಾಡು ನಿವಾಸಿ ಯೋಗಿತಾ ಎಂಬವರಿಗೆ ಶ್ರವಣ ಸಾಧನಾ ಯಂತ್ರ ಕೊಡುಗೆ ನೀಡಲಾಯಿತು.
ಮಡಿಕೇರಿಯ ಕಾವೇರಿ ಹಿಯರಿಂಗ್ ಕ್ಲಿನಿಕ್ನಲ್ಲಿ ಶ್ರವಣದೋಷವುಳ್ಳ ಯೋಗಿತಾ ಅವರಿಗೆ ಇನ್ನರ್ವ್ಹೀಲ್ನ ಅಧ್ಯಕ್ಷೆ ನೇಹಾ ಜಗದೀಶ್, ಕಾರ್ಯದರ್ಶಿ ಜಾಸ್ಮಿನ್ ಪ್ರಕಾಶ್, ಉಪಾಧ್ಯಕ್ಷೆ ಚಿತ್ರಾ ರಮೇಶ್ ಅವರ ಸಮ್ಮುಖದಲ್ಲಿ ಶ್ರವಣ ಸಾಧನ ಯಂತ್ರ ವಿತರಿಸಲಾಯಿತು.