ಗೋಣಿಕೊಪ್ಪ ವರದಿ, ಮೇ ೧೬ : ಅರಮಣಮಾಡ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯ ಪುರುಷರಲ್ಲಿ ೮ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದರೆ, ಮಹಿಳೆಯರ ಸೆಮಿಫೈನಲ್ ಮತ್ತು ೩ ನೇ ಸ್ಥಾನಕ್ಕೆ ಪೈಪೋಟಿ ತಾ. ೧೭ ರಂದು ಇಂದು ನಡೆಯಲಿದೆ.

ಚಿಮ್ಮಣಮಾಡ ತಂಡವು ಮಣವಟ್ಟೀರವನ್ನು ಸೂಪರ್ ಓವರ್‌ನಲ್ಲಿ ಮಣಿಸಿತು. ಮಣವಟ್ಟೀರ ಸೂಪರ್ ಓವರ್‌ನಲ್ಲಿ ೧ ವಿಕೆಟ್ ನಷ್ಟಕ್ಕೆ ೯ ರನ್ ಗುರಿ ನೀಡಿತು. ಚಿಮ್ಮಣಮಾಡ ೪ ಚೆಂಡಿನಲ್ಲಿ ವಿಕೆಟ್ ನಷ್ಟವಿಲ್ಲದೆ ಗೆದ್ದು ಬೀಗಿತು. ನಿಗದಿತ ಓವರ್‌ನಲ್ಲಿ ಚಿಮ್ಮಣಮಾಡ ೭ ವಿಕೆಟ್ ಕಳೆದುಕೊಂಡು ನೀಡಿದ ೫೫ ರನ್ ಗುರಿ ಬೆನ್ನತ್ತಿದ ಮಣವಟ್ಟೀರ ೭ ವಿಕೆಟ್ ಕಳೆದುಕೊಂಡು ಸಮಬಲ ಸಾಧನೆ ಮಾಡಿತು. ಮಣವಟ್ಟೀರ ದೀಪಕ್, ಗಗನ್ ತಲಾ ೨ ವಿಕೆಟ್, ಚಿಮ್ಮಣಮಾಡ ಭವನ್ ೩ ವಿಕೆಟ್, ಧೃತಿ ೧೬ ರನ್, ಮಣವಟ್ಟೀರ ಸದಾ ೧೫ ರನ್ ಹೊಡೆದರು.

ತಂಬುಕುತ್ತೀರಕ್ಕೆ ಪಂದ್ಯAಡ ವಿರುದ್ದ ೭೦ ರನ್‌ಗಳ ಗೆಲುವು ದೊರೆಯಿತು. ತಂಬುಕುತ್ತೀರ ೪ ವಿಕೆಟ್ ಕಳೆದುಕೊಂಡು ೧೦೫ ರನ್ ದಾಖಲಿಸಿತು. ಪಂದ್ಯAಡ ೩೫ ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ತಂಬುಕುತ್ತಿರ ಸುಖೇಶ್ ೫೬ ರನ್, ದೀಪಕ್ ೪ ವಿಕೆಟ್ ಪಡೆದರು.

ಕಳಕಂಡ ತಂಡವು ಮಾಚೇಟೀರ ತಂಡವನ್ನು ೬ ವಿಕೆಟ್‌ಗಳಿಂದ ಮಣಿಸಿತು. ಮಾಚೇಟೀರ ೮ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೩೬ ರನ್ ದಾಖಲಿಸಿತು. ಕಳಕಂಡ ೪ ವಿಕೆಟ್ ಕಳೆದುಕೊಂಡು ೬ ಓವರ್‌ಗಳಲ್ಲಿ ಗೆಲುವು ಪಡೆಯಿತು. ಮಾಚೇಟೀರ ಭರತ್ ೯ ರನ್, ಟೆಶೈನ್ ಸುಬ್ಬಯ್ಯ ೨ ವಿಕೆಟ್, ಕಳಕಂಡ ಮಧು ೪ ವಿಕೆಟ್, ಬಬ್ಲಿ ೧೪ ರನ್ ಗಳಿಸಿದರು.

ಮಾಳೇಟೀರ (ಕೆದಮುಳ್ಳೂರು) ಮಚ್ಚಮಾಡ ವಿರುದ್ದ ೧೩ ರನ್‌ಗಳ ಗೆಲುವು ದೊರೆಯಿತು. ಮಾಳೇಟೀರ ೪ ವಿಕೆಟ್ ನಷ್ಟಕ್ಕೆ ೧೧೦ ರನ್ ಗಳಿಸಿತು. ಮಚ್ಚಮಡ ೪ ವಿಕೆಟ್ ಕಳೆದುಕೊಂಡು ೯೭ ರನ್ ದಾಖಲಿಸಿತು. ಮಾಳೇಟೀರ ರಾಣೆ ಕರುಂಬಯ್ಯ ೪೬ ರನ್, ಕಾಳಪ್ಪ ೩ ವಿಕೆಟ್, ಮಚ್ಚಮಾಡ ಬೋಪಣ್ಣ ೩೯ ರನ್, ಸೂರಜ್ ೨ ವಿಕೆಟ್ ಕಬಳಿಸಿದರು.

ಕಾಣತಂಡ ಬಲ್ಲಚಂಡವನ್ನು ೫೨ ರನ್‌ಗಳಿಂದ ಸೋಲಿಸಿತು. ಕಾಣತಂಡ ೪ ವಿಕೆಟ್ ಕಳೆದುಕೊಂಡು ೯೨ ರನ್ ಪೇರಿಸಿತು. ಬಲ್ಲಚಂಡ ೫ ವಿಕೆಟ್ ನಷ್ಟಕ್ಕೆ ೪೦ ರನ್ ಗಳಿಸಿ ಸೋಲಿಗೆ ಶರಣಾಯಿತು. ಕಾಣತಂಡ ಪ್ರಮೋದ್ ೩೫ ರನ್, ವಿಪನ್ ೨೨, ಬಲ್ಲಚಂಡ ಪ್ರಮೋದ್ ಪೂವಯ್ಯ ೯ ರನ್, ಕಾಣತಂಡ ಯಕ್ಷಿನ್ ಬೆಳ್ಯಪ್ಪ ೨ ವಿಕೆಟ್ ಕಬಳಿಸಿದರು.

ನೆರವಂಡಕ್ಕೆ ಕುಂದತ್ ಮಾಳೇಟೀರ ವಿರುದ್ದ ೩೫ ರನ್‌ಗಳ ಗೆಲುವು ಸಿಕ್ಕಿತು. ನೆರವಂಡ ೩ ವಿಕೆಟ್ ನಷ್ಟಕ್ಕೆ ೮೬ ರನ್ ದಾಖಲಿಸಿತು. ಕುಂದತ್ ಮಾಳೇಟೀರ ೯ ವಿಕೆಟ್ ಕಳೆದುಕೊಂಡು ೫೦ ರನ್‌ಗಳಿಗೆ ಕುಸಿಯಿತು. ನೆರವಂಡ ಪ್ರಶಾಂತ್ ಸೋಮಣ್ಣ ೩೨ ರನ್, ಅರುಣ್ ೨೭ ರನ್ ದಾಖಲಿಸಿ, ೪ ವಿಕೆಟ್ ಪಡೆದರು. ಮಾಳೇಟೀರ ಕವಿಶ್ ೧ ವಿಕೆಟ್ ಪಡೆದು, ತಂಡಕ್ಕೆ ೧೦ ರನ್ ಕಲೆ ಹಾಕಿದರು.

ಚೆಕ್ಕೇರ ತಂಡಕ್ಕೆ ಗೀಜಿಗಂಡ ವಿರುದ್ದ ೫೬ ರನ್ ಗಳ ಗೆಲುವು ಸಿಕ್ಕಿತು. ಚೆಕ್ಕೇರ ೪ ವಿಕೆಟ್ ನಷ್ಟಕ್ಕೆ ೧೦೬ ರನ್, ಗೀಜಿಗಂಡ ೪ ವಿಕೆಟ್ ಕಳೆದುಕೊಂಡು ೫೦ ರನ್ ಗಳಿಸಿತು. ಚೆಕ್ಕೇರ ಕಾರ್ಯಪ್ಪ ೪೬ ರನ್, ಆಕರ್ಶ್ ೩೯ ರನ್, ಗೀಜಿಗಂಡ ದರ್ಶನ್ ೩ ವಿಕೆಟ್, ಚೆಕ್ಕೇರ ಪೂವಣ್ಣ ೨ ವಿಕೆಟ್ ಪಡೆದರು. ಮಚ್ಚಮಾಡ ಬೋಪಣ್ಣ, ಮಾಚೇಟೀರ ಭರತ್, ಮಣವಟ್ಟೀರ ಸದಾ, ಪಂದ್ಯAಡ ತಮ್ಮಯ್ಯ, ಬಲ್ಲಚಂಡ ಪ್ರಜ್ವಲ್ ಪೂವಯ್ಯ, ಕುಂದತ್ ಮಾಳೇಟೀರ ಕವಿಶ್, ಗೀಜಿಗÀಂಡ ದರ್ಶನ್ ಪಂದ್ಯ ಶ್ರೇಷ್ಠ ಗೌರವ ಪಡೆದರು.