ಮಡಿಕೇರಿ, ಮೇ ೧೬: ಕರ್ನಾಟಕ ಬೆಳೆಗಾರ ಒಕ್ಕೂಟದ ನಿಯೋಗವು ಬೆಂಗಳೂರಿನಲ್ಲಿ ಕಾಫಿ ಮಂಡಳಿ ಕಚೇರಿಯಲ್ಲಿ ಸಭೆ ನಡೆಸಿ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿತು.

ಕೃಷಿ ಪರಿಕರ ಸೇರಿದಂತೆ ಟ್ರಾö್ಯಕ್ಟರ್, ಟಿಲ್ಲರ್, ಮೋಟಾರ್ ಖರೀದಿ, ಕೆರೆ, ಗೋದಾಮು, ಕಣ ನಿರ್ಮಾಣಕ್ಕೆ ಶೇಕಡ ೫೦ ರ ಸಹಾಯಧನದಡಿಯಲ್ಲಿ ಅನುದಾನವನ್ನು ನೀಡಲು ಕೇಂದ್ರದ ಗಮನ ಸೆಳೆಯಬೇಕು. ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಈಗಾಗಲೇ ಕಾಳುಮೆಣಸು ಇದ್ದು, ಅದೇ ರೀತಿ ಕಾಫಿ ಬೆಳೆಗೂ ಸಹ ಹವಾಮಾನಾಧಾರಿತ ಬೆಳೆ ವಿಮೆಯನ್ನು ಸೇರ್ಪಡೆಗೊಳಿಸಬೇಕು, ಈಗಾಗಲೇ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಇದಕ್ಕಾಗಿ ಅರಣ್ಯ ಇಲಾಖೆಯ ಸಂಪರ್ಕ ಇಟ್ಟುಕೊಂಡು ಶೇಕಡ ೯೦ರ ಸಹಾಯಧನದಡಿಯಲ್ಲಿ ಸೋಲಾರ್ ಬೇಲಿ ನಿರ್ಮಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಒಕ್ಕೂಟದ ಸದಸ್ಯರು ಒತ್ತಾಯಿಸಿದರು.

ಕಾಫಿ ಬೆಳೆಯ ಖರ್ಚು ವೆಚ್ಚಗಳ (ಅosಣ oಜಿ ಛಿuಟಣivಚಿಣioಟಿ) ಬಗ್ಗೆ ಈ ಹಿಂದೆ ಇದ್ದಿದ್ದನ್ನು, ಇವತ್ತಿನ ನೈಜಸ್ಥಿತಿಗೆ ತಕ್ಕಂತೆ ಮಾರ್ಪಾಡು ಮಾಡಬೇಕು, ಹೊಸ ತಳಿಯ ಕಾಫಿಯನ್ನು ಇಂದಿನ ವಯೋಮಾನಕ್ಕೆ ಹೊಂದುಕೊಳ್ಳುವAತೆ ಪ್ರಯೋಗ ಮಾಡಿ ಬೆಳೆಗಾರರಿಗೆ ಪರಿಚಯಿಸಬೇಕೆಂದು ಕೋರಿದ ಸದಸ್ಯರು ಕಾರ್ಬನ್ ಕ್ರೆಡಿಟ್ ವಿಚಾರವಾಗಿ ಗಂಭೀರವಾಗಿ ಚರ್ಚಿಸಿದರು.

ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಎಂ. ನಾಗರಾಜು, ನಿರ್ದೇಶಕರುಗಳಾದ ಬಿ.ಜಿ. ಯತೀಶ್ ಹಾಗೂ ಕೆ.ಹೆಚ್. ಬಸವರಾಜು ಇದ್ದರು.