ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳು ನೀರುಪಾಲು
ಹಾಸನ, ಮೇ ೧೬: ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಈಜಲು ಹೋಗಿದ್ದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಹಾಸನದ ಮುತ್ತಿಗೆ ಗ್ರಾಮದ ದೊರೆಸ್ವಾಮಿ ಅವರ ಪುತ್ರ ಜೀವನ್ (೧೩), ಸತೀಶ್ ಅವರ ಪುತ್ರ ಸಾತ್ವಿಕ್ (೧೧), ಚಂದ್ರು ಅವರ ಪುತ್ರ ವಿಶ್ವಸ್ (೧೨) ಮತ್ತು ಸೋಮಶೇಖರ್ ಅವರ ಪುತ್ರ ಪೃಥ್ವಿ (೧೨) ಎಂದು ಗುರುತಿಸಲಾಗಿದೆ. ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಮತ್ತೊಬ್ಬ ಸ್ನೇಹಿತ ಚಿರಾಗ್ ದಡ ತಲುಪುವಲ್ಲಿ ಯಶಸ್ವಿಯಾದ್ದಾನೆ. ಬಿಸಿಲ ತಾಪ ತಣಿಸಲು ಈಜಾಡಲು ತಿಮ್ಮನಹಳ್ಳಿಯ ಕೆರೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಜೀವನ್ ನೀರಿನಲ್ಲಿ ಮುಳುಗಿದನು ಮತ್ತು ಅವನನ್ನು ರಕ್ಷಿಸುವಾಗ ಉಳಿದವರೂ ಮುಳುಗಿದರು. ಗ್ರಾಮಸ್ಥರೊಬ್ಬರು ಮೃತದೇಹವೊಂದು ಕೊಚ್ಚಿ ಹೋಗುತ್ತಿರುವುದನ್ನು ಕಂಡಾಗ ಈ ಘಟನೆ ಬೆಳಕಿಗೆ ಬಂದಿದೆ.
ತಲೆಮರೆಸಿಕೊAಡಿದ್ದ ಪ್ರಮುಖ ಆರೋಪಿ ಬಂಧಿಸಿದ ಎನ್ಐಎ
ಮೈಸೂರು, ಮೇ ೧೬: ಹೈದರಾಬಾದ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬAಧಿಸಿದAತೆ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್ಐಎ) ಘೋಷಿತ ಅಪರಾಧಿ ನೂರುದ್ದೀನ್ ಅಲಿಯಾಸ್ ರಫಿ ಎಂಬಾತನನ್ನು ಬಂದಿಸಿದೆ. ನೂರುದ್ದೀನ್ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ, ಈತನನ್ನು ಮೈಸೂರಿನ ರಾಜೀವ್ ನಗರದಲ್ಲಿ ಬಂದಿಸಲಾಗಿದೆ. ನೂರುದ್ದೀನ್ ಮೇಲೆ ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಖಚಿತ ಆಧಾರದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ರಾಜೀವ್ ನಗರದ ಆತನ ಮನೆಯಲ್ಲೇ ಹೆಡೆಮುರಿ ಕಟ್ಟಿದ್ದಾರೆ. ಮನೆಯಲ್ಲಿದ್ದ ಆತನ ಮೊಬೈಲ್ ಫೋನ್, ಲ್ಯಾಪ್ ಟಾಪ್, ಪೆನ್ಡ್ರೈವ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನೂರುದ್ದೀನ್ ೨೦೨೩ರ ಆಗಸ್ಟ್ನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ, ಚೆನ್ನೈನ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ನೂರುದ್ದೀನ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದೀಗ ನೂರುದ್ದೀನ್ ಎ???ಎ ತಂಡದ ಕೈಗೆ ಸಿಕ್ಕಿಬಿದ್ದಿದ್ದಾನೆ. ನೂರುದ್ದೀನ್ ಭಾರತೀಯ ಕರೆನ್ಸಿ ನೋಟುಗಳನ್ನು ಬಳಸಿಕೊಂಡು ದೇಶವಿರೋಧಿ ಬೇಹುಗಾರಿಕೆ ಚಟುವಟಿಕೆಗಳಿಗೆ ಹಣಕಾಸು ಒದಗಿಸುವಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ.
ಪಿಒಕೆಗೆ ಲಕ್ಷö್ಮಣ್ ರೇಖೆ ಇಲ್ಲ : ಜೈಶಂಕರ್
ನವದೆಹಲಿ, ಮೇ ೧೬: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿದ್ದು, ದೇಶಕ್ಕೆ ಮರಳಿ ಸೇರ್ಪಡೆಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗುರುವಾರ ಪುನರುಚ್ಚರಿಸಿದ್ದಾರೆ. ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದಕ್ಕೆ ಯಾವುದೇ ಲಕ್ಷö್ಮಣ ರೇಖೆ ಇಲ್ಲ. ಯಾರದೋ ದೌರ್ಬಲ್ಯ ಮತ್ತು ತಪ್ಪಿನಿಂದ ಅದು ತಾತ್ಕಾಲಿಕವಾಗಿ ನಮ್ಮಿಂದ ದೂರವಾಯಿತು. ನಾವು ಒಂದು ದಿನ ಪಿಒಕೆ ಅನ್ನು ಮರಳಿ ಪಡೆಯುತ್ತೇವೆ ಎಂಬ ಸಂಸದೀಯ ನಿರ್ಣಯ ಇದೆ ಎಂದು ಜೈಶಂಕರ್ ನಾಸಿಕ್ನಲ್ಲಿ ಹೇಳಿದ್ದಾರೆ. ಪಿಒಕೆಯಲ್ಲಿನ ಜನ, ನಿಯಂತ್ರಣ ರೇಖೆಯಾದ್ಯಂತ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತಿದ್ದಾರೆ. ವಿಷಯ ಹೀಗಿರುವುದರಿಂದ ಅಲ್ಲಿನ ಜನ ನಾವು ಏಕೆ ಬಳಲುತ್ತಿದ್ದೇವೆ ಮತ್ತು ನಾವು ಈ ರೀತಿಯ ದುರ್ವರ್ತನೆಯನ್ನು ಏಕೆ ಒಪ್ಪಿಕೊಳ್ಳಬೇಕು ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ ಎಂದು ವಿದೇಶಾಂಗ ಸಚಿವರು ತಿಳಿಸಿದರು. ಮೇ ೧೦ ರಿಂದ ಮುಜಫರಾಬಾದ್ನಲ್ಲಿ ಹಣದುಬ್ಬರ ಮತ್ತು ಹೆಚ್ಚುತ್ತಿರುವ ವಿದ್ಯುತ್ ವೆಚ್ಚದ ವಿರುದ್ಧ ಜನರು ಬೀದಿಗಿಳಿದಿದ್ದರಿಂದ ಅಶಾಂತಿ ಮತ್ತು ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೇ ವೇಳೆ, ಜೈಶಂಕರ್ ಅವರು ಕೆನಡಾದೊಂದಿಗೆ ರಾಜತಾಂತ್ರಿಕವಾಗಿ ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು, ಅಲ್ಲಿ ಸರ್ಕಾರವು ಖಲಿಸ್ತಾನಿ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಸ್ವಾತಿ ಮಲಿವಾಲ್ ಪ್ರಕರಣ: ಕೇಜ್ರಿವಾಲ್ ಆಪ್ತನಿಗೆ ಸಮನ್ಸ್
ನವದೆಹಲಿ, ಮೇ ೧೬: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ವಿರುದ್ಧದ ಹಲ್ಲೆ ಪ್ರಕರಣದಲ್ಲಿ ಕೇಜ್ರಿವಾಲ್ ಆಪ್ತನಿಗೆ ರಾಷ್ಟಿçÃಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಸಮನ್ಸ್ ಜಾರಿಗೊಳಿಸಿದೆ. ವಿಭವ್ ಕುಮಾರ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದು, ಆತನನ್ನು ವಿಚಾರಣೆಗೆ ಶುಕ್ರವಾರದಂದು ಬೆಳಿಗ್ಗೆ ೧೧ ಗಂಟೆಗೆ ಹಾಜರಾಗಲು ಸೂಚಿಸಲಾಗಿದೆ. ರಾಷ್ಟಿçÃಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಮಾಜಿ ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂಬ ಶೀರ್ಷಿಕೆಯ ಮಾಧ್ಯಮ ಪೋಸ್ಟ್ನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಮಾಧ್ಯಮ ವರದಿಯಲ್ಲಿ ಸ್ವಾತಿ ಮಾಲಿವಾಲ್ ಮುಖ್ಯಮಂತ್ರಿಯ ನಿವಾಸದಲ್ಲಿ ವಿಭವ್ ತಮ್ಮ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಈ ಆರೋಪಗಳ ಹಿನ್ನೆಲೆಯಲ್ಲಿ, ಆಯೋಗ ನೋಟೀಸ್ ಜಾರಿಗೊಳಿಸಿದೆ. ನೋಟೀಸ್ನ್ನು ಅನುಸರಿಸಲು ವಿಫಲವಾದರೆ ಅಗತ್ಯವೆಂದು ಪರಿಗಣಿಸಿದ ಮುಂದಿನ ಕ್ರಮಗಳಿಗೆ ದಾರಿ ಮಾಡಿಕೊಡಲಿದೆ ಎಂದು ಆಯೋಗ ಹೇಳಿದೆ. ಸ್ವಾತಿ ಮಲಿವಾಲ್ ಅಧಿಕೃತವಾಗಿ ಇನ್ನಷ್ಟೇ ದೂರು ದಾಖಲಿಸಬೇಕಿದೆ.