ಮನುಷ್ಯನಿಗೆ ಹಲವು ಮಾಧ್ಯಮ ಸೇವೆಗಳು ಇಂದು ಅನಿವಾರ್ಯ ಎನ್ನಿಸಿಬಿಟ್ಟಿದೆ. ಆ ಸೇವೆಗಳಿಲ್ಲದೇ ಅವರ ದೈನಂದಿನ ಜೀವನವೇ ಸಾಧ್ಯವಿಲ್ಲ. ಅಂತಹ ಅನಿವಾರ್ಯ ಸೇವೆಗಳಲ್ಲಿ ದೂರ ಸಂಪರ್ಕ ಮಾಧ್ಯಮವು ಪ್ರಮುಖವಾದುದು. ಮನುಷ್ಯ ಜೀವನದ ಕ್ಷಣ, ಕ್ಷಣವು ದೂರ ಸಂಪರ್ಕ ಸೇವೆ ಅಗತ್ಯವಿದೆ. ಆತ ವ್ಯಾಪಾರ ಮಾಡುತ್ತಿರಲಿ, ಮಾನವನ ಸಂಪರ್ಕಗಳಿಗೇ ಆಗಲಿ, ಮಾಹಿತಿ ವಿನಿಮಯಕ್ಕಾಗಲಿ ದೂರವಾಣಿ, ಇಂಟರ್‌ನೆಟ್, ಮೊಬೈಲ್ ಫೋನ್‌ಗಳು, ಅಂಚೆ ಮೊದಲಾದ ಮಾಧ್ಯಮಗಳಿವೆ. ಆದರೆ ಇವೆಲ್ಲಕ್ಕಿಂತಲೂ ಮೊದಲು ಬಳಕೆಯಲ್ಲಿದ್ದದ್ದು ದೂರವಾಣಿ (ಟೆಲಿಫೋನ್) ಅಥವಾ ಅಂಚೆ ಇವೆ ಪ್ರಮುಖ ಮಾಧ್ಯಮವಾಗಿದ್ದವು.

ಗ್ರಹಾಂಬೆಲ್‌ನು ೧೮೪೭ ರಲ್ಲಿ ಅಮೇರಿಕಾದ ಬಾಸ್ಟರ್ ನಗರದಲ್ಲಿ ಜನಿಸಿದನು. ಇವನು ಕಿವುಡ - ಮೂಕರ ಶಾಲೆಯಲ್ಲಿ ಪ್ರಾಧ್ಯಾಪಕನಾಗಿದ್ದ. ಇವನ ಉದ್ದೇಶ ಕಿವುಟ, ಮೂಕರಿಗೆ ಕಿವಿ ಕೇಳುವಂತೆ ಮಾಡುವುದಾಗಿತ್ತು. ಮನುಷ್ಯನ ಕಿವಿ ಯಾವ ರೀತಿ ಕೆಲಸ ಮಾಡುತ್ತದೆಂದು ತಿಳಿದುಕೊಂಡು ಕಂಪನಗಳ ಮೂಲಕ ಧ್ವನಿಯ ತರಂಗಗಳು ಕಿವಿಯನ್ನು ಸೇರುತ್ತವೆಂದು ತಿಳಿದು ಬಿಡುವಿನ ವೇಳೆಯಲ್ಲಿ ವಿದ್ಯುತ್ತಿಗೆ ಸಂಬAಧಿಸಿದ ಪ್ರಯೋಗ ಮಾಡುತ್ತಿದ್ದನು. ಇವನು ಪ್ರೇರಿತ ವಿದ್ಯುತ್ತನ್ನು ಬಳಸಿ ಕಂಪನವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಿ ಮೊದಲ ದೂರವಾಣಿಯನ್ನು ತಯಾರಿಸಿದನು.

ಇಂತಹ ನಿರಂತರ ಪರಿಶ್ರಮದಿಂದ ದೂರವಾಣಿಯನ್ನು ಕಂಡು ಹಿಡಿದು ಜಗತ್ತಿಗೆ ಪ್ರಚುರ ಪಡಿಸಿದನು. ದೂರವಾಣಿಯ ಜನಕನಾದ ಗ್ರಾಹಂಬೆಲ್ ೧೯೨೨ ರಲ್ಲಿ ತೀರಿ ಕೊಂಡನು. ದೂರವಾಣಿ ಸಂಪರ್ಕ ಜಾಲ ಇಂದು ಜಗತ್ತಿನಾದ್ಯಂತ ಹರಡಿದೆ. ಇಂದು ಮನುಷ್ಯನ ದೈನಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ವಾಣಿಜ್ಯ ಉದ್ಯಮಗಳಲ್ಲಿ ನೂರಾರು ಮೈಲುಗಳಾಚೆ ಇರುವವರೊಡನೆ ಇಲ್ಲೇ ಕುಳಿತು ಮಾತ ನಾಡಲು ಜನಕನಾದ ಗ್ರಾಹಂಬೆಲ್ ೧೯೨೨ ರಲ್ಲಿ ತೀರಿ ಕೊಂಡನು. ದೂರವಾಣಿ ಸಂಪರ್ಕ ಜಾಲ ಇಂದು ಜಗತ್ತಿನಾದ್ಯಂತ ಹರಡಿದೆ. ಇಂದು ಮನುಷ್ಯನ ದೈನಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ವಾಣಿಜ್ಯ ಉದ್ಯಮಗಳಲ್ಲಿ ನೂರಾರು ಮೈಲುಗಳಾಚೆ ಇರುವವರೊಡನೆ ಇಲ್ಲೇ ಕುಳಿತು ಮಾತ ನಾಡಲು ಸಾಧ್ಯ ವಾಗಿದೆ. ಅಮೂಲ್ಯ ಸಮಯ, ಹಣ ಉಳಿತಾಯ ವಾಗಿದೆ. ಇಡೀ ಜಗತ್ತನ್ನೇ ಒಂದು ಗೂಡಿಸಿದ ಕೀರ್ತಿ ಗ್ರಹಾಂಬೆಲ್‌ಗೆ ಸಲ್ಲುತ್ತದೆ.

ಇಂತಹ ಅಮೂಲ್ಯ ಕೊಡುಗೆ ನೀಡಿದ ಗ್ರಹಾಂಬೆಲ್‌ಗೆ ಇಡೀ ಲೋಕವೇ ಇಂದು ಋಣಿಯಾಗಿದೆ. ದೂರವಾಣಿಗಳಲ್ಲಿ ಮಾತನಾಡುವ ವ್ಯಕ್ತಿಯ ಮುಖ ಕಾಣಿಸುವ ವ್ಯವಸ್ಥೆಯು ಇದೆ. ಅಷ್ಟೇ ಅಲ್ಲದೇ ಉತ್ತಮಪಡಿಸಿದ ದೂರವಾಣಿ ಸಂಪರ್ಕ ಇಂದು ಮೊಬೈಲ್ ಎನ್ನಿಸಿ, ಇಂದು ಹಣದ ವ್ಯವಹಾರವು ಮೊಬೈಲ್‌ನಲ್ಲೇ ನಡೆಯುವುದು. ಮನೋರಂಜನೆ, ಮಾಹಿತಿ ವಿನಿಮಯ, ಜ್ಞಾನ ಸಂಪಾದನೆ, ಲೆಕ್ಕಾಚಾರ ಹಲವಾರು ವಿಷಯಗಳು, ಅನುಕೂಲಗಳು ಉತ್ತಮಪಡಿಸಿದ ದೂರ ಸಂಪರ್ಕ ಸೇವೆಯಲ್ಲಿದ್ದು, ಕ್ರಾಂತಿಯೇ ನಡೆದು ಹೋಗಿದೆ. ಇಂದು ದೂರ ಸಂಪರ್ಕ ಸೇವೆ ಪ್ರತಿಯೊಬ್ಬರ ಬಳಿಯಿದ್ದು, ಅದು ಅವಶ್ಯಕವಾದ ಜೀವನ ಭಾಗವೇ ಆಗಿ ಹೋಗಿದೆ.ಈ ಬದಲಾವಣೆಗಳೇ ದೇಶ - ದೇಶಗಳನ್ನು ಬೆಸೆಯುವ ಕೆಲಸ ಮಾಡುತ್ತಿವೆ.

ದೂರ ಸಂಪರ್ಕ ವ್ಯವಸ್ಥೆಯಲ್ಲಿ ಹೆಚ್ಚಿನ ಅವಿಷ್ಕಾರ ಗಳುಂಟಾಗಿದೆ. ಮೊಬೈಲುಗಳು ಕೈಗೆಟುಕುವ ಬೆಲೆಯಲ್ಲಿ ದೊರಕುತ್ತಿರುವುದು ಸಾಧನೆಯ ಕೈಗನ್ನಡಿ ಯಾಗಿದೆ. ದೂರ ಸಂಪರ್ಕ ಸೇವೆ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.

- ಹರೀಶ್ ಸರಳಾಯ, ಮಡಿಕೇರಿ.