ಕುಶಾಲನಗರ, ಮೇ ೧೬: ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ರಾಜ್ಯ ಗೃಹಮಂತ್ರಿ ಜಿ. ಪರಮೇಶ್ವರ್ ಅವರನ್ನು ಕೊಡಗಿನ ಗಡಿಭಾಗ ಕುಶಾಲನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.

ಕುಶಾಲನಗರ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಸಚಿವರನ್ನು ಕುಶಾಲನಗರ ಕೊಪ್ಪ ಗಡಿ ಭಾಗದಲ್ಲಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಈ ಸಂದರ್ಭ ಸಚಿವರೊಂದಿಗೆ ಕ್ಷೇತ್ರ ಶಾಸಕ ಡಾ ಮಂತರ್ ಗೌಡ, ಸ್ಥಳೀಯ ಪ್ರಮುಖರಾದ ಕೆ.ಪಿ. ಚಂದ್ರಕಲಾ, ಮಂಜುನಾಥ್ ಗುಂಡೂರಾವ್, ನಟೇಶ್ ಗೌಡ, ಸ್ಥಳೀಯ ಪುರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಇದ್ದರು.

ಜಿಲ್ಲೆಗೆ ಆಗಮಿಸಿದ ಗೃಹ ಸಚಿವ ಜಿ.ಪರಮೇಶ್ವರ ಅÀವರನ್ನು ಸುಂಟಿಕೊಪ್ಪ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು. ಈ ಸಂದರ್ಭ ಶಾÀಸಕ ಮಂತರ್ ಗೌಡ, ನಗರ ಅಧ್ಯಕ್ಷ ರಫೀಕ್ ಖಾನ್, ಅಲ್ಪಸಂಖ್ಯಾತ ರಾಜ್ಯ ಸಮಿತಿ ಸಲಹೆಗಾರ ಚೊಟ್ಟೇರ ಕಾಳಯ್ಯ, ಪಂಚಾಯಿತಿ ಮಾಜಿ ಅಧ್ಯಕ್ಷ ಕರೀಂ, ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎ. ವಸಂತ, ಕಾಲೇಜು ಅಭಿವೃದ್ಧಿ ಸಮಿತಿಯ ಮರಿಯಾ ವಾಸ್, ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ, ಸದಸ್ಯ ಪಿ.ಎಫ್. ಸಭಾಸ್ಟಿನ್, ಆಲಿಕುಟ್ಟಿ, ಸಬ್ಬೀರ್, ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್. ರೋಸ್ಮೇರಿ ರಾಡ್ರಿಗಸ್ ಇತರರು ಇದ್ದರು. ಕಾಂಗ್ರೆಸ್ ಹಿರಿಯ ಮುಖಂಡ, ಉದ್ಯಮಿ ಬಿ.ಜಿ. ಮಿಟ್ಟು ಚಂಗಪ್ಪ ಅವರ ನಿವಾಸಕ್ಕೆ ಇಂದು ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಉಭಯಕುಶಲೋಪರಿ ನಡೆಸಿದರು. ಕುಶಾಲನಗರದ ನಿವಾಸಕ್ಕೆ ಸಚಿವರು ತೆರಳಿದ್ದು, ಇವರೊಂದಿಗೆ ಶಾಸಕ ಡಾ. ಮಂತರ್ ಗೌಡ, ನಂದಿನೆರವAಡ ಮಧು, ಮತ್ತಿತರರು ಹಾಜರಿದ್ದರು.